ಪಣಜಿ: ಗೋವಾದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜ. 4 ರಿಂದ ಜ. 26 ರ ವರೆಗೆ ರಾಜ್ಯದಲ್ಲಿ ಆಫ್‍ಲೈನ್ ತರಗತಿಗಳನ್ನು ಬಂದ್ ಮಾಡಲು ಸರ್ಕಾರ ನಿರ್ಣಯ ತೆಗೆದುಕೊಂಡಿದೆ ಎಂದು ತಜ್ಞ ಸಮಿತಿಯ ಸದಸ್ಯ ಡಾ. ಶೇಖರ್ ಸಾಲ್ಕರ್ ಮಾಹಿತಿ ನೀಡಿದ್ದಾರೆ.
ಕೋವಿಡ್-19 ಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಸರ್ಕಾರಕ್ಕೆ ಮಾರ್ಗದರ್ಶನ ನೀಡಲು ರಚಿಸಲಾದ ರಾಜ್ಯ ಕಾರ್ಯಪಡೆಯ ಸಭೆಯಲ್ಲಿ ಭಾಗವಹಿಸಿದ ನಂತರ ಅವರು ಸುದ್ಧಿಗಾರರೊಂದಿಗೆ ಮಾತನಾಡಿದರು.
10, 11 ಮತ್ತು 12 ನೇಯ ತರಗತಿಯ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡುತ್ತಿರುವುದರಿಂದ ಅವರು ಶಾಲೆಗೆ ತೆರಳಬೇಕಾಗಲಿದೆ. ಡೋಸ್ ಪಡೆದ ನಂತರ ಈ ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿಯೇ ಇದ್ದು ಆನ್‍ಲೈನ್ ತರಗತಿ ಮುಂದುವರೆಸಬಹುದು ಎಂದರು.
ಪರೀಕ್ಷೆಗಳು ಆಫ್‍ಲೈನ್‍ನಲ್ಲಿ ನಡೆಯಲಿದೆ. ಶೀಘ್ರದಲ್ಲಿಯೇ ಗೋವಾ ಸರ್ಕಾರ ಈ ಕುರಿತು ಅಧೀಕೃತ ಮಾರ್ಗಸೂಚಿಗಳನ್ನು ಹೊರಡಿಸಲಿದೆ ಎಂದು ಡಾ.ಶೇಖರ್ ಸಾಲ್ಕರ್ ಮಾಹಿತಿ ನೀಡಿದರು.
Related Articles
ಇದನ್ನೂ ಓದಿ:ಸಾಲಭಾದೆ: ಅಂಗಡಿಯಲ್ಲೇ ನೇಣಿಗೆ ಶರಣಾದ ವ್ಯಾಪಾರಿ
ರಾಜ್ಯ ಟಾಸ್ಕ್ ಫೋರ್ಸ್ ಸಮಿತಿಯು ಜನವರಿ 26 ರ ವರೆಗೆ ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 6 ಗಂಟೆಯ ವರೆಗೆ ನೈಟ್ ಕಫ್ರ್ಯೂ ಹೇರುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಹಿನ್ನೆಲೆಯಲ್ಲಿ ಒಳಾಂಗಣ ಸಮಾರಂಭಗಳಿಗೆ ಮತ್ತಷ್ಟು ನಿರ್ಬಂಧ ಹೇರಲಾಗುವುದು, ಬಯಲು ಪ್ರದೇಶದಲ್ಲಿ ನಡೆಯುವ ಸಮಾರಂಭಗಳಿಗೆ ಕಡಿಮೆ ನಿರ್ಬಂಧ ವಿಧಿಸಲಾಗುವುದು ಎಂದು ಹೇಳಿದರು.