Advertisement

Elephant attacks; 5 ವರ್ಷದಲ್ಲಿ ಆನೆ ದಾಳಿಗೆ ರಾಜ್ಯದ 160 ಮಂದಿ ಸಾವು

01:47 AM Jul 27, 2024 | Team Udayavani |

ಹೊಸದಿಲ್ಲಿ: ಮಾನವ-ಆನೆಗಳ ಸಂಘ ರ್ಷದಿಂದ ಕಳೆದ 5 ವರ್ಷಗಳಲ್ಲಿ ಕರ್ನಾಟಕದ 160 ಮಂದಿ ಸೇರಿದಂತೆ ದೇಶಾದ್ಯಂತ 2,853 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸರಕಾರದ ಅಂಕಿ-ಅಂಶಗಳು ಹೇಳಿವೆ. ಅದರಲ್ಲೂ 2023ರಲ್ಲಿ ಅತೀ ಹೆಚ್ಚು ಅಂದರೆ 628 ಮಂದಿ ಮೃತಪಟ್ಟಿದ್ದಾರೆ.

Advertisement

ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಪರಿಸರ ಖಾತೆ ರಾಜ್ಯ ಸಚಿವ ಕೀರ್ತಿವರ್ಧನ್‌ ಸಿಂಗ್‌, ಮಾನವ -ಆನೆಗಳ ಸಂಘರ್ಷದಿಂದ 2019ರಲ್ಲಿ 587 ಮಂದಿ, 2020ರಲ್ಲಿ 471, 2021 ರಲ್ಲಿ 557, 2022ರಲ್ಲಿ 610 ಹಾಗೂ 2023ರಲ್ಲಿ 628 ಮಂದಿ ಸಾವಿಗೀಡಾಗಿ ದ್ದಾರೆ. ಈ ಅವಧಿಯಲ್ಲಿ ಒಡಿಶಾ 624 ಸಾವಿನೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಝಾರ್ಖಂಡ್‌ನ‌ಲ್ಲಿ 474, ಪ.ಬಂಗಾಲ ದಲ್ಲಿ 436, ಅಸ್ಸಾಂನಲ್ಲಿ 383, ಛತ್ತೀಸ್‌ಗಢದಲ್ಲಿ 303, ತಮಿಳುನಾಡಿನಲ್ಲಿ 256, ಕರ್ನಾಟಕದಲ್ಲಿ 160 ಹಾಗೂ ಕೇರಳದಲ್ಲಿ 124 ಮಂದಿ ಸಾವಿಗೀಡಾಗಿದ್ದಾರೆ ಎಂದು ಹೇಳಿದ್ದಾರೆ.

628 ಹುಲಿಗಳ ಸಾವು: ಬೇಟೆ ಸೇರಿ ಇತರ ನೈಸರ್ಗಿಕ ಕಾರಣಗಳಿಂದ 5 ವರ್ಷಗಳ ಅವಧಿಯಲ್ಲಿ 628 ಹುಲಿ ಗಳು ಸಾವಿಗೀಡಾಗಿದ್ದರೆ, ಹುಲಿ ದಾಳಿ ಯಿಂದ 349 ಮಂದಿ ಮೃತಪಟ್ಟಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next