ಹೊಸ ಪ್ರಕಟಣೆಗಳ ಅವಲೋಕನ ಈ ಅಂಕಣದಲ್ಲಿ ಪ್ರಕಟವಾಗಲಿದೆ…
Advertisement
ಇರಲೇಬೇಕಾದ ಬೀಜದ ಬುಟ್ಟಿರೈತರ ಪಾಲಿಗೆ ಇವು ಕಷ್ಟದ ದಿನಗಳು. ಬದಲಾದ ಈಗಿನ ಸಂದರ್ಭದಲ್ಲಿ, ಸಾಂಪ್ರದಾಯಿಕ ನಾಡು ತಳಿಗಳನ್ನು ಕಳೆದುಕೊಂಡ ರೈತರು ಕಂಪನಿ ಬೀಜಕ್ಕೆ ದಾಸರಾಗಿದ್ದಾರೆ. ಹೆಚ್ಚಿನ ಬೆಲೆ ಕೊಟ್ಟು ತಂದ ಬೀಜಗಳು ನಿರೀಕ್ಷಿತ ಇಳುವರಿ ಕೊಡದೇ ಹೋದಾಗ, ಸೋತು ಸುಣ್ಣವಾಗಿ ಸಾವಿನ ಕುಣಿಕೆಗೆ ಕೊರಳೊಡ್ಡಿದ್ದಾರೆ. ವಾಸ್ತವ ಏನೆಂದರೆ, ಉತ್ತಮ ಇಳುವರಿ ಕೊಡುವ, ಮಾರುಕಟ್ಟೆಯಲ್ಲಿ ಗೆಲ್ಲಬಲ್ಲಂಥ ಅನೇಕ ನಾಡು ತಳಿಗಳು ನಮ್ಮಲ್ಲಿವೆ. ಅಂಥ ತಳಿಗಳನ್ನು ಗುರುತಿಸಿ, ನಾವೇ ಗುಣಮಟ್ಟದ ಬೀಜಗಳನ್ನು ಉತ್ಪಾದಿಸಿಕೊಳ್ಳಬಹುದಾಗಿದೆ.
Related Articles
Advertisement
ಕಥೆಯ ಕೇಳಿರಣ್ಣ…ಕನ್ನಡ ಸಾಹಿತ್ಯದಲ್ಲಿ ರಾಘವಾಂಕ ಮಹಾಕವಿಯ “ಹರಿಶ್ಚಂದ್ರ ಕಾವ್ಯ’ಕ್ಕೆ ಪ್ರಮುಖ ಸ್ಥಾನವಿದೆ. ರಾಜಾ ಹರಿಶ್ಚಂದ್ರನ ಕಥೆಯನ್ನು ಮನಮುಟ್ಟುವಂತೆ ವಿವರಿಸಿರುವ ಈ ಕಾವ್ಯದ ಮೂಲ ಹೆಸರು “ಹರಿಶ್ಚಂದ್ರ ಚಾರಿತ್ರ’. ನಡುಗನ್ನಡ ಶೈಲಿಯ ಈ ಕಾವ್ಯದಲ್ಲಿ, ಹರ್ಷ, ವಿಷಾದ, ಶೋಕ, ಕ್ರೋಧ ಮುಂತಾದ ಚಿತ್ತ ವೃತ್ತಿಗಳನ್ನು ರಾಘವಾಂಕ ಕವಿಯು ಮನೋಜ್ಞವಾಗಿ ವಿವರಿಸಿದ್ದಾನೆ. ಹರಿಶ್ಚಂದ್ರನ ಸತ್ಯನಿಷ್ಠೆ, ಚಂದ್ರಮತಿಯ ತ್ಯಾಗ, ಅರ್ಪಣಾ ಮನೋಭಾವ, ವಿಶ್ವಾಮಿತ್ರನ ಹಠ, ಆಕಸ್ಮಿಕವಾಗಿ ಜೊತೆಯಾಗಿಬಿಡುವ ಸಂಕಟದ ಸಂದರ್ಭಗಳ ವಿವರವನ್ನು ಕವಿ ಆಪ್ತವಾಗಿ ಹೇಳಿದ್ದಾನೆ. ಸತ್ಯಸಂಧನಾದ ಹರಿಶ್ಚಂದ್ರನ ಪುಣ್ಯಕಥೆಯನ್ನು ಕೇಳಿದರೆ, ಏಳು ಜನ್ಮದ ಪಾತಕಗಳೂ ಕಳೆದು ಹೋಗುತ್ತವೆ ಎಂಬ ಮಾತೇ ಆಡುನಿಡಿಯಂತೆ ಪ್ರಚಲಿತದಲ್ಲಿದೆ. ಪಾಚೀನ ಕನ್ನಡ ಕಾವ್ಯವನ್ನು ಜನಸಾಮಾನ್ಯರಿಗೂ ತಲುಪಿಸಬೇಕು ಎಂಬ ಸದಾಶಯದಿಂದ, ಮಹಾಕಾವ್ಯಗಳ ಗದ್ಯ ರೂಪವನ್ನು ಸರಳ ಭಾಷೆಯಲ್ಲಿ ಬರೆಸಿ, ಪ್ರಕಟಿಸುವ ಮಹತ್ಕಾರ್ಯವನ್ನು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದೆ. ಈ ಸರಣಿಯ ಭಾಗವಾಗಿ “ರಾಘವಾಂಕನ ಹರಿಶ್ಚಂದ್ರ ಚರಿತೆ’ ಪುಸ್ತಕ ಪ್ರಕಟವಾಗಿದೆ. ವಿದ್ವಾನ್ ಎನ್. ರಂಗನಾಥ ಶರ್ಮ ಅವರ ಸರಳ, ಸುಂದರ, ಸುಲಲಿತ ಭಾಷೆ ಈ ಪುಸ್ತಕದ ಹೆಚ್ಚುಗಾರಿಕೆ. ರಾಘವಾಂಕನ ಹರಿಶ್ಚಂದ್ರ ಚರಿತೆ. ಲೇ: ವಿದ್ವಾನ್ ಎನ್. ರಂಗನಾಥ ಶರ್ಮ, ಪ್ರ: ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು. ವಿದೇಶ ಸಮಾಚಾರ
“ವಿದೇಶ ಪ್ರವಾಸ’ ಎಂಬುದು ಕೆಲವರಿಗೆ ಅಭ್ಯಾಸ. ಮತ್ತೆ ಕೆಲವರಿಗೆ ಹವ್ಯಾಸ. ಇನ್ನೊಂದಷ್ಟು ಮಂದಿಗೆ ಅದು ನಮ್ಮ ತಿಳಿವಳಿಕೆ ಹೆ ಚ್ಚಿಸಿೊಳ್ಳಲು, ಏನಾದರೂ ಹೊಸದನ್ನು ಕಲಿಯಲು, ವಿಶೇಷ ಅನ್ನುವಂಥದನ್ನು ನೋಡಲು ದೊರಕುವ ಅಪೂರ್ವ ಅವಕಾಶ. ಹೀಗೆ ತಿಳಿದವರ ಪಟ್ಟಿಯಲ್ಲಿ ನಿವೃತ್ತ ಕಾಲೇಜು ಅಧ್ಯಾಪಕರಾದ ಕೆ.ಮುಕುಂದನ್ ಅವರೂ ಇದ್ದಾರೆ. ಮುಕುಂದನ್ ಬರೆಯುತ್ತಾರೆ: “53 ವರ್ಷಗಳವರೆಗೆ ಒಮ್ಮೆಯೂ ವಿಮಾನ ಏರದ ನಾನು, ಕಳೆದ ನಾಲ್ಕೈದು ವರ್ಷದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಕಿ.ಮೀ. ದೂರವನ್ನು ವಿಮಾನದಲ್ಲಿ ಕ್ರಮಿಸಿದ್ದೇನೆ. ಪ್ರತಿಯೊಂದು ಹೊಸ ದೇಶವನ್ನು ನೋಡಿದಾಗಲೂ ನಮ್ಮ ದೇಶ ಯಾಕೆ ಹೀಗಿಲ್ಲ ಎನಿಸಿ ಮನಸಿಗೆ ನೋವಾಗುತ್ತದೆ. ನಮ್ಮ ಪ್ರಾಮಾಣಿಕತೆಯನ್ನು ನೆನೆದು ನಾಚಿಕೆಯಾಗುತ್ತದೆ. ಆಸ್ಟ್ರàಲಿಯಾದಲ್ಲಿ ಮತದಾನ ಮಾಡುವುದು ಕಡ್ಡಾಯ ಅದರಿಂದ ತಪ್ಪಿಸಿಕೊಂಡರೆ ಕಠಿಣ ಶಿಕ್ಷೆ ಆಗುತ್ತದೆ. ಮತದಾನದ ದಿನ ವ್ಯಕ್ತಿಯೊಬ್ಬ ಊರಲ್ಲಿ ಇರುವುದಿಲ್ಲ ಅಂದರೆ, 15 ದಿನ ಮೊದಲೇ ಆಗ ಯಾವ ಊರಲ್ಲಿ ಇರುತ್ತಾರೋ ಅಲ್ಲಿಂದಲೇ ಮತ ಚಲಾಯಿಸುವ ಅನುಕೂಲ ಅಲ್ಲಿನ ಪ್ರಜೆಗಳಿಗೆ ಇದೆ.ಅಂಥ ದಿನಗಳು ನಮ್ಮಲ್ಲಿ ಬರುವುದಾದರೂ ಯಾವಾಗ? ಅಮೆರಿಕಾ, ಯೂರೋಪ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ನೇಪಾಳ… ಹೀಗೆ, ಮುಕುಂದನ್ ಅಲೆದಾಡಿರುವ ಸ್ಥಳಗಳ ಪಟ್ಟಿ ದೊಡ್ಡದು. ಆಸ್ಟ್ರೇಲಿಯಾ- ನ್ಯೂಜಿಲೆಂಡ್‌ನ ಪ್ರವಾಸ ಕಾಲದಲ್ಲಿ ತಮಗೆ ಆದ ಮಧುರ ಅನುಭವಗಳನ್ನು “ಕಿವಿ- ಕಾಂಗರೂಗಳ ನಾಡಿನಲ್ಲಿ’ ಕೃತಿಯಲ್ಲಿ ಅವರು ಆಪ್ತವಾಗಿ ಹೇಳಿಕೊಂಡಿದ್ದಾರೆ. ಕಿವಿ ಕಾಂಗರೂಗಳ ನಾಡಿನಲ್ಲಿ, ಲೇ: ಕೆ. ಮುಕುಂದನ್, ಪ್ರ: ಅಂಕಿತ ಪುಸ್ತಕ, ಬೆಂಗಳೂರು.