Advertisement
ಏನಿದು ಯೋಜನೆ?ಉತ್ತರಾಖಂಡದ ಕುಮಾವುನ್ ಪ್ರದೇಶದಲ್ಲಿರುವ ಹಿಮನದಿಗಳನ್ನು ಅದೇ ಪ್ರದೇಶದಲ್ಲಿರುವ ಮಳೆಯಾಶ್ರಿತ ನದಿಗಳೊಂದಿಗೆ ಜೋಡಣೆ ಮಾಡುವ ಯೋಜನೆಯಿದು.
ಪಿಂಡಾರಿ ನೀರ್ಗಲ್ಲುಗಳಿಂದ ಹುಟ್ಟುವಂಥ 105 ಕಿ.ಮೀ. ಉದ್ದದ ಪಿಂಡಾರ್ ನದಿಯ ಪ್ರಮುಖ ಉಪನದಿಗಳಾದ ಸುಂದರ್‌ದುಂಗಾ ಮತ್ತು ಶಂಭು ನದಿಗಳನ್ನು ಬಾಂಗೇಶ್ವರ ಜಿಲ್ಲೆಯ ಬೈಜನಾಥ್ ಕಣಿವೆ ಪ್ರದೇಶದ ಗೋಮತಿ ನದಿ, ಅಲ್ಮೋರಾ ಜಿಲ್ಲೆಯಲ್ಲಿರುವ ಕೋಸಿ, ಲೋಧ್ ಮತ್ತು ಗಾಗಾಸ್ ನದಿಗಳ ಮೇಲಾ^ಗದ ಜಲಾನಯನ ಪ್ರದೇಶಗಳೊಂದಿಗೆ ಜೋಡಣೆ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ನದಿ ಜೋಡಣೆ ಹೇಗೆ?
ಮೊದಲಿಗೆ ಪಿಂಡಾರಿ ನದಿಯಲ್ಲಿರುವ ನೀರನ್ನು ಹೊರತೆಗೆಯಲಾಗುತ್ತದೆ. ನಂತರ ಅದನ್ನು ಸುರಂಗಗಳು ಮತ್ತು ಪೈಪ್‌ಗ್ಳ ಮೂಲಕ ಗೋಮತಿ, ಕೋಸಿ, ಲೋಧ್ ಮತ್ತು ಗಾಗಾಸ್ ನದಿಗಳಿಗೆ ಪಂಪ್ ಮಾಡಲಾಗುತ್ತದೆ. ಜೂ.8ರಿಂದಲೇ ಎಂಜಿನಿಯರ್‌ಗಳು ಮತ್ತು ಭೂಗರ್ಭಶಾಸ್ತ್ರಜ್ಞರ ತಂಡವು ಸರ್ವೇ ಕೆಲಸ ಆರಂಭಿಸಿದೆ.
Related Articles
ಹವಾಮಾನ ವೈಪರೀತ್ಯ ಹಾಗೂ ಇತರೆ ಪರಿಸರೀಯ ಕಾರಣಗಳಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಹಿಮಾಲಯ ಪ್ರದೇಶಗಳಲ್ಲಿನ ಮಳೆಯಾಶ್ರಿತ ನದಿಗಳು ಬತ್ತಿ ಹೋಗಲಾರಂಭಿಸಿವೆ. ಹೀಗಾಗಿ, ಈ ಪ್ರದೇಶದಲ್ಲಿನ ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಹಿಮನದಿಗಳೊಂದಿಗೆ ಮಳೆಯಾಶ್ರಿತ ನದಿಗಳನ್ನು ಜೋಡಣೆ ಮಾಡುವುದರಿಂದ ಅಲ್ಮೋರಾ ಮತ್ತು ಬಾಗೇಶ್ವರ ಜಿಲ್ಲೆಗಳ ಜನರ ನೀರಿನ ಸಮಸ್ಯೆ ಪರಿಹಾರವಾಗಲಿದೆ.
Advertisement