Advertisement

ಪ್ರತಿಯೊಂದು ಸಿಗರೇಟಿನ ಮೇಲೆ ಎಚ್ಚರಿಕೆಯ ಸಂದೇಶ ಮುದ್ರಿಸಲು ಕೆನಡಾ ನಿರ್ಧಾರ

09:15 AM Jun 14, 2022 | Team Udayavani |

ಹೊಸದಿಲ್ಲಿ: ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಸಿಗರೇಟ್‌ ಪ್ಯಾಕ್‌ಗಳ ಮೇಲೆ ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ಎಂಬ ಸಂದೇಶಗಳನ್ನು ನಮೂದಿಸಲಾಗಿರುತ್ತದೆ. ಆದರೆ ಈ ವಿಚಾರದಲ್ಲಿ ಕೆನಡಾ ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ.

Advertisement

ಸಿಗರೇಟ್‌ ಪ್ಯಾಕ್‌ನ ಸುತ್ತಲೂ, ಸಿಗರೇಟ್‌ಗಳಲ್ಲಿಯೂ ತಂಬಾಕು ಸೇವನೆಯಿಂದ ಆಗುವ ಆರೋಗ್ಯ ಸಮಸ್ಯೆಗಳ ಚಿತ್ರಗಳು, ಸಂದೇಶಗಳನ್ನು ಮುದ್ರಿಸುವುದನ್ನು ಕಡ್ಡಾಯಗೊಳಿಸಿದೆ.

ಅಷ್ಟೇ ಅಲ್ಲ, ಪ್ರತಿಯೊಂದು ಸಿಗರೇಟಿನ ಮೇಲೂ “ಸಿಗರೇಟು ಸೇವನೆ ನಿಮ್ಮನ್ನು ಕೊಲ್ಲುತ್ತದೆ’ ಎಂಬ ವಾಕ್ಯವನ್ನು ಮುದ್ರಿಸುವುದನ್ನು ಕಡ್ಡಾಯಗೊಳಿಸಿದೆ.

ಸಿಗರೇಟು ಪ್ಯಾಕ್‌ನ ಮುಂಭಾಗದಲ್ಲಿ ಅಸ್ವಸ್ಥ ಶ್ವಾಸಕೋಶದ ಚಿತ್ರ ಹಾಕಿ, ಸಿಗರೇಟ್‌ನಿಂದ ಶ್ವಾಸಕೋಶಕ್ಕೇನು ತೊಂದರೆಯಾಗುತ್ತದೆ ಎಂಬುದರ ಬಗ್ಗೆ ಸಂಕ್ಷಿಪ್ತ ಮಾಹಿತಿ ಹಾಕಬೇಕೆಂದು ಹೇಳಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next