ತಮಿಳುನಾಡು: ತಮಿಳುನಾಡಿನ ಕೆಲ ದೇವಸ್ಥಾನಗಳಲ್ಲಿ ಮಹಿಳೆಯರೇ ಅರ್ಚಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎನ್ನಲಾಗಿದೆ. ಅರ್ಚಕರಾಗಲು ಯಶಸ್ವಿಯಾಗಿ ತರಬೇತಿಯನ್ನು ಪೂರ್ಣಗೊಳಿಸಿದ ತಮಿಳುನಾಡಿನ ಮೂವರು ಯುವತಿಯರನ್ನು ಶೀಘ್ರದಲ್ಲೇ ರಾಜ್ಯದ ದೇವಾಲಯಗಳಲ್ಲಿ ಸಹಾಯಕ ಅರ್ಚಕರಾಗಿ ನೇಮಿಸಲಾಗುವುದು ಎಂದು ತಮಿಳುನಾಡು ಸರಕಾರ ಹೇಳಿದೆ.
ಮಹಿಳೆಯರಾದ ಕೃಷ್ಣವೇಣಿ, ಎಸ್ ರಮ್ಯಾ ಮತ್ತು ಎನ್ ರಂಜಿತಾ ಅವರನ್ನು ರಾಜ್ಯ ಸರ್ಕಾರದ ಅಡಿಯಲ್ಲಿ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು ನಿರ್ವಹಿಸುವ ದೇವಾಲಯಗಳಲ್ಲಿ ಅರ್ಚಕರನ್ನಾಗಿ ನೇಮಿಸಲಾಗುತ್ತದೆ ಎನ್ನಲಾಗಿದೆ.
ಮಂಗಳವಾರ ಶ್ರೀರಂಗಂನ ಶ್ರೀ ರಂಗನಾಥರ ದೇವಸ್ಥಾನದ ಅರ್ಚಕರ ತರಬೇತಿ ಶಾಲೆಯಲ್ಲಿ ಅರ್ಚಕ ತರಬೇತಿ ಪೂರ್ಣಗೊಳಿಸಿದ ಪುರುಷ ಪ್ರಶಿಕ್ಷಣಾರ್ಥಿಗಳೊಂದಿಗೆ ಈ ಮೂವರು ಮಹಿಳೆಯರಿಗೆ ತಮಿಳುನಾಡು ಸಚಿವ ಸೇಕರ್ ಬಾಬು ಪ್ರಮಾಣಪತ್ರಗಳನ್ನು ನೀಡಿದರು.
ಈ ಕುರಿತು ಟ್ವೀಟ್ ಮಾಡಿದ ಸಿಎಂ ಇನ್ಮುಂದೆ ದ್ರಾವಿಡ ಮಾದರಿಯ ಆಡಳಿತದಲ್ಲಿ ಮಹಿಳಾ ಅರ್ಚಕರು ಪೂಜೆ ಮಾಡಲಿದ್ದು, ಎಲ್ಲಾ ಜಾತಿಯ ಜನರನ್ನು ದೇವಾಲಯಗಳ ಅರ್ಚಕರನ್ನಾಗಿ ನೇಮಿಸಿ ನಮ್ಮ ತಮಿಳುನಾಡಿನ ದ್ರಾವಿಡ ಮಾದರಿಯ ಸರ್ಕಾರ ತಂತಾಯ್ ಪೆರಿಯಾರ್ ಅವರ ಹೃದಯದ ಮುಳ್ಳು ತೆಗೆದಿದ್ದೆವೆ. ಈಗ ಮಹಿಳೆಯರೂ ಗರ್ಭಗುಡಿಗೆ ಕಾಲಿಡುವುದರ ಮೂಲಕ ಸಮಾನತೆಯ ನವ ಯುಗವನ್ನು ತರುತ್ತಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.
ದ್ರಾವಿಡ ಮುನೇತ್ರ ಕಳಗಂ (ಡಿಎಂಕೆ) ಸರ್ಕಾರ 2021 ರಲ್ಲಿ ಅಧಿಕಾರಕ್ಕೆ ಬಂದಾಗ, ಅವರು ಎಲ್ಲಾ ಜಾತಿಗಳ ಜನರಿಗೆ ಅರ್ಚಕ ತರಬೇತಿ ನೀಡುವ ಉಪಕ್ರಮವನ್ನು ಘೋಷಿಸಿದರು. ಆಸಕ್ತಿ ಇದ್ದರೆ ಮಹಿಳೆಯರಿಗೆ ಅದೇ ತರಬೇತಿಯನ್ನು ನೀಡಲಾಗುವುದು ಎಂದು ಅವರು ಹೇಳಿದರು. ಈ ಘೋಷಣೆಯ ನಂತರ ಕೃಷ್ಣವೇಣಿ, ಎಸ್.ರಮ್ಯಾ, ಮತ್ತು ಎನ್.ರಂಜಿತಾ ತರಬೇತಿಗೆ ಸೇರಲು ನಿರ್ಧರಿಸಿದರು.
ಇದನ್ನೂ ಓದಿ: Daily Horoscope: ಉದ್ಯೋಗ ಕ್ಷೇತ್ರದಲ್ಲಿ ಮಂದಗತಿಯ, ಆದರೆ ಸ್ಥಿರವಾದ ಪ್ರಗತಿ