Advertisement

ಜನವರಿಯಲ್ಲಿ ಎತ್ತಿನಹೊಳೆ ನೀರೆತ್ತುವ ಕಾರ್ಯ: ಜಯಪ್ರಕಾಶ್‌

03:45 AM Jun 11, 2017 | Team Udayavani |

ತುಮಕೂರು: ಎತ್ತಿನಹೊಳೆ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು, ವಿಶ್ವೇಶ್ವರಯ್ಯ ಜಲ ನಿಗಮದ ವತಿಯಿಂದ 7 ಜಿಲ್ಲೆಗಳ 29 ತಾಲೂಕುಗಳ 6557 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಕೆಲಸ ನಡೆಯುತ್ತಿದೆ. 

Advertisement

2018ರ ಜನವರಿ ಅಂತ್ಯದೊಳಗೆ ನೀರೆತ್ತುವ ಕಾರ್ಯ ಆರಂಭವಾಗಲಿದೆ ಎಂದು ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ್‌ ತಿಳಿಸಿದರು. 

ನಗರದಲ್ಲಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅಧ್ಯಕ್ಷತೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಉಪಸ್ಥಿತಿಯಲ್ಲಿ ಶನಿವಾರ ನಡೆದ ಎತ್ತಿನಹೊಳೆ ಯೋಜನೆಯ ಕಾಮಗಾರಿ ಪರಿಶೀಲನೆ ಕುರಿತು ಸಾಧಕ, ಬಾಧಕಗಳ ಪರಿಶೀಲನಾ ಸಭೆಯಲ್ಲಿ ಅವರು, ಪವರ್‌ ಪಾಯಿಂಟ್‌ ಪ್ರದರ್ಶನದ ಮೂಲಕ ಯೋಜನೆಯ ಸ್ಥೂಲ ವಿವರ ನೀಡಿದರು. ಈಗಾಗಲೇ ನೀರು ಸಂಗ್ರಹದ ಕೆಲಸದ ಜತೆಗೆ ಪೈಪ್‌ಲೈನ್‌ ಜೋಡಣೆ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಇದರ ಜತೆಯಲ್ಲಿಯೇ 266 ಕಿ.ಮೀ. ನಾಲೆ ನಿರ್ಮಾಣ, ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕು ಬೈರಗೊಂಡ್ಲು ಬಳಿ ಬಪರ್‌ ಡ್ಯಾಂ ನಿರ್ಮಾಣ ಕಾರ್ಯ ಸಹ ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಭೂಸ್ವಾಧೀನ ಕಾರ್ಯ ಚುರುಕುಗೊಂಡಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next