Advertisement
ಜನವರಿಯಲ್ಲಿ ಜೋ ಬೈಡನ್ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವಾಗ ಲೆವಿನ್, ಪೆನ್ಸಿಲ್ವೇನಿಯಾದ ಆರೋಗ್ಯ ಕೇಂದ್ರವನ್ನು ಮುನ್ನಡೆಸುತ್ತಿದ್ದರು. ಈಗ ಅಧ್ಯಕ್ಷರ ಆರೋಗ್ಯ ಸಹಾಯಕ ಕಾರ್ಯದರ್ಶಿಯಾಗಿ ಆಯ್ಕೆಯಾಗುವ ಮೂಲಕ ಅಮೆರಿಕಾದ ಸೆನೆಟ್ ನಲ್ಲಿ ಉನ್ನತ ಹುದ್ದೆಗೇರಿದ ಮೊದಲ ತೃತೀಯ ಲಿಂಗಿ ಎಂಬ ಹೆಗ್ಗಳಿಕೆಗೆ ಲೆವಿನ್ ಪಾತ್ರವಾಗಿದ್ದಾರೆ.
Related Articles
Advertisement
ಡಾ. ಲೆವಿನ್ ಪೆನ್ ಸ್ಟೇಟ್ ಕಾಲೇಜ್ ಆಫ್ ಮೆಡಿಸಿನ್ ನಲ್ಲಿ ಶೀಶುವೈದ್ಯೆ ಮತ್ತು ಮನೋವೈದ್ಯ ಶಾಸ್ತ್ರದ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಈ ಆಯ್ಕೆಯ ಬಗ್ಗೆ ಬೆಂಬಲ ಸೂಚಿಸಿರುವ ಶ್ವೇತಭವನದ ವಕ್ತಾರ ಮ್ಯಾಟ್ ಹಿಲ್, ಅಮೆರಿಕಾದ ಸೆನೆಟ್ ನ ಉನ್ನತ ಹುದ್ದೆಗೆ ಆಯ್ಕೆಗೊಂಡ ಮೊದಲ ಅಮೆರಿಕಾದ ತೃತೀಯ ಲಿಂಗಿ ಎಂಬ ಹೆಗ್ಗಳಿಕೆಗೆ ಡಾ. ಲೆವಿನ್ ಪಾತ್ರರಾಗಿದ್ದಾರೆ. ಇದು ಶ್ವೇತಭವನದ ಐತಿಹಾಸಿಕ ಕ್ಷಣ ಎಂದು ಅವರು ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.
ಓದಿ : ದೇಶದಲ್ಲಿ ಕಳೆದ 24ಗಂಟೆಗಳಲ್ಲಿ 53,476 ಕೋವಿಡ್ ಪ್ರಕರಣ ಪತ್ತೆ, 5 ತಿಂಗಳಲ್ಲಿ ಗರಿಷ್ಠ