ಹೆಬ್ರಿ :ಇಲ್ಲಿಗೆ ಸಮೀಪದ ಕುಚ್ಚೂರು ಗ್ರಾ.ಪಂ. ವ್ಯಾಪ್ತಿಯ 4 ಸರಕಾರಿ ಶಾಲೆಗಳಿಗೆ 2018-19 ನೇ ಸಾಲಿನಲ್ಲಿ ಒಂದನೇ ತರಗತಿಗೆ ದಾಖಲಾದ ಪ್ರತಿ ವಿದ್ಯಾರ್ಥಿಗಳ ಹೆಸರಿನಲ್ಲಿ ತಲಾ 2000 ರೂ.ಡೆಪೋಸಿಟ್ ನೀಡಲು ದಾನಿಗಳು ಮುಂದಾಗಿದ್ದಾರೆ.
ನಿರಂತರ ಶೈಕ್ಷಣಿಕ ಸೇವೆ
ಮಂಗಳೂರು ಬಂಟರ ಮಾತೃಸಂಘ ಸಂಘದ ನಿರ್ದೇಶಕರಾದ ಭೂತಗುಂಡಿ ಕರುಣಾಕರ ಶೆಟ್ಟಿ ಹೆಬ್ರಿ ಸಂಘದ ಮೂಲಕ ಮದುವೆ ಆಗದವರಿಗೆ ಕರಿಮಣಿ ಭಾಗ್ಯ,ಬಡವಿದ್ಯಾರ್ಥಿಗಳು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ,ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಸಹಾಯಧನವನ್ನು ದಾನಿಗಳ ನೆರವಿನಿಂದ ಇವರ ನೇತೃತ್ವದಲ್ಲಿ ನೀಡುತ್ತಾ ಬಂದಿದ್ದಾರೆ.
ಕಳೆದ 6 ವರ್ಷಗಳಿಂದ ಉಚಿತ ಪುಸ್ತಕ ವಿತರಣೆ ಕುಚ್ಚಾರು ಗ್ರಾಮ ವ್ಯಾಪ್ತಿಯ 6 ಸರಕಾರಿ ಶಾಲೆಗಳಿಗೆ ಕಳೆದ 6 ವರ್ಷಗಳಿಂದ ಮಕ್ಕಳಿಗೆ ಉಚಿತ ಸ್ಕೂಲ್ ಬ್ಯಾಗ್ ಹಾಗೂ ಪುಸ್ತಕಗಳನ್ನು ದಾನಿಗಳ ನೆರವಿನಿಂದ ಕರುಣಾಕರ ಶೆಟ್ಟಿ ನೇತೃತವದಲ್ಲಿ ನೀಡಲಾಗುತ್ತಿದೆ.ಅಲ್ಲದೆ ಇವರ ನೇತೃತ್ವದಲ್ಲಿ ಪ್ರೌಢ ಶಾಲೆಯ ಆಯ್ದ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತಿದೆ.
Advertisement
ಸ್ಥಳೀಯ ನಿವಾಸಿ ಬೇಳಂಜೆ ಹಾಲು ಉತ್ಪಾದಕರ ಸಂಘ ಅಧ್ಯಕ್ಷರಾದ ಭೂತುಗುಂಡಿ ಕರುಣಾಕರ ಶೆಟ್ಟಿ ಅವರ ನೇತೃತ್ವದಲ್ಲಿ ದಾನಿಗಳ ನೆರವಿನೊಂದಿಗೆ .ಸ.ಪ್ರಾ. ಶಾಲೆ ಕುಚ್ಚೂರು , ಸ.ಕಿ.ಪ್ರಾ. ಶಾಲೆ ದಾಸನ ಗುಡ್ಡೆ, ಸ.ಕಿ.ಪ್ರಾ. ಶಾಲೆ ದೂಪದ ಕಟ್ಟೆ ಹಾಗೂ ಸ.ಕಿ.ಪ್ರಾ. ಶಾಲೆ ಸೊಳ್ಳೆಕಟ್ಟೆ ಈ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ವಿನೂತನ ಯೋಜನೆಗೆ ಮುಂದಾಗಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳ ವ್ಯಾಮೋಹದಿಂದ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗುತ್ತಿರುವ ಹಿನ್ನಲೆಯಲ್ಲಿ ಸರಕಾರಿ ಶಾಲೆಗಳನ್ನು ಉಳಿಸಬೇಕು ಬೆಳೆಸಬೇಕು ಎಂಬ ಉದ್ದೇಶದಿಂದ ಕಳೆದ 6 ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೆ ಆದ ಸಹಕಾರವನ್ನು ಕರುಣಾಕರ ಶೆಟ್ಟಿ ನೀಡುತ್ತಿದ್ದು ಇದರರಿಂದ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ನೆರವಾಗಿದೆ.
Related Articles
ಉತ್ತಮ ಯೋಜನೆ
ಖಾಸಗಿ ಶಾಲೆಗಳ ಪೈಪೋಟಿಯ ನಡುವೆ ಇರುವ ಸರಕಾರಿ ಶಾಲೆಗಳ ಉಳಿವಿಗೆ ಇಂತಹ ಯೋಜನೆಗಳು ತುಂಬಾ ಸಹಕಾರಿ.ಇದರಿಂದ ಗ್ರಾಮೀಣ ಪ್ರದೇಶ ಮಕ್ಕಳಿಗೆ ಅನುಕೂಲವಾಗಿದ್ದು ಈ ಬಾರಿ ಮಕ್ಕಳ ಪ್ರವೇಶಾತಿ ಉತ್ತಮವಾಗುತ್ತಿದ್ದು ಭೂತಗುಂಡಿ ಕರುಣಾಕರ ಶೆಟ್ಟಿ ಅವರ ಶೈಕ್ಷಣಿಕ ಕಾಳಜಿ ಶ್ಲಾಘನೀಯ.
-ಗಂಗಮ್ಮ, ಮುಖ್ಯ ಶಿಕ್ಷಕಿ ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಚ್ಚಾರು -1
Advertisement