Advertisement

ಮೇ 22ಕ್ಕೆ ಮಕ್ಕಳ ಐಸಿಯು ಘಟಕ ಉದ್ಘಾಟನೆ

12:43 PM May 21, 2022 | Team Udayavani |

ಕಾರ್ಕಳ: ಜಗತ್ತನ್ನೇ ತಲ್ಲಣಗೊಳಿಸಿದ ಕೊರೊನಾ ಸೋಂಕು ಕಾರ್ಕಳ ಜನತೆಯನ್ನು ಬಹಳಷ್ಟು ಕಾಡಿತ್ತು. ಇದೇ ಸಂದರ್ಭ ಇಲ್ಲಿನ ತಾಲೂಕು ಆಸ್ಪತ್ರೆಯಲ್ಲಿ ತೆರೆಯಲಾಗುತ್ತಿರುವ ಮಕ್ಕಳ ಐಸಿಯು ಘಟಕ ಸಿದ್ಧಗೊಂಡಿದ್ದು ಇದೀಗ ಮೇ 22ಕ್ಕೆ ಉದ್ಘಾಟನೆಗೊಳ್ಳಲಿದೆ.

Advertisement

ಉಡುಪಿ ನಿರ್ಮಿತಿ ಕೇಂದ್ರದ ಸಿಎಸ್‌ಆರ್‌ ಫ‌ಂಡ್‌ 40 ಲಕ್ಷ ರೂ. ಹಾಗೂ ಅದಾನಿ ಗ್ರೂಪ್ಸ್‌ ಸಿಎಸ್‌ಆರ್‌ ಫ‌ಂಡ್‌ 68 ಲಕ್ಷ ರೂ. ಬಳಸಿಕೊಂಡು ಸುಮಾರು 1.8 ಕೋ.ರೂ. ವೆಚ್ಚದಲ್ಲಿ ಮಕ್ಕಳ ಐಸಿಯು ಕೇಂದ್ರ ಸಿದ್ಧಪಡಿಸಲಾಗಿದೆ. 10 ಬೆಡ್‌ ಗಳ ಮಕ್ಕಳ ಐಸಿಯು ಘಟಕದ ಸಿವಿಲ್‌ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರದ ವತಿಯಿಂದ ನಡೆಸಲಾಗಿದ್ದು, ಉಳಿ ದಂತೆ ಐಸಿಯು ಘಟಕಕ್ಕೆ ಬೆಡ್‌ ಇನ್ನಿತರ ವ್ಯವಸ್ಥೆಗಳು ಅದಾನಿ ಗ್ರೂಪ್ಸ್‌ ಅನುದಾನದಿಂದ ಹೊಂದಿಸಲಾಗಿದೆ.

ಮಕ್ಕಳ ಎಮೆರ್ಜೆನ್ಸಿ ಐಸಿಯು ಬೆಡ್‌ನ‌ ಸಿವಿಲ್‌ ಕೆಲಸ, ಘಟಕಗಳ ಪಾರ್ಟಿಸನ್‌ ಮುಂತಾದ ಕೆಲಸಗಳು ಪೂರ್ಣವಾಗಿವೆ. ಐಸಿಯುಗೆ ವೆಂಟಿಲೇಶನ್‌, ಬೆಡ್‌, ಫಾರ್ಮಾಸಿಸ್‌, ಶೌಚಾಲಯ, ಆಕ್ಸಿಜನ್‌ ಪೈಪ್‌ಲೈನ್‌, ಕರ್ಟನ್ಸ್‌ ಅಳವಡಿಕೆ ಇದೆಲ್ಲವೂ ಸರಕಾರದ ವತಿಯಿಂದ ಒದಗಿಸಲಾಗಿದೆ. ಸಂಭವನೀಯ ಮೂರನೇ ಕೊರೊನಾ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯ ಜತೆಗೆ ಮಕ್ಕಳ ಐಸಿಯು ಬೆಡ್‌ ಹೊಂದುವ ಬಗ್ಗೆ ಸರಕಾರ ನಿರ್ಧರಿಸಿತ್ತು. ಮಕ್ಕಳ ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸಲು ಸಿ.ಎಂ ಸೂಚಿಸಿದ್ದರು.

ಅದರಂತೆ ವಿವಿಧ ಫ‌ಂಡ್‌ಗಳ ನೆರವು ಪಡೆದು ಮಕ್ಕಳ ಐಸಿಯು ಬೆಡ್‌ ಅನ್ನು ಉಡುಪಿ ಜಿಲ್ಲೆಯ ಮೂರು ತಾ| ಕೇಂದ್ರಗಳಲ್ಲಿ ತೆರೆಯಲಾಗಿದೆ.

1.25 ಕೋ.ರೂ. ತುರ್ತು ನಿಗಾ

Advertisement

ಘಟಕ ತಾಲೂಕು ಆಸ್ಪತ್ರೆಯಲ್ಲೆ ತುರ್ತು ನಿಗಾ ಘಟಕ ಕೂಡ ತೆರೆಯಲಾಗಿದ್ದು ರಾಜ್ಯ ಸರಕಾರದ 1.25 ಕೋ.ರೂ. ಅನುದಾನ ದಲ್ಲಿ 12 ಬೆಡ್‌ಗಳ ತೀವ್ರ ನಿಗಾ ಘಟಕ ಕೂಡ ಮೇ 22ರಂದು ಉದ್ಘಾಟನೆಗೊಳ್ಳಲಿದೆ.

ಮಕ್ಕಳ ಆರೋಗ್ಯದ ಮೇಲೆ ವಿಶೇಷ ಕಾಳಜಿ

ವಾತ್ಸಲ್ಯ ಹೆಸರಿನಲ್ಲಿ 15 ವರ್ಷದೊಳ ಗಿನ ಮಕ್ಕಳ ಮ್ಕಕಳ ಆರೋಗ್ಯ ತಪಾಸಣೆ ಕಾರ್ಕಳದಲ್ಲಿ ನಡೆದಿತ್ತು. 250 ಅಂಗನವಾಡಿ ಹಾಗೂ 220 ಸರಕಾರಿ ಶಾಲೆಗಳಲ್ಲಿ ಖಾಸಗಿ ಶಾಲಾ ಮಕ್ಕಳನ್ನು ಸೇರಿಸಿ 40 ಸಾವಿರಕ್ಕೂ ಅಧಿಕ ಮಕ್ಕಳ ಆರೋಗ್ಯ ತಪಾಸಣೆ ಗುರಿ ಹೊಂದಿ ಸುಮಾರು 25 ಸಾವಿರಕ್ಕೂ ಅಧಿಕ ಮಕ್ಕಳ ಆರೋಗ್ಯ ತಪಾಸಣೆಗೆ ಒಳಪಡಿಸಿ ಆವಶ್ಯಕ ಮಕ್ಕಳಿಗೆ ಚಿಕಿತ್ಸೆ, ಅಪೌಷ್ಟಿಕತೆಯಿಂದ ಬಳಲು ತ್ತಿರುವ ಮಕ್ಕಳಿಗೆ ಪೌಷ್ಟಿಕಾಂಶವುಳ್ಳ ಆಹಾರ ಕಿಟ್‌ ವಿತರಿಸಿ ಮಕ್ಕಳ ಆರೋಗ್ಯದ ಮೇಲೆ ವಿಶೇಷ ಕಾಳಜಿ ವಹಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next