ಆಗ್ರಾ: ಮದುವೆ ಮಂಟಪದಲ್ಲೇ ಮದುವೆ ಮುರಿದು ಬೀಳುವುದು ಸಾಮಾನ್ಯ. ಆದರೆ, ಉತ್ತರಪ್ರದೇಶದ ಫರೂಖಾಬಾದ್ ಜಿಲ್ಲೆಯಲ್ಲಿ ನಡೆದ ಘಟನೆ ಕೊಂಚ ಭಿನ್ನವೇ ಆಗಿದೆ. ಯುವತಿ ತಾನು ವರಿಸಬೇಕಿದ್ದ ವರನಿಗೆ ಹಣ ಎಣಿಸಲು ಬಾರದ ಕಾರಣಕ್ಕೆ ಮದುವೆಯನ್ನೇ ಮುರಿದುಕೊಂಡಿದ್ದಾಳೆ.
ಇಷ್ಟು ಮಾತ್ರವಲ್ಲ, ವರನಿಗೆ ಮಾನಸಿಕ ಸಮಸ್ಯೆ ಇತ್ತು. ಅದನ್ನು ಮುಚ್ಚಿಟ್ಟಿದ್ದರು ಎಂಬ ವಿಚಾರವೂ ಈಗ ದೃಢವಾಗಿದೆ.
ಮದುವೆ ಮಂಟಪದಲ್ಲಿ ವರನ ನಡವಳಿಕೆ ವಿಚಿತ್ರವಾಗಿರುವುದನ್ನು ಗಮನಿಸಿದ ವಧುವಿನ ಕುಟುಂಬಸ್ಥರು ಆತನ ಮಾನಸಿಕ ಸ್ಥಿತಿ ತಿಳಿಯಲು ದುಡ್ಡು ಎಣಿಸಲು ಹೇಳಿದ್ದಾರೆ. ಆಗ ಆತ ತಡಬಡಾಯಿಸಿದ. ಇದರಿಂದಾಗಿ ಕೋಪಗೊಂಡ ಯುವತಿ, ವರನ ಜತೆಗೆ ಮದುವೆ ಬೇಡ ಎಂದು ಹೇಳಿದ್ದಾಳೆ.
ಇದನ್ನೂ ಓದಿ: ಸರ್ಕಾರಿ ಶಾಲೆ ಉಳಿಸಲು 39 ಲಕ್ಷ ರೂ. ಚಂದಾ ಎತ್ತಿದ ಹಳ್ಳಿಯ ನಿವಾಸಿಗಳು