ಹೊಸದಿಲ್ಲಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯ ಮೂರ್ತಿಗಳು ಮತ್ತು ಇತರ ನಾಲ್ವರು ಹಿರಿಯ ನ್ಯಾಯಮೂರ್ತಿಗಳ ನಡುವಿನ ಬಿಕ್ಕಟ್ಟಿನ ವಿಚಾರ ಗೊತ್ತೇ ಇದೆ. ಕುತೂಹಲಕಾರಿ ವಿಚಾರವೆಂದರೆ ಸುಪ್ರೀಂ ಕೋರ್ಟಲ್ಲಿ “ಹಿರಿಯ ನ್ಯಾಯಮೂರ್ತಿ’ ಎಂಬ ಹುದ್ದೆಯ ಪ್ರಾಮುಖ್ಯತೆಯನ್ನು ಜತನವಾಗಿ ಕಾಪಾಡಿಕೊಂಡು ಬರಲಾಗುತ್ತಿದೆ. ಹೈಕೋರ್ಟ್‌ನ ನ್ಯಾಯಮೂರ್ತಿಗಳಿ ಗಂತೂ ಈ ವಿಚಾರ ಅತ್ಯಂತ ಮುಖ್ಯವಾಗಿರುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಹೈಕೋರ್ಟ್‌ಗಳಲ್ಲಿ ನ್ಯಾಯ ಮೂರ್ತಿಗಳಾಗಿದ್ದವರು ಮುಖ್ಯ ನ್ಯಾಯಮೂರ್ತಿ ಯಾಗದೆ ನೇರವಾಗಿ ಸುಪ್ರೀಂಕೋರ್ಟ್‌ಗೆ ನ್ಯಾಯಮೂರ್ತಿಯಾಗಿ ಪದೋನ್ನತಿಯಾಗಿದ್ದ ನಿದರ್ಶನಗಳಿವೆ ಎಂದು “ದ ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಸುಪ್ರೀಂಕೋರ್ಟಲ್ಲಿ “ಹಿರಿಯ ನ್ಯಾಯಮೂರ್ತಿ’ ಎಂಬುದು ನಿಗದಿಯಾಗುವುದು ಹೇಗೆ ಎಂಬುದೇ ಒಂದು ಕುತೂಹಲಕಾರಿ ಸಂಗತಿ. ಉದಾಹರಣೆಗೆ ಐವರು ನ್ಯಾಯಮೂರ್ತಿಗಳು ಒಂದೇ ದಿನ ಪ್ರಮಾಣ ಸ್ವೀಕಾರ ಮಾಡಿದಾಗ ಮೊದಲು ಪ್ರಮಾಣ ಸ್ವೀಕಾರ ಮಾಡಿದವರು ಹಿರಿಯ ನ್ಯಾಯಮೂರ್ತಿ ಯಾಗುತ್ತಾರೆ. ನಂತರ ಸ್ವೀಕರಿ ಸುವವರು ನಂತರದ ಸ್ಥಾನ ಪಡೆಯುತ್ತಾರೆ.
ನ್ಯಾ| ಜೆ.ಚಲಮೇಶ್ವರ್ 1997ರ ಜೂ.23ರಂದು ಹೈಕೋರ್ಟ್ ಜಡ್ಜ್ ಆಗಿ ನೇಮಕ ಗೊಂಡರು. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಆ ಸ್ಥಾನಕ್ಕೆ ಬರುವ ಮೊದಲು ಇದ್ದವರು ನ್ಯಾ| ಜೆ.ಎಸ್. ಖೇಹರ್. 1996ರ ಜ.17ಕ್ಕೆ ನ್ಯಾ| ದೀಪಕ್ ಮಿಶ್ರಾ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ ವಾಗಿದ್ದರು. ನ್ಯಾ| ಖೆಹರ್ 1999ರ ಫೆ.8 ರಂದು ನೇಮಕಗೊಂಡಿದ್ದರು. ನ್ಯಾ| ಜೆ.ಚಲಮೇಶ್ವರ್ ಗುವಾಹಟಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ 2007ರ ಮೇ 3ರಂದು ನೇಮಕಗೊಂಡರು. ನ್ಯಾಯಮೂರ್ತಿಗಳಾದ ಜೆ.ಎಸ್. ಖೇಹರ್ ಮತ್ತು ದೀಪಕ್ ಮಿಶ್ರಾರಿಗಿಂತ ಎರಡು ವರ್ಷಗಳ ಸೇವಾ ಹಿರಿತನದ ಅನುಕೂಲತೆ ಇದ್ದರೂ ಅಂದಿನ ಕೊಲೀಜಿಯಂ ನ್ಯಾ|ಜೆ.ಎಸ್.ಖೇಹರ್ ಅವರನ್ನು 2011ರ ಸೆ.13ರಂದು ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಿತು.
ಹಿರಿತನವನ್ನೇ ಪರಿಗಣಿಸುವುದಿದ್ದರೆ 2017ರ ಜ. 4ರಂದೇ ನ್ಯಾ| ಜೆ.ಚಲಮೇಶ್ವರ್ ಮುಖ್ಯ ನ್ಯಾಯ ಮೂರ್ತಿಯಾಗಿ ಅಧಿಕಾರ ಸ್ವೀಕರಿಸಬೇಕಾಗಿತ್ತು. ಆಗ ಮುಖ್ಯ ನ್ಯಾಯಮೂರ್ತಿ ಸ್ಥಾನದಿಂದ ಟಿ.ಎಸ್.ಠಾಕೂರ್ ನಿವೃತ್ತರಾಗಿದ್ದರು. ಹಾಲಿ ನ್ಯಾಯಮೂರ್ತಿ 2017ರ ಆ.28ರಂದು ಅಧಿಕಾರ ಸ್ವೀಕರಿಸಿದ್ದರು.
ನ್ಯಾಯಮೂರ್ತಿಗಳ ಸಂಖ್ಯೆ
ಸದ್ಯ ತೆರವಾಗಿರುವ ನ್ಯಾಯಮೂರ್ತಿಗಳ ಹುದ್ದೆ
ಕೋರ್ಟ್ ಸಂಖ್ಯೆ 1:ಮುಖ್ಯ ನ್ಯಾಯಮೂರ್ತಿಯವರದ್ದು
ಕೋರ್ಟ್ ಸಂಖ್ಯೆ 2: ಎರಡನೇ ಹಿರಿಯ ನ್ಯಾಯಮೂರ್ತಿ- ಸದ್ಯ ನ್ಯಾ| ಜೆ. ಚಲಮೇಶ್ವರ್ ಕೋರ್ಟ್ ಸಂಖ್ಯೆ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಯೊಬ್ಬರ ಹಿರಿತನ ನಿರ್ಧರಿಸುತ್ತದೆ. ಅವರೇ ಅಲ್ಲಿ ಪ್ರಕರಣದ ವಿಚಾರಣೆಯ ನೇತೃತ್ವ ವಹಿಸುತ್ತಾರೆ
ಅತ್ಯಂತ ಸೂಕ್ಷ್ಮ ಪ್ರಕರಣಗಳನ್ನು ಹಿರಿಯ ನ್ಯಾಯಮೂರ್ತಿಗಳೇ ಇರುವ ಪೀಠಕ್ಕೇ ವಹಿಸಲಾಗುತ್ತದೆ
ಹಿಂದಿನ 5-6 ವರ್ಷಗಳಿಂದ ಈಚೆಗೆ ಪ್ರಮುಖ ಮತ್ತು ಸೂಕ್ಷ್ಮ ಪ್ರಕರಣಗಳನ್ನು ಕೋರ್ಟ್ ನಂಬರ್ 1 ಅಥವಾ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠವೇ ನಿರ್ವಹಿಸುತ್ತಿದೆ. ಕೆಲ ಪ್ರಮುಖ ಕೇಸುಗಳ ವಿಚಾರಣೆಗಳನ್ನು ಇತರ ನ್ಯಾಯಪೀಠಕ್ಕೆ ವಹಿಸಲಾಗುತ್ತದೆ. ಇಲ್ಲದಿದ್ದರೆ ಕಂಪ್ಯೂಟರ್ ಆಧರಿತವಾಗಿ ಕೇಸುಗಳನ್ನು ನಿಗದಿತ ಪೀಠಕ್ಕೆ ನಿರ್ವಹಿಸುವ ವ್ಯವಸ್ಥೆ ಇದೆ.
ಮುಖ್ಯ ನ್ಯಾಯಮೂರ್ತಿಯೇ ಆಡಳಿತಾತ್ಮಕ ವಿಚಾರಗಳ ಬಗ್ಗೆ ಗಮನ ಹರಿಸುತ್ತಾರೆ. ಅವರೇ ಪ್ರಮುಖ ಮತ್ತು ಸೂಕ್ಷ್ಮ ಪ್ರಕರಣಗಳನ್ನು ನಿರ್ವಹಿಸುತ್ತಾರೆ.