ಅಬುದಾಬಿ: ಸೌದಿ ದೊರೆಯಾಗಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅಧಿಕಾರವಹಿಸಿಕೊಂಡ ಬಳಿಕ, ಸೌದಿ ಅರೇಬಿಯಾದಲ್ಲಿ ಮರಣದಂಡನೆ ಪ್ರಮಾಣ ಐತಿಹಾಸಿಕ ಹೆಚ್ಚಳ ಕಂಡಿದ್ದು,ಸಲ್ಮಾನ್ ಆಡಳಿತದ ನಿಷ್ಕೃಷ್ಟ ರೀತಿಯ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ.
ಯುರೋಪಿಯನ್ ಸೌದಿ ಆರ್ಗನೈಸೇಶನ್ ಹಾಗೂ ರಿಪ್ರೀವ್ ಸಂಸ್ಥೆ ವರದಿ ಪ್ರಕಾರ,2015ರಿಂದ 2022ರ ವರೆಗೆ ಪ್ರತಿ ವರ್ಷ ಕನಿಷ್ಠ 129 ಮಂದಿಗೆ ಆಡಳಿತ ಮರಣದಂಡನೆಯನ್ನು ವಿಧಿಸಿದೆ.ಕಳೆದ ಒಂದೇ ವರ್ಷದಲ್ಲಿ 147 ಮಂದಿಯನ್ನು ಮರಣದಂಡನೆಗೆ ಗುರಿಪಡಿಸಲಾಗಿದ್ದು,2010-2014ರ ಅವಧಿಗೆ ಹೋಲಿಸಿದರೆ, ಇದು ಶೇ.82ರಷ್ಟು ಹೆಚ್ಚಳವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಕೊಲೆಯಂಥ ಕೃತ್ಯಗಳಲ್ಲಿ ಭಾಗಿಯಾದವರಿಗೆ ಮಾತ್ರ ಮರಣದಂಡನೆ ವಿಧಿಸುವುದಾಗಿ ಸಲ್ಮಾನ್ ಮಾತು ನೀಡಿದ್ದರು.ಆದರೆ, ಶಿಕ್ಷೆಗೆ ಗುರಿಪಡಿಸಲಾದ ಬಹುತೇಕ ಪುರುಷರು ಅಹಿಂಸಾತ್ಮಕ ಅಪರಾಧದಲ್ಲಿ ಭಾಗಿಯಾದವರಾಗಿದ್ದಾರೆ.ದೊರೆಯ ವಿರುದ್ಧ ಸೊಲ್ಲೆತ್ತಿದವರನ್ನೆಲ್ಲ ಧಮನ ಮಾಡಲು ಮರಣದಂಡನೆಯನ್ನೇ ಸೌದಿ ದೊರೆ ಅಸ್ತ್ರವಾಗಿಸಿಕೊಂಡಿದ್ದಾರೆಂಬ ಮಾತೂ ಕೇಳಿಬಂದಿದೆ.