ಅಜೆಕಾರು ಪೇಟೆಯು ಸುತ್ತಲ ಗ್ರಾಮಗಳನ್ನು ಸಂಪರ್ಕಿಸುವ ಕೇಂದ್ರ ವಾಗಿದ್ದು ರಾತ್ರಿ ವೇಳೆಯಲ್ಲಿ ಹೈಮಾಸ್ಟ್ ದೀಪವಿಲ್ಲದೆ ವಾಹನ ಸಂಚಾರರಿಗೆ ತೀವ್ರ ತೊಂದರೆಯಾಗುತ್ತಿದೆ.
Advertisement
ಕೊಲ್ಲೂರು, ಧರ್ಮಸ್ಥಳ, ಶೃಂಗೇರಿ ಮುಂತಾದ ಧಾರ್ಮಿಕ ಕೇಂದ್ರಗಳಿಗೆ ಅಜೆಕಾರು ಮಾರ್ಗವಾಗಿಯೇ ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು ಪೇಟೆಯಲ್ಲಿ ದೀಪದ ವ್ಯವಸ್ಥೆ ಇಲ್ಲದೆ ಅಫಘಾತಗಳು ನಡೆಯುವಂತಾಗಿವೆ.ಮಳೆಗಾಲದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಪೇಟೆ ಸಂಪೂರ್ಣ ಕತ್ತಲೆ ಯಿಂದ ಕೂಡಿರುವುದರಿಂದ ಕಳ್ಳರಿಗೂ ಅನುಕೂಲವಾಗುತ್ತಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಅಜೆಕಾರು ಪೇಟೆಯ ಹೈಮಾಸ್ಟ್ ದೀಪ ಉರಿಯದೆ ಸ್ಥಳೀಯರು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಅಜೆಕಾರು ಪೇಟೆಯ ರಸ್ತೆಯನ್ನು ವಿಸ್ತರಣೆ ಮಾಡಿ ರಸ್ತೆಯ ನಡುವೆ ವಿಭಾಜಕಗಳನ್ನು ಕಳೆದ ಎರಡು ವರ್ಷಗಳ ಹಿಂದೆಯೇ ನಿರ್ಮಾಣ ಮಾಡಲಾಗಿದೆ. ಆದರೆ ಕಾರ್ಕಳ ಸಂಪರ್ಕಿಸುವ ವಿಭಾಜಕಕ್ಕೆ ಮಾತ್ರ ದಾರಿ ದೀಪ ಅಳವಡಿಸಿ ಹೆಬ್ರಿ ಸಂಪರ್ಕ ರಸ್ತೆಯ ವಿಭಾಜಕಕ್ಕೆ ದಾರಿ ದೀಪ ಅಳವಡಿಸಿಲ್ಲ. ಇದರಿಂದಾಗಿ ವಾಹನ ಸವಾರರು ರಾತ್ರಿ ವೇಳೆ ವಿಭಾಜಕ ಸರಿಯಾಗಿ ಕಾಣಿಸದೆ ಅಫಘಾತಕ್ಕೀಡಾಗುವ ಸಂಭ ವವಿದೆ. ಈ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಒಂದೆರಡು ದಿನಗಳಲ್ಲಿ ದುರಸ್ತಿ
ತೀವ್ರ ಗಾಳಿ-ಮಳೆ ಸಂದರ್ಭ ಹೈಮಾಸ್ಟ್ ದೀಪ ಕೆಟ್ಟು ಹೋಗಿದ್ದು ದುರಸ್ತಿಗೆ ವಿಪರೀತ ಮಳೆಯಿಂದಾಗಿ ಅಸಾಧ್ಯವಾಗಿತ್ತು. ಒಂದೆರಡು ದಿನದಲ್ಲಿ ದುರಸ್ತಿ ನಡೆಸಲಾಗುವುದು.
-ದಿನೇಶ್ ಕುಮಾರ್,
ಅಧ್ಯಕ್ಷರು ಮರ್ಣೆ ಗ್ರಾ.ಪಂ.