Advertisement

ದೇವರ ಹುಡುಕಾಟದಲ್ಲಿ !

06:08 PM Jan 16, 2020 | mahesh |

ವೀಕೆಂಡ್‌ ಬಂದ್ರೆ ಸಾಕು ಗೆಳೆಯರ ಜೊತೆ ಕ್ರಿಕೆಟ್‌, ಸಿನೆಮಾ, ಬೀಚ್‌… ಹೀಗೆ ಸುತ್ತಾಟ ಇದ್ದದ್ದೇ.ಆದರೆ, ಆವತ್ತು ಯಾಕೋ ಏನೋ ಇಡೀ ಜಗತ್ತಿಗೇ ಸೂರ್ಯೋದಯವಾದರೂ ನನಗ್ಯಾಕೋ ಆಗಿರಲಿಲ್ಲ.ಒಂದು ಘಟನೆ ನನ್ನನ್ನು ಪದೇ ಪದೇ ಕಾಡುತ್ತಿತ್ತು.ಇನ್ನೊಂದೆಡೆ ಗೆಳೆಯರ ಕರೆಗಳು ಚಲಿಸುವ ರೈಲಿನಂತೆ ನಿರಂತರ ಸದ್ದು ಮಾಡತೊಡಗಿದ್ದವು. ವಿಧಿಯಿಲ್ಲದೆ ಇನ್ನೇನು ಗೆಳೆಯರ ಜೊತೆ ಸುತ್ತಾಡಲು ಹೊರಡೋಣ ಅನ್ನುವಷ್ಟರಲ್ಲಿ ಮನೆಯಂಗಳದಲ್ಲಿ ಒಬ್ಬ ಸನ್ಯಾಸಿಯ ದರ್ಶನವಾಯಿತು.

Advertisement

ಅವರನ್ನು ವಿಚಾರಿಸುತ್ತ, “”ಸ್ವಾಮಿಗಳೇ, ನಮ್ಮ ದೇವರು ಹಸಿದವರ ಹಸಿವನ್ನು ತಣಿಸಲಾಗದಷ್ಟು ಬಡವನೆ?” ಎಂದು ಬಿಟ್ಟೆ. ಅದಕ್ಕೆ ಆತ ಮುಗುಳ್ನಗುತ್ತ, “”ಬಡವನಿಗೆ ಹಸಿವು ಹೊಸದಲ್ಲ, ಇದ್ದುದರಲ್ಲಿ ಹಂಚಿ ತಿನ್ನುವ ಗುಣ ಅವನದು” ಅಂದರು ಮಾರ್ಮಿಕವಾಗಿ.

“”ಹಾಗಾದರೆ, ಸದಾ ದೇವರ ಸ್ಮರಣೆ ಮಾಡುತ್ತ ಊರಿಂದೂರಿಗೆ ಅಲೆದಾಡುವ ನಿಮಗೆ ಎಲ್ಲಾದರೂ ದೇವರು ಕಂಡಿ¨ªಾನೆಯೆ?” ಎಂದು ಮರುಪ್ರಶ್ನಿಸಿದೆ.

ಆದರೂ ಒಂದಷ್ಟೂ ಸಂಕೋಚಪಡದೆ, “”ಶ್ರದ್ಧೆ, ಭಕ್ತಿಯಿಂದ ಎಲ್ಲವೂ ಸಾಧ್ಯ. ಭಗವಂತನ ನೆಲೆ ಅರಿತವರು ಯಾರೂ ಇಲ್ಲ. ಯಾವ ಕ್ಷಣದಲ್ಲಿ, ಯಾವ ರೂಪದಲ್ಲೂ ಬರಬಹುದು” ಅಂದುಬಿಟ್ಟರು.

ನನಗ್ಯಾಕೋ ಸಮಾಧಾನವಾಗಲಿಲ್ಲ. ತಲೆಯಲ್ಲಿ ನೂರೆಂಟು ಆಲೋಚನೆಗಳು ಓಡತೊಡಗಿದವು. “”ಹಾಗಾದರೆ, ಜಪ-ತಪ ಮಾಡಿ ತಿಂಗಳಲ್ಲಿ ಒಂದೆರಡು ದಿನ ಉಪವಾಸ ಮಾಡುವ ನಿಮ್ಮ ಹಸಿವನ್ನು ನೀಗಿಸುವ ಭಗವಂತ, ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೆ ಪ್ರತಿದಿನ ಉಪವಾಸವಿರುವ ಬಡವನ ಕೂಗನ್ನು ಆಲಿಸುವುದಿಲ್ಲವೆ?” ಅಂದೆ.

Advertisement

ತಕ್ಷಣ ತರಾತುರಿಯಲ್ಲಿ ತನ್ನ ಜೋಳಿಗೆಯಿಂದ ಪ್ರಸಾದ ಒಂದನ್ನು ಕೊಟ್ಟು ಶ್ರೀಮಂತ ತನ್ನ ದುಡಿಮೆಯಲ್ಲಿ ದೇವರನ್ನು ಕಂಡರೆ… ಬಡವ ತನ್ನ ಯಜಮಾನನಲ್ಲಿ ದೇವರನ್ನು ಕಾಣುತ್ತಾನೆ. ಹಸಿದವರಿಗೆ, ಅಶಕ್ತರಿಗೆ ದಾನ-ಧರ್ಮ ಮಾಡುವುದು ಮಾನವ ಕುಲದ ಕರ್ತವ್ಯ ಅಂದವರೇ ತಮ್ಮ ಪ್ರಯಾಣ ಮುಂದುವರೆಸಿದರು.

ಎರಡು ದಿನಗಳ ಹಿಂದೆ ನಡೆದ ಘಟನೆ ಮತ್ತೆ ನನ್ನನ್ನು ಕಾಡತೊಡಗಿತು. ಪುಟ್ಟ ಮಗುವೊಂದು ಹಸಿವಿನಿಂದ ಕೈಚಾಚಿ ಬಂದಾಗ ತಾತ್ಸಾರ ಮನೋಭಾವದಿಂದ ಬೈದು ಕಳಿಸಿದವರ ಬಗ್ಗೆ ಅಸಹ್ಯ ಭಾವನೆ ಮೂಡತೊಡಗಿತ್ತು. ಆ ಮಗುವಿಗೆ ತಿಂಡಿ ಕೊಟ್ಟಾಗ ಮುಖದಲ್ಲಿ ಮೂಡಿದ ಮಂದಹಾಸ ಮತ್ತೆ ಕಾಡತೊಡಗಿತು.

ದೇವರು ಕೇವಲ ಮಂದಿರದಲ್ಲಿ ಅಲ್ಲ. ನಮ್ಮಲ್ಲಿಯೂ ಇದ್ದಾರೆ.

ರೂಪೇಶ್‌ ಜೆ. ಕೆ., ಕಟಪಾಡಿ

Advertisement

Udayavani is now on Telegram. Click here to join our channel and stay updated with the latest news.

Next