Advertisement

ಗೋವು ಆಧಾರಿತ ನೈಸರ್ಗಿಕ ಕೃಷಿಗೆ ಒತ್ತು ನೀಡುವುದು ಇಂದಿನ ಅಗತ್ಯ : ಸಿಎಂ ಯೋಗಿ

02:58 PM Jan 09, 2023 | Team Udayavani |

ಲಕ್ನೋ : ಹವಾಮಾನ ವೈಪರೀತ್ಯದಿಂದ ಉಂಟಾಗುತ್ತಿರುವ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು ಗೋವು ಆಧಾರಿತ ನೈಸರ್ಗಿಕ ಕೃಷಿಗೆ ಒತ್ತು ನೀಡುವುದು ಇಂದಿನ ಅಗತ್ಯವಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

Advertisement

ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ (ಬಿಎಚ್‌ಯು) ಸ್ವತಂತ್ರತಾ ಭವನದಲ್ಲಿ ಆಯೋಜಿಸಲಾದ ಮೂರು ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ‘ಸುಫ್ಲಾಮ್’ ಎರಡನೇ ದಿನದಂದು ಅವರು ರೈತರನ್ನು ಉದ್ದೇಶಿಸಿ ಮಾತನಾಡಿ, “ಹವಾಮಾನ ಬದಲಾವಣೆಯಿಂದಾಗಿ ಮಣ್ಣು ಮತ್ತು ನೀರಿಗೆ ದೊಡ್ಡ ನಷ್ಟ ಉಂಟಾಗಿದೆ. ಭೂಮಿ ತಾಯಿಯ ಜೊತೆ ಚೆಲ್ಲಾಟವಾಡುವುದು ತಪ್ಪಾಗಿದ್ದು, ಇದನ್ನು ಯಾವುದೇ ಬೆಲೆ ತೆತ್ತಾದರೂ ನಿಲ್ಲಿಸಬೇಕು ಎಂದರು.

‘ರಾಸಾಯನಿಕ ಕೃಷಿಯ ಬದಲು ಹಸು ಆಧಾರಿತ ನೈಸರ್ಗಿಕ ಕೃಷಿ ಮಾಡುವುದು ಅಗತ್ಯ. ಈ ರೀತಿಯಕೃಷಿಗೆ ಉತ್ತೇಜನ ನೀಡಲಾಗುವುದು. ಇದಕ್ಕಾಗಿ ನ್ಯಾಚುರಲ್ ಕೌನ್ಸಿಲ್ ಅನ್ನು ರಚಿಸಲಾಗಿದೆ. ಜನರು ಪರಿಸರವನ್ನು ವಿಷಪೂರಿತಗೊಳಿಸುತ್ತಿದ್ದಾರೆ ಆದ್ದರಿಂದ ನೈಸರ್ಗಿಕ ಅಂಶಗಳನ್ನು ಉಳಿಸಬೇಕು. ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರ ಗಂಭೀರವಾಗಿದೆ ಎಂದರು.

ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಭಾರತದ ಸಂಸ್ಕೃತಿಯು ವಸುದೈವ ಕುಟುಂಬಕಂ ತತ್ವಗಳನ್ನು ಆಧರಿಸಿದ್ದು, ಪೂರ್ವಜರ ಈ ಕಲ್ಪನೆಗೆ ಹೆಚ್ಚಿನ ಶಕ್ತಿ ನೀಡಬೇಕಾಗಿದೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next