Advertisement
ಫರಂಗಿಪೇಟೆಯ ಇರ್ಫಾನ್ (39) ಮತ್ತು ಮಹಮ್ಮದ್ ಮುಶಾ¤ಕ್ (30), ಬಿ.ಸಿ.ರೋಡ್ ಶಾಂತಿ ಅಂಗಡಿಯ ಸಮೀರ್ ಕೆ. ಎಂ. (27), ಬಂಟ್ವಾಳ ತಾಲೂಕು ಪುದು ಗ್ರಾಮದ ಮಹಮದ್ ಇರ್ಫಾನ್ (35) ಮತ್ತು ಮೇರೆಮಜಲಿನ ದಿಲನ್ ಅವಿನಾಶ್ ಕಾಡೋìಜಾ (29) ಶಿಕ್ಷೆಗೊಳಗಾದವರು.
2015 ಮಾ. 13ರಂದು ಸಂಜೆ ಕಾರಿನಲ್ಲಿ ಬಂದ ತಂಡ ಪೋಲೊ ಸೇಲ್ಸ್ ಮಳಿಗೆಗೆ ನುಗ್ಗಿ ಅಲ್ಲಿದ್ದ ಕನ್ನಯ ಲಾಲ್ ಗುಪ್ತ ಅವರ ಮೇಲೆ ಕಬ್ಬಿಣದ ಪೈಪ್‌ನಿಂದ ಮತ್ತು ಕೈಯಿಂದ ಹಲ್ಲೆ ನಡೆಸಿ, ಲ್ಯಾಪ್‌ಟಾಪನ್ನು ಎಳೆದು ಫುಟ್ ಪಾತ್‌ಗೆಸೆದು ಹಾನಿಗೊಳಿಸಿತ್ತು. ಬಳಿಕ ಕಿಸೆಯಲ್ಲಿದ್ದ 2,700 ರೂ. ಮತ್ತು ಡ್ರಾಯರ್‌ನಲ್ಲಿದ್ದ 25,800 ರೂ. ಗಳನ್ನು ದರೋಡೆ ಮಾಡಿತ್ತು ಎಂದು ಆರೋಪಿಸಲಾಗಿತ್ತು. ವ್ಯವಹಾರ ಸಂಬಂಧಿ ದ್ವೇಷ ಇದಕ್ಕೆ ಕಾರಣ ಎಂದು ಬಂದರು ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಐ ಶಾಂತಾರಾಂ ಆರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಲ್ಲನ ಗೌಡ ಅವರು, ಆರೋ ಪಿ ಗಳ ಮೇಲಿ ನ ಆರೋಪ ಸಾಬೀತಾಗಿದೆ ಎಂಬ ತೀರ್ಮಾನಿಸಿ ಗುರುವಾರ ತೀರ್ಪು ನೀಡಿದರು. ದಂಡ ಮೊತ್ತದಲ್ಲಿ 1 ಲ. ರೂ. ಗಳನ್ನು ದೂರುದಾರ ಕನ್ನಯ ಲಾಲ್‌ಗೆ ನೀಡಬೇಕು. ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಹರಿಶ್ಚಂದ್ರ ಉದ್ಯಾವರ ವಾದಿಸಿದ್ದರು.
Related Articles
ಐಪಿಸಿ ಸೆ.143 (ಅಕ್ರಮ ಪ್ರವೇಶ) ಅನ್ವಯ 7 ದಿನಗಳ ಶಿಕ್ಷೆ ಮತ್ತು ತಲಾ 1 ಸಾ. ರೂ. ದಂಡ. ಐಪಿಸಿ 147 ಮತ್ತು 148 (ದೊಂಬಿ) ಅನ್ವಯ ತಲಾ 1 ತಿಂಗಳ ಸಜೆ ಮತ್ತು 5 ಸಾ. ರೂ. ದಂಡ, ಐಪಿಸಿ 448 (ಅಕ್ರಮ ಕೂಟ) ಅನ್ವಯ 15 ದಿನಗಳ ಶಿಕ್ಷೆ ಮತ್ತು ತಲಾ 1 ಸಾ. ರೂ. ದಂಡ, ಐಪಿಸಿ 323 (ಕೈಯಿಂದ ಹಲ್ಲೆ) ಅನ್ವಯ 15 ದಿನಗಳ ಸಜೆ ಮತ್ತು ತಲಾ 1 ಸಾ. ರೂ. ದಂಡ, ಐಪಿಸಿ 324 (ಕಬ್ಬಿಣದ ಪೈಪ್‌ನಿಂದ ಹಲ್ಲೆ) ಅನ್ವಯ 1 ತಿಂಗಳ ಸಜೆ ಮತ್ತು 5 ಸಾ. ರೂ. ದಂಡ, ಐಪಿಸಿ 427 (ಸೊತ್ತು ನಾಶ) ಅನ್ವಯ 1 ತಿಂಗಳ ಸಜೆ ಮತ್ತು ತಲಾ 1 ಸಾ. ರೂ. ದಂಡ, ಐಪಿಸಿ 395 (ದರೋಡೆ) ಮತ್ತು ಐಪಿಸಿ 397 (ದರೋಡೆ ವೇಳೆ ಹಲ್ಲೆ) ಅನ್ವಯ 7 ವರ್ಷ ಸಜೆ ಮತ್ತು ತಲಾ 10 ಸಾ. ರೂ. ದಂಡ ವಿಧಿಸಲಾಗಿದೆ.
Advertisement