Advertisement

ಸೇನೆಯ ಮೇಲೆ ಎಸೆಯಲು ಗ್ರೆನೇಡ್‌ ಇಟ್ಟುಕೊಂಡಿದ್ದ ಓವರ್ ಗ್ರೌಂಡ್ ವರ್ಕರ್ ಬಂಧನ

10:12 PM May 07, 2023 | Team Udayavani |

ಶ್ರೀನಗರ : ಜಮ್ಮು ಮತ್ತು ಕಾಶ್ಮೀರ ದ ಕುಪ್ವಾರ ಜಿಲ್ಲೆಯ ಪೊಲೀಸರು ಸೇನೆಯೊಂದಿಗೆ ಜಂಟಿ ಕಾರ್ಯಾಚರಣೆಯಲ್ಲಿ, ಕ್ರಾಲ್‌ಪೋರಾ ಪ್ರದೇಶದಿಂದ ಉಗ್ರ ಟರ್ನ್ ಓವರ್ ಗ್ರೌಂಡ್ ವರ್ಕರ್ (ಒಜಿಡಬ್ಲ್ಯು) ಒಬ್ಬನನ್ನು ಗ್ರೆನೇಡ್‌ನೊಂದಿಗೆ ಬಂಧಿಸಿದ್ದಾರೆ.

Advertisement

ಬಂಧಿತನನ್ನು ರಫೀಕ್ ಅಹ್ಮದ್ ಖಾನ್ ಎಂದು ಗುರುತಿಸಲಾಗಿದೆ. ಆತ ಪಾಕಿಸ್ಥಾನದಿಂದ ತರಬೇತಿ ಪಡೆದ ಭಯೋತ್ಪಾದಕನಾಗಿದ್ದು, ಈಗ ಭಯೋತ್ಪಾದಕ ಸಂಘಟನೆ ಹಿಜಬುಲ್ ಮುಜಾಯಿದ್ದೀನ್ ಗೆ ಟರ್ನ್ ಓವರ್ ಗ್ರೌಂಡ್ ವರ್ಕರ್ ಆಗಿ ಕೆಲಸ ಮಾಡುತ್ತಿದ್ದ ಎಂದು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಸಮಯದಲ್ಲಿ, ಹಂದ್ವಾರದ ಚೋಗುಲ್ ಪ್ರದೇಶದಿಂದ ಗ್ರೆನೇಡ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಅದನ್ನು ಭದ್ರತಾ ಪಡೆಗಳ ಮೇಲೆ ಎಸೆಯಲು ತನ್ನ ಪಾಕ್ ಮೂಲದ ಹ್ಯಾಂಡ್ಲರ್‌ನ ಸೂಚನೆಯ ಮೇರೆಗೆ ಕ್ರಾಲ್‌ಪೋರಾ ಪ್ರದೇಶದಲ್ಲಿ ಯಾರಿಗಾದರೂ ತಲುಪಿಸಲು ಸಿದ್ದನಾಗಿದ್ದ ಎಂದು ಆತ ಬಹಿರಂಗಪಡಿಸಿದ್ದಾನೆ. ಯುಎ(ಪಿ) ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next