Advertisement

ಶಿಪ್‌ಯಾರ್ಡ್‌: ಬ್ಯಾಂಕಿಂಗ್‌ ವಲಯದ ಬೃಹತ್‌ ಹಗರಣ

11:12 AM Feb 16, 2022 | Team Udayavani |
2012ರ ವರೆಗೂ ಚೆನ್ನಾಗಿಯೇ ನಡೆಯುತ್ತಿದ್ದ ಈ ಕಂಪೆನಿ ದಿಢೀರನೇ ನಷ್ಟಕ್ಕೀಡಾಗಲು ತೆಗೆದುಕೊಂಡ ಸಾಲವನ್ನು ತನ್ನ ಇತರ ಕಂಪೆನಿಗಳಿಗೆ ವಿನಿಯೋಗಿಸಿದ್ದೇ ಕಾರಣ. ಜತೆಗೆ ಆದ್ಯತಾ ವಹಿವಾಟು, ಕೆಟ್ಟ ಹೂಡಿಕೆಗಳು ಮತ್ತು ನಿರ್ದೇಶಕರು ಮತ್ತು ಹಿರಿಯ ಅಧಿಕಾರಿಗಳಿಂದ ಅಕ್ರಮವಾಗಿ ಟ್ರೇಡಿಂಗ್‌ ಮಾಡಿದ್ದು ಕಂಪೆನಿ ನಷ್ಟದ ಹಾದಿ ಹಿಡಿಯಲು ಕಾರಣವಾಯಿತು. ಅಷ್ಟೇ ಅಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಾಣಿಜ್ಯ ಶಿಪ್‌ಗಳಿಗೆ ಬೇಡಿಕೆ ಕಡಿಮೆಯಾದುದೂ ನಷ್ಟಕ್ಕೆ ಕಾರಣವಾಯಿತು. ಇಡೀ ಹಗರಣಕ್ಕೆ ಕಾಂಗ್ರೆಸ್‌ ಕಾರಣ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ....
Now pay only for what you want!
This is Premium Content
Click to unlock
Pay with

ವಿಜಯ್‌ ಮಲ್ಯ, ನೀರವ್‌ ಮೋದಿ, ಮೆಹುಲ್‌ ಚೋಸ್ಕಿ ಅವರ ಬ್ಯಾಂಕಿಂಗ್‌ ಹಗರಣದ ಅನಂತರ ಈಗ ಮತ್ತೂಂದುಬ್ಯಾಂಕಿಂಗ್‌ ಅವ್ಯವಹಾರ ಬಯಲಿಗೆ ಬಂದಿದೆ. ಗುಜರಾತ್‌ನ ಅಹ್ಮದಾಬಾದ್‌ನಲ್ಲಿರುವ ಎಬಿಜಿ ಶಿಪ್‌ಯಾರ್ಡ್‌ ಎಂಬ ಕಂಪೆನಿ 28 ಬ್ಯಾಂಕ್‌ಗಳಿಗೆ 22,800 ಕೋಟಿ ರೂ. ಪಂಗನಾಮ ಹಾಕಿದೆ. ಹಾಗಾದರೆ ಈ ಶಿಪ್‌ಯಾರ್ಡ್‌ ಆರಂಭವಾಗಿದ್ದು ಯಾವಾಗ? ಯಾವ್ಯಾವ ಬ್ಯಾಂಕ್‌ಗಳಿಗೆ ಎಷ್ಟು ಹಣ ನೀಡಬೇಕಿದೆ ಎಂಬ ಸಮಗ್ರ ಮಾಹಿತಿ ಇಲ್ಲಿದೆ.

Advertisement

ಏನಿದು ಎಬಿಜಿ ಶಿಪ್‌ಯಾರ್ಡ್‌?1985ರ ಮಾರ್ಚ್‌ 15ರಂದು ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಆರಂಭವಾಗಿದ್ದ ಈ ಕಂಪೆನಿ, ಭಾರತೀಯ ನೌಕಾಪಡೆ, ಕೋಸ್ಟ್‌ಗಾರ್ಡ್‌ ಹಾಗೂ ವಿವಿಧ ದೇಶಗಳಲ್ಲಿರುವ ಹಲವಾರು ಖಾಸಗಿ ಶಿಪ್‌ ಕಂಪೆನಿಗಳಿಗೆ ಬಿಡಿಭಾಗಗಳು ಮತ್ತು ರಿಪೇರಿ ಕೆಲಸವನ್ನು ಮಾಡಿಕೊಡುತ್ತಿತ್ತು. ಇದರ ಮಾಲಕರು ರಿಷಿ ಅಗರ್ವಾಲ್‌. ಗುಜರಾತ್‌ನ ಸೂರತ್‌, ದಹೇಜ್‌ನಲ್ಲಿ ಶಿಪ್‌ಯಾರ್ಡ್‌ಗಳು ಕಾರ್ಯನಿರ್ವಹಿಸುತ್ತಿವೆ.  ಸೂರತ್‌ನ ಶಿಪ್‌ಯಾರ್ಡ್‌ನಲ್ಲಿ 18,000 ಡೆಡ್‌ವೇಯ್‌ ಟೋನೇಜ್‌ ಸಾಮರ್ಥ್ಯದ ಹಡಗುಗಳು ಮತ್ತು ದಹೇಜ್‌ನ ಶಿಪ್‌ಯಾರ್ಡ್‌ನಲ್ಲಿ 1,12,000 ಡೆಡ್‌ವೇಯ್‌ ಟೋನೇಜ್‌ ಸಾಮರ್ಥ್ಯದ ಹಡಗು ನಿರ್ಮಾಣದ ಸಾಮರ್ಥ್ಯ ಹೊಂದಿವೆ.

165 ಹಡಗುಗಳ ನಿರ್ಮಾಣ
ಕಳೆದ 16 ವರ್ಷಗಳಲ್ಲಿ ಎಬಿಜಿ ಶಿಪ್‌ಯಾರ್ಡ್‌ ಕಂಪೆನಿ 165 ಹಡಗುಗಳನ್ನು ನಿರ್ಮಾಣ ಮಾಡಿದೆ. ಅಂದರೆ  ನ್ಯೂಸ್‌ಪ್ರಿಂಟ್‌ ಕ್ಯಾರಿಯರ್ಸ್‌, ಬಲ್ಕ್ ಸಿಮೆಂಟ್‌ ಕ್ಯಾರಿಯರ್ಸ್‌, ಇಂಟರ್‌ಪ್ರಿಟರ್ಸ್‌ ಬೋಟ್‌, ಡೈನಾಮಿಕ್‌ ಪೊಸಿಶನಿಂಗ್‌ ಡೈವಿಂಗ್‌ ಸಪೋರ್ಟ್‌ ವೆಸೆಲ್ಸ್‌, ಪುಶಿಂಗ್‌ ಟಗ್ಸ್‌ಗಳನ್ನು ತಯಾರಿಸಿ ಭಾರತವೂ ಸೇರಿದಂತೆ ವಿದೇಶಗಳಿಗೆ ಮಾರಾಟ ಮಾಡುತ್ತಿತ್ತು. ಈ ಶಿಪ್‌ಯಾರ್ಡ್‌ನಲ್ಲಿ ತಯಾರಾಗುತ್ತಿದ್ದ ಬೋಟ್‌ಗಳ ಗುಣಮಟ್ಟ ಉತ್ತಮವಾಗಿದ್ದರಿಂದ ಅಂತಾರಾಷ್ಟ್ರೀಯ ಕ್ಲಾಸಿಫಿಕೇಶನ್‌ ಸೊಸೈಟಿಗಳಾದ ಲೆಯಾಯ್ಡ, ಅಮೆರಿಕನ್‌ ಬ್ಯೂರೋ ಆಫ್ ಶಿಪ್ಪಿಂಗ್‌, ಬ್ಯೂರೋ ವೆರಿಟಾಸ್‌, ಐಆರ್‌ಎಸ್‌ ಮತ್ತು ಡಿಎನ್‌ವಿಗಳಿಂದ ಒಪ್ಪಿಗೆಯೂ ಸಿಕ್ಕಿದೆ.

ಅಷ್ಟೇ ಅಲ್ಲ ಈ ಕಂಪೆನಿ ಶುರು ಮಾಡಿದ 20 ವರ್ಷಗಳಲ್ಲೇ ಭಾರತ ಸರಕಾರದಿಂದ ಕ್ಲಿಯರೆನ್ಸ್‌ ಪಡೆದುಕೊಂಡಿತ್ತು. ಅಂದರೆ ಭಾರತೀಯ ನೌಕಾಪಡೆ ಮತ್ತು ಕೋಸ್ಟ್‌ಗಾರ್ಡ್‌ಗಾಗಿ ಸಮರನೌಕೆಗಳು ಹಾಗೂ ಅತ್ಯಗತ್ಯ ವೆಸೆಲ್ಸ್‌ಗಳ ನಿರ್ಮಾಣಕ್ಕೆ ಅನುಮತಿ ಸಿಕ್ಕಿತ್ತು. ಪೈಪಾವೇವ್‌ ಶಿಪ್‌ಯಾರ್ಡ್‌ ಬಿಟ್ಟರೆ ಈ ರೀತಿ ಅನುಮತಿ ಸಿಕ್ಕಿದ ದೊಡ್ಡ ಕಂಪೆನಿ ಇದೇ ಆಗಿತ್ತು.

2012ರ ಅನಂತರ ನಷ್ಟದತ್ತ
ಅಲ್ಲಿವರೆಗೆ ಚೆನ್ನಾಗಿಯೇ ನಡೆಯುತ್ತಿದ್ದ ಶಿಪ್‌ಯಾರ್ಡ್‌ ಕಂಪೆನಿ 2012ರಲ್ಲಿ ನಷ್ಟದತ್ತ ತಿರುಗಿತು. ಎರ್ನೆಸ್ಟ್‌ ಮತ್ತು ಯಂಗ್‌ ಎಲ್‌ಎಲ್‌ಪಿ ನಡೆಸಿದ ಆಡಿಟ್‌ ವರದಿ ಪ್ರಕಾರ, 2012ರಿಂದ 2017ರ ವರೆಗೆ ಈ ಕಂಪೆನಿ ಹಲವಾರು ಹಣಕಾಸು ಅಕ್ರಮಗಳನ್ನು ನಡೆಸಿತು. ಅಂದರೆ 28 ಬ್ಯಾಂಕ್‌ಗಳಿಂದ ಸಾಲ ಪಡೆದ ಈ ಕಂಪೆನಿ, ಈ ಹಣವನ್ನು ಬೇರೆ ಉದ್ದೇಶಗಳಿಗೆ ಉಪಯೋಗಿಸತೊಡಗಿತು. ಅಲ್ಲದೆ 2010ರಿಂದ 2011ರ ಒಳಗೆ ಬ್ಯಾಂಕ್‌ಗಳಿಂದ ಸಾಲ ಪಡೆದು, ಇದನ್ನು ವಿದೇಶಿ ಹೂಡಿಕೆಗೂ ಬಳಕೆ ಮಾಡಿತು. ಅಂದರೆ ಸಿಂಗಾಪುರದಲ್ಲಿ ಆರಂಭಿಸಲಾಗಿದ್ದ ಎಬಿಜಿ ಶಿಪ್‌ಯಾರ್ಡ್‌ಗೆ 236,40,00,000 ರೂ.ಗಳನ್ನು ವಿನಿಯೋಗಿಸಿತು.

Advertisement

ಸಹ ಸಂಸ್ಥೆಗಳಿಂದಲೇ ನಷ್ಟ
2012ರ ವರೆಗೂ ಚೆನ್ನಾಗಿಯೇ ನಡೆಯುತ್ತಿದ್ದ ಈ ಕಂಪೆನಿ ದಿಢೀರನೇ ನಷ್ಟಕ್ಕೀಡಾಗಲು ತೆಗೆದುಕೊಂಡ ಸಾಲವನ್ನು ತನ್ನ ಇತರ ಕಂಪೆನಿಗಳಿಗೆ ವಿನಿಯೋಗಿಸಿದ್ದೇ ಕಾರಣ. ಜತೆಗೆ ಆದ್ಯತಾ ವಹಿವಾಟು, ಕೆಟ್ಟ ಹೂಡಿಕೆಗಳು ಮತ್ತು ನಿರ್ದೇಶಕರು ಮತ್ತು ಹಿರಿಯ ಅಧಿಕಾರಿಗಳಿಂದ ಅಕ್ರಮವಾಗಿ ಟ್ರೇಡಿಂಗ್‌ ಮಾಡಿದ್ದು ಕಂಪೆನಿ ನಷ್ಟದ ಹಾದಿ ಹಿಡಿಯಲು ಕಾರಣವಾಯಿತು. ಅಷ್ಟೇ ಅಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಾಣಿಜ್ಯ ಶಿಪ್‌ಗಳಿಗೆ ಬೇಡಿಕೆ ಕಡಿಮೆಯಾದುದೂ ನಷ್ಟಕ್ಕೆ ಕಾರಣವಾಯಿತು.

ಈ ಎಲ್ಲ ಬೆಳವಣಿಗೆಗಳು ಆದ ಮೇಲೆ ನೌಕಾಪಡೆಯು, ಈ ಕಂಪೆನಿಯೊಂದಿಗೆ ಮಾಡಿಕೊಂಡ ಒಪ್ಪಂದವನ್ನು ಮುರಿದುಕೊಂಡಿತು. ಹಾಗೆಯೇ 2015ರ ಬಳಿಕ ರಕ್ಷಣ ಇಲಾಖೆ ಈ ಕಂಪೆನಿ ಜತೆ ಯಾವುದೇ ಒಪ್ಪಂದ ಮಾಡಿಕೊಳ್ಳಲಿಲ್ಲ.

2005ರಿಂದ 2010ರ ಒಳಗೆ ಸಾಲ
ಎಬಿಜಿಗೆ 28 ಬ್ಯಾಂಕ್‌ಗಳ ಒಕ್ಕೂಟ ಸಾಲ ನೀಡಿದ್ದು 2005ರಿಂದ 2010ರ ಒಳಗೆ. ಈ ಬಗ್ಗೆ ಸಿಬಿಐ ತನ್ನ ವರದಿಯಲ್ಲಿ ತಿಳಿಸಿದೆ. ಎಸ್‌ಬಿಐ ಹೇಳಿದ ಪ್ರಕಾರ 2011ರಿಂದ 2017ರ ವರೆಗೆ ಅಕ್ರಮವಾಗಿದೆ. ಅಲ್ಲದೆ 2019ರ ಜೂನ್‌ನಲ್ಲಿ ಕಂಪೆನಿಯ ಮೋಸದ ಬಗ್ಗೆ ಗೊತ್ತಾಯಿತಾದರೂ 2019ರ ನವೆಂಬರ್‌ನಲ್ಲಿ ಎಸ್‌ಬಿಐ, ಸಿಬಿಐಗೆ ದೂರು ನೀಡಿತು. ಜತೆಗೆ 2020ರಲ್ಲಿ ಎಸ್‌ಬಿಐ ಮತ್ತೂಂದು ವರದಿಯನ್ನು ಸಲ್ಲಿಸಿತು. ಈಗ ಸಿಬಿಐ ತನಿಖೆ ಶುರು ಮಾಡಿದ ಮೇಲೆ ಪ್ರಕರಣ ಬೆಳಕಿಗೆ ಬಂದಿದೆ.

ರಾಜಕೀಯ ವಾಕ್ಸಮರ
ಎಬಿಜಿ ಶಿಪ್‌ಯಾರ್ಡ್‌ನ ಬಹುದೊಡ್ಡ ಮೋಸ ಬಹಿರಂಗವಾದ ಮೇಲೆ ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ವಾಕ್ಸಮರವೂ ಜೋರಾಗಿ ನಡೆಯುತ್ತಿದೆ. ಬಿಜೆಪಿ ಕಾಲದಲ್ಲಿ ಮತ್ತೊಂದು ಬ್ಯಾಂಕಿಂಗ್‌ ಹಗರಣ ಪತ್ತೆಯಾಗಿದೆ. ಇದಕ್ಕೆ ಬಿಜೆಪಿಯೇ ಕಾರಣ ಎಂದು ಕಾಂಗ್ರೆಸ್‌ ಆರೋಪಿಸಿದೆ. ಆದರೆ 2013ರಲ್ಲೇ ಈ ಶಿಪ್‌ಯಾರ್ಡ್‌ ದಿವಾಳಿಯಾಗಿತ್ತು. ಆಗ ಕಾಂಗ್ರೆಸ್‌ ಅಧಿಕಾರದಲ್ಲಿತ್ತು. ಸಾಲ ಕೊಟ್ಟಿದ್ದು ಕಾಂಗ್ರೆಸ್‌ ಕಾಲದಲ್ಲೇ. ಹೀಗಾಗಿ ಇಡೀ ಹಗರಣಕ್ಕೆ ಕಾಂಗ್ರೆಸ್‌ ಕಾರಣ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

2013ರಲ್ಲೇ ಎನ್‌ಪಿಎ ಘೋಷಣೆ
2012ರಲ್ಲಿ ನಷ್ಟದ ಹಾದಿ ಹಿಡಿದ ಮೇಲೆ ಮಾರನೇ ವರ್ಷವೇ ಎಬಿಜಿ ಶಿಪ್‌ಯಾರ್ಡ್‌ ಕಂಪೆನಿಯನ್ನು ಅನುತ್ಪಾದಕ ಆಸ್ತಿ (ಎನ್‌ಪಿಎ) ಎಂದು ಘೋಷಣೆ ಮಾಡಲಾಯಿತು. ಬಳಿಕ ಕೆಲವು ಬ್ಯಾಂಕ್‌ಗಳು ಇದರ ಪುನರುಜ್ಜೀವನಕ್ಕಾಗಿ ಮತ್ತೆ ಸಾಲ ಕೊಟ್ಟವು. ಆದರೂ ಈ ಕಂಪೆನಿ ಚೇತರಿಸಿಕೊಳ್ಳಲಿಲ್ಲ. 2017ರಲ್ಲಿ ಮತ್ತೂಮ್ಮೆ ಎನ್‌ಪಿಎ ಎಂದು ಘೋಷಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.