Advertisement

“ಸರ್” “ಮೇಡಂ” ಅನ್ನುವ ಹಾಗಿಲ್ಲ! ಕೇರಳದ ಶಾಲೆಯಲ್ಲಿ ಹೊಸ ಕ್ರಮ

01:14 PM Jan 09, 2022 | Team Udayavani |

ಕೇರಳ: ಇಲ್ಲಿನ ಶಾಲೆಯೊಂದು ಶೈಕ್ಷಣಿಕ ಸ್ಥಳಗಳಲ್ಲಿ ಲಿಂಗ ತಟಸ್ಥತ ದೋರಣೆನ್ನು ಅನುಸರಿಸುವ ಸಲುವಾಗಿ ದೊಡ್ಡ ಹೆಜ್ಜೆಯೊಂದನ್ನು ಇಟ್ಟಿದೆ. ಶಾಲೆಯ  ಆಡಳಿತವು ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ಸರಳವಾಗಿ “ಟೀಚರ್” ಎಂದು ಸಂಬೋಧಿಸುವುದನ್ನು ಕಡ್ಡಾಯಗೊಳಿಸಿದೆ ಮತ್ತು “ಸರ್” ಅಥವಾ “ಮೇಡಂ” ಎಂಬ ಲಿಂಗ-ವ್ಯಾಖ್ಯಾನದ ಪದಗಳನ್ನು ಬಳಸಬಾರದು ಎಂದು ಸೂಚಿಸಿದೆ.

Advertisement

ಭಾರತದಲ್ಲಿ ಹಲವು ದಶಕಗಳಿಂದಲೂ ವಿದ್ಯಾರ್ಥಿಗಳು ತಮ್ಮ ಪುರುಷ ಶಿಕ್ಷಕರನ್ನು “ಸರ್” ಎಂದು ಕರೆಯುತ್ತಾರೆ ಮತ್ತು ಮಹಿಳಾ ಶಿಕ್ಷಕರನ್ನು “ಮೇಡಂ” ಎಂದು ಕರೆಯುವುದು ರೂಢಿ, ಆದರೆ ಪಾಲಕ್ಕಾಡ್ ಜಿಲ್ಲೆಯ ಒಲಶ್ಶೆರಿ ಗ್ರಾಮದ ಸರ್ಕಾರಿ ಅನುದಾನಿತ ಪ್ರಾಥಮಿಕ ಶಾಲೆಯು ಈ ಲಿಂಗ-ತಟಸ್ಥ ಧೋರಣೆಯನ್ನು ಅನುಸರಿಸಲು ಮುಂದಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಪಾಲಕ್ಕಾಡ್‌ನಲ್ಲಿ, ಶಾಲೆಯ ಮುಖ್ಯೋಪಾಧ್ಯಾಯ ವೇಣುಗೋಪಾಲನ್ ಎಚ್ ಮಾತನಾಡಿ, ಶಿಕ್ಷಕರನ್ನು ಸರ್ ಎಂದು ಸಂಬೊಧಿಸುವ ಅಭ್ಯಾಸವನ್ನು ಬಿಡಬೇಕು ಎಂದು ಶಿಕ್ಷಕರೊಬ್ಬರಾದ  ಸಜೀವ್ ಕುಮಾರ್ ವಿ. ಅವರು ನಮಗೆ ಸಲಹೆಯನ್ನು ನೀಡಿದರು. ಪಾಲಕ್ಕಾಡ್ ಮೂಲದ ಸಾಮಾಜಿಕ ಕಾರ್ಯಕರ್ತ ಬೋಬನ್ ಮಟ್ಟುಮಂತ ಅವರು ಸರ್ಕಾರಿ ಅಧಿಕಾರಿಗಳನ್ನು ‘ಸರ್ ಎಂದು ಸಂಬೋಧಿಸುವ ಅಭ್ಯಾಸವನ್ನು ತೊಡೆದುಹಾಕಲು ಪ್ರಾರಂಭಿಸಿದ ಅಭಿಯಾನದಿಂದ ಅವರು ಸ್ಫೂರ್ತಿ ಪಡೆದಿದ್ದಾರೆ, ಎಂದು ತಿಳಿಸಿದ್ದಾರೆ.

14 ಕಿ.ಮೀ ದೂರದಲ್ಲಿರುವ ಮಾತೂರು ಪಂಚಾಯತ್‍ನಲ್ಲೂ ಕಳೆದ ವರ್ಷ ಜುಲೈನಲ್ಲಿ ಅಧಿಕಾರಿಗಳನ್ನು ಲಿಂಗ ಸಮಾನತೆಯ ದೃಷ್ಟಿಯಲ್ಲಿ ಹುದ್ದೆಯ ಹೆಸರಿನಲ್ಲಿ ಸಂಬೊಧಿಸುವ ಸಂಪ್ರದಾಯವನ್ನು ತೊಡೆದು ಹಾಕಿತ್ತು. ಇದರಿಂದ ಪ್ರೇರಣೆಗೊಂಡು ನಾವು ಇನ್ನು ಲಿಂಗ ಬೇಧವಿಲ್ಲದೆ ಸಂಬೋಧಿಸುವ ಪದ್ದತಿಯನ್ನು ಅಳವಡಿಸಿಕೊಳ್ಳಲು ಯೋಚಿಸಿದೆವು. ಇದನ್ನು ಪೊಷಕರು ಕೂಡ ಸ್ವಾಗತಿಸಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next