Advertisement

ಏಪ್ರಿಲ್‌ನಲ್ಲಿ ವಿದ್ಯುತ್‌ ದರ ಪರಿಷ್ಕರಣೆ

03:45 AM Mar 28, 2017 | |

ಬೆಂಗಳೂರು: ವಿದ್ಯುತ್‌ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ವಿದ್ಯುತ್‌ ಸರಬರಾಜು ಕಂಪೆನಿಗಳು ಸಲ್ಲಿಸಿದ್ದ ಪ್ರಸ್ತಾವನೆ ಕುರಿತ ವಿಚಾರಣೆಗಳು ಪೂರ್ಣಗೊಂಡಿದ್ದು, ಏಪ್ರಿಲ್‌ ಮೊದಲ ವಾರದಲ್ಲಿ ಈ ಸಂಬಂಧ ಆದೇಶ ಹೊರಬೀಳುವ ಸಾಧ್ಯತೆ ಇದೆ.

Advertisement

ಸಾಮಾನ್ಯವಾಗಿ ಮಾರ್ಚ್‌ 31ರಂದು ದರ ಪರಿಷ್ಕರಣೆ ಆದೇಶ ಮಾಡಲಾಗುತ್ತದೆ. ಆದರೆ, ಬೆಸ್ಕಾಂ ತಾನು ಸಲ್ಲಿಸಿದ ಪ್ರಸ್ತಾವನೆಯನ್ನು ಫೆಬ್ರವರಿ 16ರಂದು ದಿಢೀರ್‌ ತಿದ್ದುಪಡಿ ಮಾಡಿದ್ದರಿಂದ ಗ್ರಾಹಕರಿಗೆ ಮತ್ತೆ 30 ದಿನಗಳ ಕಾಲಾವಕಾಶ ನೀಡಲಾಗಿತ್ತು. ಮಾರ್ಚ್‌ 24ರಂದು ಈ ಸಂಬಂಧದ ವಿಚಾರಣೆಯ ಕೂಡ ಮುಗಿದಿದೆ. ಈಗ ಎಷ್ಟು ಪರಿಷ್ಕರಣೆಗೆ ಸಂಬಂಧಿಸಿದ ಪ್ರಕ್ರಿಯೆ ನಡೆದಿದೆ ಎಂದು ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ದ ಅಧ್ಯಕ್ಷ ಎಂ.ಕೆ. ಶಂಕರಲಿಂಗೇಗೌಡ ತಿಳಿಸಿದರು.

ಮೊದಲ ವಾರದಲ್ಲಿ ಆದೇಶ
ವಿದ್ಯುತ್‌ ಸರಬರಾಜು ಕಂಪೆನಿ (ಎಸ್ಕಾಂ)ಗಳು ಪ್ರತಿ ಯೂನಿಟ್‌ಗೆ 1.40 ರೂ. ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದವು. ಇದಕ್ಕೆ ಸಂಬಂಧಿಸಿದಂತೆ ಗ್ರಾಹಕರಿಂದ ಬಂದಿದ್ದ ಆಕ್ಷೇಪಣೆಗಳ ವಿಚಾರಣೆ ಈಗಾಗಲೇ ಪೂರ್ಣಗೊಂಡಿದೆ. ಬಹುತೇಕ ಏಪ್ರಿಲ್‌ ಮೊದಲ ವಾರದಲ್ಲಿ ದರ ಪರಿಷ್ಕರಣೆ ಆದೇಶ ಹೊರಬೀಳುವ ಸಾಧ್ಯತೆ ಇದೆ.

ಏಪ್ರಿಲ್‌ 12ಕ್ಕೆ ನಂಜನಗೂಡು ಮತ್ತು ಗುಂಡ್ಲುಪೇಟೆಗೆ ಮತದಾನ ನಡೆಯಲಿದೆ. ಅದಕ್ಕೂ ಮುನ್ನವೇ ದರ ಪರಿಷ್ಕರಣೆ ಆದೇಶವಾಗುವ ಸಂಭವವಿದೆ.

2011-12ರಿಂದ ಈವರೆಗೆ ಎಸ್ಕಾಂಗಳು ವಿದ್ಯುತ್‌ ದರ ಹೆಚ್ಚಳಕ್ಕೆ ಸಲ್ಲಿಸಿದ ಪ್ರಸ್ತಾವನೆ ಹಾಗೂ ಕೆಇಆರ್‌ಸಿ ಅನುಮೋದಿಸಿದ ದರದ ವಿವರ ಹೀಗಿದೆ (ಪೈಸೆಗಳಲ್ಲಿ).
ವರ್ಷ    ಎಸ್ಕಾಂಗಳು ಕೇಳಿದ್ದು    ಕೆಇಆರ್‌ಸಿ ಅನುಮೋದಿಸಿದ್ದು
2011-12    88    23
2012-13    73    13
2013-14    70    23
2014-15    66    32
2015-16    80    13
2016-17    1.02 ರೂ.    48

Advertisement
Advertisement

Udayavani is now on Telegram. Click here to join our channel and stay updated with the latest news.

Next