Advertisement
ಹಿಂದೂಗಳು ಮತ್ತು ಇತರ ಎಲ್ಲಾ ಅಲ್ಪಸಂಖ್ಯಾತಕರ ರಕ್ಷಣೆ ಮತ್ತು ಸುರಕ್ಷತೆಗೆ ಆದ್ಯತೆ ನೀಡುವುದಾಗಿ ಯೂನಸ್ ಹೇಳಿದ್ದಾರೆ.ಪ್ರಜಾಸತ್ತಾತ್ಮಕ, ಸ್ಥಿರ, ಶಾಂತಿಯುತ ಮತ್ತು ಪ್ರಗತಿಪರ ಬಾಂಗ್ಲಾದೇಶಕ್ಕೆ ಭಾರತದ ಬೆಂಬಲವನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದ್ದಾರೆ. ಹಿಂಸಾಚಾರ ಪೀಡಿತ ದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾಕ ಸಮುದಾಯಗಳ ಸುರಕ್ಷತೆಯನ್ನು ಖಾತ್ರಿಪಡಿಸುವ ಮಹತ್ವವನ್ನು ಒತ್ತಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
Related Articles
Advertisement
“ಆಯಾ ರಾಷ್ಟ್ರೀಯ ಆದ್ಯತೆಗಳಿಗೆ” ಅನುಗುಣವಾಗಿ ದ್ವಿಪಕ್ಷೀಯ ಸಂಬಂಧವನ್ನು ಮುಂದಕ್ಕೆ ಕೊಂಡೊಯ್ಯುವ ಮಾರ್ಗಗಳ ಕುರಿತು ಉಭಯ ನಾಯಕರು ಚರ್ಚಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹೇಳಿಕೆಯಲ್ಲಿ ತಿಳಿಸಿದೆ.
ಹಸೀನಾ ನೇಮಿಸಿದ್ದ ರಾಯಭಾರಿಗಳು ವಾಪಸ್: ಸರಕಾರಶೇಖ್ ಹಸೀನಾ ಸರಕಾರ ನೇಮಿಸಿದ್ದ 7 ರಾಯಭಾರಿಗಳನ್ನು ದೇಶಕ್ಕೆ ಮರಳುವಂತೆ ಬಾಂಗ್ಲಾ ಮಧ್ಯಾಂತರ ಸರಕಾರ ಆದೇಶಿಸಿದೆ. ಪ್ರಸ್ತುತ ಇರುವ ತಮ್ಮ ಜವಾಬ್ದಾರಿ ಗಳನ್ನು ಬಿಟ್ಟು ತತ್‌ಕ್ಷಣವೇ ಢಾಕಾ ದಲ್ಲಿರುವ ಕೇಂದ್ರ ಕಚೇರಿಗೆ ಬರ ಬೇಕು ಎಂದು ತಿಳಿಸಲಾಗಿದೆ. ವಾಷಿಂಗ್ಟನ್, ರಷ್ಯಾ, ಸೌದಿ ಅರೇಬಿಯಾ, ಜಪಾನ್, ಜರ್ಮನಿ, ಯುಎಇ, ಮಾಲ್ದೀವ್ಸ್‌ನಲ್ಲಿರುವ ರಾಯಭಾರಿಗಳನ್ನು ದೇಶಕ್ಕೆ ಮರಳಲು ಆದೇಶಿಸಲಾಗಿದೆ.