Advertisement
ರವಿವಾರ ನಗರದ ಐವಾನ್-ಎ-ಶಾಹಿ ರಸ್ತೆಯಲ್ಲಿರುವ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ ಕಚೇರಿ ಆವರಣದಲ್ಲಿ 2.55ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ “ಅರಿವಿನ ಮನೆ’ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
Related Articles
Advertisement
ಮಂಡಳಿ ಇತಿಹಾಸದಲ್ಲಿ ಈ ವರ್ಷ 3000 ಕೋಟಿ ರೂ. ಅನುದಾನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದಾರೆ. ಕೆ.ಕೆ.ಆರ್.ಡಿ.ಬಿ ಮತ್ತು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘ ಪರಸ್ಪರ ಸಮನ್ವಯತೆಯಿಂದ ಈ ಭಾಗದ ಅಭಿವೃದ್ಧಿಗೆ ಕಾರ್ಯನಿರ್ವಹಿಸುತ್ತಿದೆ. ಬಸವರಾಜ ಪಾಟೀಲ ಸೇಡಂ ಮಾರ್ಗದರ್ಶನದಲ್ಲಿ ಇದೇ ಸೆಪ್ಟೆಂಬರ್ 17 ರಂದು ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ವಿಜೃಂಭಣೆಯಿಂದಆಯೋಜಿಸಲಾಗುತ್ತಿದೆ ಎಂದರು. ವಿವಿಧ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಡಾ|ಪಿ.ಎಸ್.ಶಂಕರ, ಜಗನ್ನಾಥ ಬಸವತೀರ್ಥಪ್ಪ ಸಜ್ಜನ್, ಡಾ|ಶುಭಾಂಗಿ, ವೇಣುಗೋಪಾಲ ಹೇರೂರು, ಎ.ಕೆ.ರಾಮೇಶ್ವರ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರು ಸನ್ಮಾನಿಸಿದರು. ಇದಲ್ಲದೆ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘವು ಕೃಷಿ-2050 ವಿಜನ್ ಕರಡು ಡಾಕ್ಯುಮೆಂಟ್‌ನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀಡಲಾಯಿತು. ಶಾಸಕರಾದ ಡಾ| ಅವಿನಾಶ ಉಮೇಶ ಜಾಧವ, ವಿಧಾನ ಪರಿಷತ್ ಸದಸ್ಯರಾದ ಶಶೀಲ ಜಿ. ನಮೋಶಿ, ಡಾ| ಬಿ.ಜಿ.ಪಾಟೀಲ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಕ್ರೇಡಲ್ ಅಧ್ಯಕ್ಷ ಚಂದ್ರಕಾಂತ ಜಿ. ಪಾಟೀಲ , ಸಂಘದ ಅಡಳಿತ ಮಂಡಳಿ ನಿರ್ದೇಶಕರಾದ ವಿ.ಎಂ.ಭೂಸನೂರಮಠ, ವಿ.ಶಾಂತರೆಡ್ಡಿ, ರೇವಣಸಿದ್ಧ ಜಾಲಾದಿ, ಪ್ರಭುದೇವ ಕಪಗಲ್, ಮಂಜುಳಾ ಡೊಳ್ಳೆ, ಕು.ದುರ್ಗನಾ ಬೇಗಂ, ತಿಪ್ಪಣ್ಣರೆಡ್ಡಿ ಕೋಲಿ, ಶ್ರೀನಿವಾಸ ನಂದಪೂರ, ಪ್ರಭುರಾಜ ಸಿದ್ಧರಾಮಪ್ಪ, ನೀಲಕಂಠ ಇಲೇರಿ, ಜಿಲ್ಲಾ ಧಿಕಾರಿ ಯಶವಂತ ವಿ. ಗುರುಕರ್, ಕ.ಕ.ಪ್ರ.ಅ. ಮಂಡಳಿ ಕಾರ್ಯದರ್ಶಿ ಆರ್.ವೆಂಕಟೇಶ ಕುಮಾರ, ಜಿಲ್ಲಾ ಪಂಚಾಯತ್ ಸಿಇಒ ಡಾ| ಗಿರೀಶ್ ಡಿ. ಬದೋಲೆ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಕ.ಕ.ಮಾ.ಸಂ. ಕೃ ಹಾಗೂ ಸಾಂ. ಸಂಘದ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರೆಡ್ಡಿ ಸೇರಿದಂತೆ ನಿರ್ದೇಶಕರುಗಳು ಮತ್ತಿತರು ಇದ್ದರು. ಕ.ಕ.ಮಾ.ಸಂ.ಕೃ ಹಾಗೂ ಸಾಂ. ಸಂಘದ ಕಾರ್ಯದರ್ಶಿ ಭೀಮಾಶಂಕರ ತೆಗ್ಗೆಳ್ಳಿ ಸ್ವಾಗತಿಸಿದರು. ಮಂಡಳಿಯ ಪ್ರಗತಿ ವರದಿಯನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಸಂಘಕ್ಕೆ 220 ಕೋಟಿ ರೂ. ಬಿಡುಗಡೆ: ಸೇಡಂ ಸಂಘಕ್ಕೆ ಈವರೆಗೆ ನಮಗೆ 220 ಕೋಟಿ ರೂ. ಅನುದಾನ ಸರ್ಕಾರ ನೀಡಿದೆ. ಅದನ್ನು ಸಮರ್ಪಕ ಬಳಸಲಾಗುತ್ತಿದೆ. 4700 ಪ್ರಗತಿ ಕೇಂದ್ರ ಸ್ಥಾಪಿಸಲಾಗಿದೆ. ಇಲ್ಲಿ ಒಂದು ಲಕ್ಷ ಮಕ್ಕಳಿಗೆ ಸಂಸ್ಕಾರ, ಶಿಕ್ಷಣ ನೀಡಲಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಮತ್ತು ಸೇನೆ ನೇಮಕಾತಿಗೆ ತರಬೇತಿ ನೀಡುತ್ತಿದ್ದೇವೆ. ಮಹಿಳಾ ಸಶಕ್ತಿಕರಣಕ್ಕೆ ಪ್ರದೇಶದಲ್ಲಿ 1500 ಹೊಲಿಗೆ ಕೇಂದ್ರ ತೆರೆದು ಪ್ರತಿ ಬ್ಯಾಚಿಗೆ 15 ಜನರಂತೆ ಮೂರು ತಿಂಗಳ ತರಬೇತಿ ನೀಡುತ್ತಿದೆ. 75 ಸಾವಿರ ಜನರು ಇದರಲ್ಲಿ ಭಾಗಿಯಾಗಿದ್ದಾರೆ. ಪ್ರದೇಶವನ್ನು ಹಸಿರುಮಯ ಮಾಡಲು ಸಂಘದಿಂದ ಕಳೆದ ವರ್ಷ 5 ಲಕ್ಷ ಸಸಿ ವಿತರಿಸಿದ್ದು, ಈ ವರ್ಷ 10 ಲಕ್ಷ ಸಸಿ ವಿತರಣೆ ಗುರಿ ಹೊಂದಿದ್ದೇವೆ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಾ| ಬಸವರಾಜ ಪಾಟೀಲ ಸೇಡಂ ಹೇಳಿದರು.