ಶ್ರೀನಗರ: ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ನಗರದ ಕೇಂದ್ರ ಭಾಗದಲ್ಲಿರುವ ಲಾಲ್ ಚೌಕ್‌ನಲ್ಲಿ ಬುಧವಾರ ತ್ರಿವರ್ಣ ಧ್ವಜ ಹಾರಿಸಲಾಗಿದೆ.
ಬರೋಬ್ಬರಿ 30 ವರ್ಷಗಳ ಬಳಿಕ ಈ ಸ್ಥಳದಲ್ಲಿ ಧ್ವಜಾರೋಹಣ ಮಾಡಲಾಗಿದೆ. ಸಾಮಾಜಿಕ ಕಾರ್ಯಕರ್ತರಾಗಿರುವ ಸಾಜಿದ್ ಯೂಸುಫ್ ಮತ್ತು ಸಾಹಿಲ್ ಬಶೀರ್ ಭಟ್ ಸಂಗಡಿಗರೊಂದಿಗೆ ಧ್ವಜಾರೋಹಣ ನಡೆಸಿಕೊಟ್ಟಿದ್ದಾರೆ.
ಕ್ರೇನ್ ಬಳಸಿ ಧ್ವಜಾರೋಹಣ ನಡೆಸಲಾಗಿದೆ. ನಗರದ ಕಲಾವಿದರು ಸ್ಥಳದಲ್ಲಿ ನೃತ್ಯ ಪ್ರದರ್ಶನ ಮಾಡಿದರು. ಕರಾಟೆ ಪಟುಗಳು ಕರಾಟೆ ಪ್ರದರ್ಶನ ನೀಡಿದರು.
ಇದನ್ನೂ ಓದಿ:ಯುವಕರು ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣನ ಆದರ್ಶ ಪಾಲಿಸಬೇಕು:ಶಾಸಕ ಪರಣ್ಣ ಮುನವಳ್ಳಿ
ಗಮನಾರ್ಹ ಅಂಶವೆಂದರೆ, ಇದೇ ಮೊದಲ ಬಾರಿಗೆ ಶ್ರೀನಗರದ ವಿವಿಧ ಭಾಗಗಳಲ್ಲಿ ರಾಷ್ಟ್ರಧ್ವಜ ಹಾರಿಸಲಾಗಿದೆ.
1992ರಲ್ಲಿ ಬಿಜೆಪಿಯ ನಾಯಕ ಡಾ.ಮುರಳೀ ಮನೋಹರ ಜೋಶಿಯವರು ತಿರಂಗಾಯಾತ್ರೆ ಬಳಿಕ ಲಾಲ್‌ಚೌಕ್‌ನಲ್ಲಿ ರಾಷ್ಟ್ರ ಧ್ವಜಾರೋಹಣ ನಡೆಸಿದ್ದರು.