Advertisement

M K Stalin: ತಮಿಳುನಾಡಲ್ಲಿ ಗೂಗಲ್‌ ಪಿಕ್ಸೆಲ್‌ ಫೋನ್‌ ತಯಾರಿಕೆ ಆರಂಭ: ಸ್ಟಾಲಿನ್‌

08:51 PM May 23, 2024 | Team Udayavani |

ಚೆನ್ನೈ: ಟೆಕ್‌ ದೈತ್ಯ ಗೂಗಲ್‌ ಸಂಸ್ಥೆ ಫಾಕ್ಸ್‌ಕಾನ್‌ ಜೊತೆಗೆ ಒಪ್ಪಂದ ಮಾಡಿಕೊಂಡು ಇದೇ ಮೊದಲ ಬಾರಿಗೆ ತಮಿಳುನಾಡಲ್ಲಿ “ಪಿಕ್ಸೆಲ್‌’ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸಲಿದೆ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಹೇಳಿದ್ದಾರೆ.

Advertisement

ಈಗಾಗಲೇ ಈ ಬಗ್ಗೆ ಗೂಗಲ್‌ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗಿದೆ. ಶೀಘ್ರದಲ್ಲೇ ಚೆನ್ನೈಗೆ ಆಗಮಿಸಿ ಅವರು ಒಪ್ಪಂದದ ಬಗ್ಗೆ ಮಾತನಾಡಲಿದ್ದಾರೆ. ಚೆನ್ನೈ ಸಮೀಪದಲ್ಲಿ ಗೂಗಲ್‌ ಪಿಕ್ಸೆಲ್‌ ಅವರ ತಯಾರಿಕಾ ಕೇಂದ್ರ ಆರಂಭವಾಗುತ್ತಿರುವುದು ಉದ್ಯೋಗಾವಕಾಶವನ್ನೂ ಸೃಷ್ಟಿಸಲಿದೆ ಎಂದು ಅವರು ಹೇಳಿದ್ದಾರೆ. 2030ರ ವೇಳೆಗೆ 1 ಲಕ್ಷ ಕೋಟಿ ಅಮೆರಿಕನ್‌ ಡಾಲರ್‌ನಷ್ಟು ಹೂಡಿಕೆಯಾಗುವಂತೆ ಮಾಡಲು ಸ್ಟಾಲಿನ್‌ ಯೋಜನೆ ರೂಪಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next