ಮುಂಬೈ/ ನವದೆಹಲಿ: ರಾಷ್ಟ್ರೀಯ ಮಾದಕ ದ್ರವ್ಯ ನಿಯಂತ್ರಣ ಮಂಡಳಿ (ಎನ್‌ಸಿಬಿ) ಮುಂಬೈ ವಲಯ ಕಚೇರಿಯ ನಿರ್ದೇಶಕರಾಗಿದ್ದ ಭಾರತೀಯ ಕಂದಾಯ ಸೇವೆ (ಐಆರ್‌ಎಸ್) ಅಧಿಕಾರಿ ಸಮೀರ್ ವಾಂಖೆಡೆ ಅವರನ್ನು ವರ್ಗಾವಣೆ ಮಾಡಲಾಗಿದೆ.
2021 ಡಿ.31ಕ್ಕೆ ವಲಯ ಕಚೇರಿಯ ನಿರ್ದೇಶಕರಾಗಿ ಅಧಿಕಾರದ ಅವಧಿ ಮುಕ್ತಾಯವಾಗಿತ್ತು. ಅವರು ನವದೆಹಲಿಯಲ್ಲಿರುವ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ)ದಲ್ಲಿ ಕೆಲಸ ಮಾಡಲಿದ್ದಾರೆ.
ಡ್ರಗ್ಸ್ ಪಾರ್ಟಿಯಲ್ಲಿ ಭಾಗವಹಿಸಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನದ ಬಳಿಕ ಅವರು ಹೆಚ್ಚು ಬೆಳಕಿಗೆ ಬಂದಿದ್ದರು. ಜತೆಗೆ ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ಕೂಡ ಐಆರ್‌ಎಸ್ ಅಧಿಕಾರಿ ವಿರುದ್ಧ ವಾಗ್ಧಾಳಿ ನಡೆಸಿದ್ದೂ ಸುದ್ದಿಯಾಗಿತ್ತು.
Related Articles
ಇದನ್ನೂ ಓದಿ :ಮಹಿಳೆ, ಪುರಷ ರಿಗೆ ಸಮಾನ ಅವಕಾಶ ಕೊಟ್ಟಿದ್ದೆ ಸಾವಿತ್ರಿ ಬಾಯಿ ಫುಲೆ : ಕೆ. ಮಲ್ಲಿಕಾರ್ಜುನ