ನವದೆಹಲಿ/ವಾಷಿಂಗ್ಟನ್: ಪ್ರಸಕ್ತ ವಿತ್ತೀಯ ವರ್ಷದಲ್ಲಿ ಭಾರತದ ಅರ್ಥ ವ್ಯವಸ್ಥೆ ಶೇ.6.3ರ ದರದಲ್ಲಿಯೇ ಅಭಿವೃದ್ಧಿ ಹೊಂದಲಿದೆ. ಜಗತ್ತಿನ ಇತರ ಭಾಗಗಳ ಅರ್ಥ ವ್ಯವಸ್ಥೆ ಹೋಲಿಕೆ ಮಾಡಿದರೆ ಭಾರತದಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡು ಬಂದಿದೆ ಎಂದು ವಿಶ್ವಬ್ಯಾಂಕ್ ಪ್ರಕಟಿಸಿದ ಹೊಸ ವರದಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದೆ.
ಹಾಲಿ ವಿತ್ತ ವರ್ಷದ ಮೊದಲ ಅವಧಿಯಲ್ಲಿ ಅಂದರೆ ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಿದ್ದ ವರದಿಯಲ್ಲಿ ಕೂಡ ದೇಶದ ಅರ್ಥ ವ್ಯವಸ್ಥೆ ಶೇ.6.3ರ ದರದಲ್ಲಿಯೇ ಅಭಿವೃದ್ಧಿ ಕಾಣಲಿದೆ ಎಂದು ಪ್ರಕಟಿಸಿತ್ತು. ಕಳೆದ ತಿಂಗಳು ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಪ್ರಕಟಿಸಿದ್ದ ವರದಿಯಲ್ಲಿ ಕೂಡ ದೇಶ ಹಾಲಿ ಸಾಲಿನಲ್ಲಿ ಶೇ.6.3ರ ದರದಲ್ಲಿ ಅಭಿವೃದ್ಧಿ ಕಾಣಲಿದೆ ಎಂದು ಹೇಳಿತ್ತು.