Advertisement

ರಷ್ಯನ್‌ ಫಿಲಂ ಫೆಸ್ಟಿವಲ್‌ಗೆ ಇಮ್ತಿಯಾಜ್‌ ಅಲಿ ರಾಯಭಾರಿ

06:34 PM Oct 16, 2021 | Team Udayavani |

ಮುಂಬೈ: ಭಾರತದಲ್ಲಿ ನಡೆಯುತ್ತಿರುವ ರಷ್ಯನ್‌ ಫಿಲಂ ಫೆಸ್ಟಿವಲ್‌ಗೆ ಬಾಲಿವುಡ್‌ ನಿರ್ದೇಶಕ, ನಿರ್ಮಾಪಕರಾಗಿರುವ ಇಮ್ತಿಯಾಜ್‌ ಅಲಿ ಅವರನ್ನು ರಾಯಭಾರಿಯಾಗಿ ನೇಮಿಸಲಾಗಿದೆ.

Advertisement

ಈ ಚಲನಚಿತ್ರೋತ್ಸವದ ಅಂಗವಾಗಿ ಅ.16ರಿಂದ ನ.27ರವರೆಗೆ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ರಷ್ಯಾದ ಪ್ರಮುಖ 10 ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು. ಇದರಿಂದಾಗಿ ಉಭಯ ದೇಶಗಳ ನಡುವಿನ ಸಿನಿಮೀಯ ಸಹಯೋಗ ವೃದ್ಧಿಯಾಗಲಿದೆ.

ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಭಾರತೀಯ ಸಿನಿ ಪ್ರಿಯರು ರಷ್ಯಾ ಸಿನಿಮಾಗಳನ್ನು ವೀಕ್ಷಿಸಿ, ಈ ಚಲನಚಿತ್ರೋತ್ಸವವನ್ನು ಯಶಸ್ವಿ ಮಾಡಬೇಕೆಂದು ಇಮ್ತಿಯಾಜ್‌ ಅವರು ಮನವಿ ಮಾಡಿದ್ದಾರೆ. ಈ ಉತ್ಸವದಿಂದ ವಿದೇಶಗಳಲ್ಲೂ ನಮ್ಮ ಕಂಟೆಂಟ್‌ಗಳನ್ನು ಪ್ರಸಾರ ಮಾಡಲು ಅವಕಾಶ ಸಿಗಲಿದೆ ಎಂದು ರಷ್ಯಾದ ಸಾಂಸ್ಕೃತಿಕ ಸಚಿವ ಒಲ್ಗಾ ಲಿಯುಬಿಮೊವಾ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next