Advertisement

ಮಕ್ಕಳ ಹಕ್ಕುಗಳ ಜಾಗೃತಿ ಸಪ್ತಾಹ ಉದ್ಘಾಟನೆ

02:44 PM Nov 15, 2019 | Suhan S |

ದೊಡ್ಡಬಳ್ಳಾಪುರ; ದೇಶದಲ್ಲಿ ಇಂದಿಗೂ ಗಣನೀಯ ಸಂಖ್ಯೆಯಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ವರದಿಯಾಗುತ್ತಿದ್ದು, ಸಮಾಜದ ಅತ್ಯಂತ ಕೆಳಸ್ತರದಲ್ಲಿ ಒತ್ತಾಯಪೂರ್ವಕವಾಗಿ, ಕಾನೂನು ಬಾಹಿರವಾಗಿ ದುಡಿಯುತ್ತಿರುವ ಮಕ್ಕಳ ರಕ್ಷಣೆಗೂ ನೀಡಬೇಕಿದೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಆರ್‌.ನಟೇಶ್‌ ತಿಳಿಸಿದರು.

Advertisement

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಧಿಕಾರ, ಮಕ್ಕಳ ಸಹಾಯವಾಣಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸಹಯೋಗದಲ್ಲಿ ಇಲ್ಲಿನ ಶ್ರೀದೇವರಾಜ ಅರಸ್‌ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ಮಕ್ಕಳ ದಿನಾಚರಣೆ-2019, ಚೈಲ್ಡ್ ಲೈನ್ಸೇ  ದೋಸ್ತಿ  ಜಿಲ್ಲಾ ಮಕ್ಕಳ ಹಕ್ಕುಗಳ ಜಾಗೃತಿ  ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಮಕ್ಕಳ ಹಕ್ಕುಗಳ ರಕ್ಷಣೆಗೆ ಸಾಂವಿಧಾನಿಕ ನಿಯಮಾವಳಿಗಳ ಪಾಲನೆ ಅಗತ್ಯವಾಗಿದೆ. ಉತ್ತಮ ಸಮಾಜ ನಿರ್ಮಾಣಕ್ಕಾಗಿ ಅಸುರಕ್ಷಿತ ವಲಯದ ಮಕ್ಕಳ ರಕ್ಷಣೆ ಅತ್ಯಗತ್ಯ. ಮುಕ್ತ ಅಭಿಪ್ರಾಯಗಳ ವಿನಿಮಯ ಪ್ರಯತ್ನ ಅತ್ಯಗತ್ಯವಾಗಿದ್ದು, ಎಲ್ಲ ಮಕ್ಕಳಿಗೂ ಸಾಂವಿಧಾನಿಕವಾಗಿ ಶಿಕ್ಷಣ, ಸಾಮಾಜಿಕ ನ್ಯಾಯ, ಸಾಂಸ್ಕೃತಿಕ ಅವಕಾಶಗಳು ದೊರೆಯಬೇಕು.

ಇವುಗಳಿಂದ ತಡೆಯುವ ಅಥವಾ ವಂಚಿಸುವ ಪ್ರಕರಣಗಳು ನಡೆದರೆ ಅದು ಶಿಕ್ಷಾರ್ಹ. ಅವಕಾಶ ಮತ್ತು ಸೌಲಭ್ಯ ವಂಚಿತ ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದ ಅವರು, ಹಲವು ಸಂದರ್ಭದಲ್ಲಿ ಸಮಾಜದಿಂದ ವಂಚನೆಗೊಳಗಾದ ಮಕ್ಕಳು ಭವಿಷ್ಯದಲ್ಲಿ ಸಮಾಜ ಕಂಟಕ ಶಕ್ತಿಗಳಾಗಿ ಬೆಳೆಯುವ ಸಾಧ್ಯತೆಗಳಿರುತ್ತವೆ. ಅದನ್ನು ನಿಗ್ರಹಿಸುವ ನಿಟ್ಟಿನಲ್ಲಿ ಸಮಾನ ಅವಕಾಶಗಳು ಅಗತ್ಯ ಎಂದರು.

ಸಹಾಯವಾಣಿ ನೆರವು ಪಡೆಯಿರಿ: ವಿವೇಚನಾ ಬದ್ದವಾಗಿ ಕಾನೂನುಗಳನ್ನು ಬಳಕೆ ಮಾಡಿಕೊಳ್ಳಬೇಕು. ಸೂಕ್ಷ್ಮಒಳನೋಟಗಳೊಂದಿಗೆ ಸ್ಪಂದಿಸುವ ಕಾನೂನುಗಳನ್ನು ಪಾಲನೆ ಮಾಡಬೇಕಾದ ಅನಿವಾರ್ಯತೆ ಇದೆ. ಕಾನೂನು ಪ್ರಕಾರ ತಂದೆ-ತಾಯಿ ಇದ್ದರೂ, ಅವರು ಅಗತ್ಯ ಕಾಳಜಿ ವಹಿಸದೇ ಹೋದಾಗ ಮಕ್ಕಳ ರಕ್ಷಣಾ ಘಟಕಕ್ಕೆ ದೂರು ನೀಡಬಹುದು. ಅಂತಹ ಮಕ್ಕಳನ್ನು ರಕ್ಷಿಸಿ ಅಗತ್ಯ ನೆರವನ್ನೂ ಒದಗಿಸುವ ಅವಕಾಶ ಇದೆ. ಯಾವುದೇ ದೌರ್ಜನ್ಯ ಇತ್ಯಾದಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಹಾಯವಾಣಿ 1098ಕ್ಕೆ ಕರೆ ಮಾಡಬಹುದು ಎಂದರು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರಾಮು ಜೋಗಿಹಳ್ಳಿ ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆ ಎಲ್ಲ ಇಲಾಖೆಗಳ ಜವಾಬ್ದಾರಿ. ಆದರೆ ಈ ವಿಚಾರ ಬಂದಾಗ ಕೆಲ ಆಯ್ದ ಇಲಾಖೆಗಳು ಕಾಳಜಿ ತೋರುವುದನ್ನು ಬಿಟ್ಟರೆ ಉಳಿದ ಹಲವು ಇಲಾಖೆಗಳು ಈ ಬಗ್ಗೆ ಕನಿಷ್ಠ ಕಾಳಜಿಯನ್ನೂ ಹೊಂದಿಲ್ಲ. ಮಕ್ಕಳ ವಿಚಾರದಲ್ಲಿ ಅನಾಥ ಎಂಬ ಪದ ಬಳಕೆ ಬಗ್ಗೆ ಆಕ್ಷೇಪವಿದೆ. ಕಾನೂನಿನ ಪ್ರಕಾರ ಯಾರೂ ಅನಾಥರಲ್ಲ. ತಂದೆ-ತಾಯಿ ಇಲ್ಲದಿರುವ ಮಕ್ಕಳಿಗೆ ಸಮಾಜವೇ ತಂದೆ- ತಾಯಿಯಾಗಿರುತ್ತದೆ ಎಂದರು.

Advertisement

ಕಾರ್ಯಕ್ರಮಕ್ಕೆ ಚಾಲನೆ ನೀಡಿದಶ್ರೀದೇವರಾಜ ಅರಸ್‌ ಶಿಕ್ಷಣ ಸಂಸ್ಥೆ ನಿರ್ದೇಶಕ ಜೆ.ರಾಜೇಂದ್ರ, ಮಕ್ಕಳನ್ನು ಅಸುರಕ್ಷಿತ ಪ್ರದೇಶಗಳಿಂದ ರಕ್ಷಿಸಿ ಸುಭದ್ರ ಬದುಕನ್ನು ನೀಡುವುದು ಎಲ್ಲರ ಕರ್ತವ್ಯವಾಗಬೇಕು. ದೇಶ ಸ್ವಾತಂತ್ರ್ಯ ಪಡೆದು 72 ವರ್ಷಗಳಾದರೂ ಎಲ್ಲ ಮಕ್ಕಳು ಸಮರ್ಥನೀಯ ಹಾಗೂ ಸಮಾನ ಅವಕಾಶದ ಬದುಕನ್ನು ಪಡೆಯುವುದು ಸಾಧ್ಯವಾಗಿಲ್ಲ ಎಂಬುದು ವಿಷಾದನೀಯ ಎಂದರು.

ಶ್ರೀ ದೇವರಾಜ ಅರಸ್‌ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಪ್ರಾಂಶು ಪಾಲ .ಕೆ.ಆರ್‌.ರವಿಕಿರಣ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆಯ ಮಕ್ಕಳ ಸಹಾಯವಾಣಿ ಉಪಕೇಂದ್ರದ ನಿರ್ದೇಶಕಿ ಅಮಲಿ ನಾಯ್ಕ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೆ„ಟಿ ಯೋಜನಾ ನಿರ್ದೇಶಕ ಸುಬ್ಬರಾವ್‌, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸೋಮಶೇಖರ್‌, ಶಿಶು ಅಭಿವೃದ್ದಿ ಯೋಜನಾಧಿಕಾರಿ ಅನಿತಾ ಲಕ್ಷ್ಮೀ ಮಕ್ಕಳ ಸಹಾಯವಾಣಿ ಕೋಲಾಬ್‌ ಸಂಸ್ಥೆ ನಿರ್ದೇಶಕ ಗೋಪಿನಾಥ್‌,ಜಿಲ್ಲಾ ಸಂಯೋಜಕ ಎಸ್‌.ಪಿ.ಮಂಜುನಾಥ್‌, ಸಂಯೋಜಕ ಶ್ರೀನಿವಾಸ್‌, ದಿನೇಶ್‌, ಪ್ರೌ ಢಶಾಲೆ ಮುಖ್ಯಶಿಕ್ಷಕ ಜಿಯಾವುಲ್ಲಾಖಾನ್‌ ಮತ್ತಿತರರು ಪಾಲ್ಗೊಂಡಿದ್ದರು. ಅತಿಥಿಗಳಿಗೆ ಮಕ್ಕಳು ಚೈಲ್ಡ್ ಲೈನ್  ಸೇ ದೋಸ್ತಿ ಬರಹದ ಸಂಕಲ್ಪ ಕಂಕಣ ತೊಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next