Advertisement

ನಿಂತಿದ್ದ ಬಸ್ಸಿನಲ್ಲಿ ಬಾಂಬ್ ಸ್ಫೋಟ : ಕೇವಲ ಎಂಟು ಗಂಟೆಯ ಅಂತರದಲ್ಲಿ ನಡೆದ ಎರಡನೆಯ ಸ್ಫೋಟ

08:17 AM Sep 29, 2022 | Team Udayavani |

ಶ್ರೀನಗರ : ಗುರುವಾರ ಮುಂಜಾನೆ ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯ ಹಳೆಯ ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್‌ನಲ್ಲಿ ಮತ್ತೊಂದು ನಿಗೂಢ ಸ್ಫೋಟ ಸಂಭವಿಸಿದೆ. ಇದು ಕಳೆದ 8 ಗಂಟೆಗಳಲ್ಲಿ ಸಂಭವಿಸಿದ ಎರಡನೇ ಸ್ಫೋಟವಾಗಿದೆ.

Advertisement

ಘಟನೆಯಲ್ಲಿ ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಜಮ್ಮು ಕಾಶ್ಮೀರ ಪೊಲೀಸರು ಮತ್ತು ಇತರ ಭದ್ರತಾ ಪಡೆಗಳು ಘಟನಾ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.

ಬುಧವಾರ ರಾತ್ರಿ 10:45 ರ ಸುಮಾರಿಗೆ ಡೊಮೈಲ್ ಚೌಕ್‌ನಲ್ಲಿ ಬಸ್‌ನಲ್ಲಿ ಇದೇ ರೀತಿಯ ನಿಗೂಢ ಸ್ಫೋಟ ಸಂಭವಿಸಿದೆ, ಇದರಲ್ಲಿ ಇಬ್ಬರು ಗಾಯಗೊಂಡಿದ್ದರು ಇದಾದ ಎಂಟು ಗಂಟೆಯ ಬಳಿಕ ರಾತ್ರಿ ಸ್ಫೋಟಗೊಂಡ ಸ್ಥಳದಿಂದ ಕೇವಲ 4 ಕಿಮೀ ದೂರದಲ್ಲಿ ಎರಡನೇ ಸ್ಫೋಟ ಸಂಭವಿಸಿದೆ.

ಇದನ್ನೂ ಓದಿ : ಟಿಯಾಗೋ ಇವಿ ರಿಲೀಸ್‌; ಒಂದು ಬಾರಿ ಚಾರ್ಜ್‌ ಮಾಡಿದರೆ 312 ಕಿಮೀ ಸಂಚಾರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next