ಲಾಹೋರ್: ಹತ್ಯೆ ಯತ್ನದಿಂದ ಪಾರಾಗಿರುವ ಪಾಕಿಸ್ತಾನದ ಮಾಜಿ ಮುಖ್ಯಮಂತ್ರಿ ಇಮ್ರಾನ್ ಖಾನ್ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
Advertisement
ಕಾಲಿಗೆ ಗುಂಡೇಟು ಬಿದ್ದಿರುವ ಪಂಜಾಬ್ ಪ್ರಾಂತ್ಯದ ವಜೀರಾಬಾದ್‌ನಿಂದಲೇ ಮತ್ತೆ ಅವಧಿಗೆ ಪೂರ್ವ ಚುನಾವಣೆ ನಡೆಸಬೇಕು ಎಂಬ ಬೇಡಿಕೆಯನ್ನೊಳಗೊಂಡ ಪಾದಯಾತ್ರೆಯನ್ನು ಮತ್ತೆ ಮಂಗಳವಾರದಿಂದ ಶುರು ಮಾಡಲಿದ್ದಾರೆ. ಈ ಬಗ್ಗೆ ಖುದ್ದು ಇಮ್ರಾನ್ ಖಾನ್ ಅವರೇ ಭಾನುವಾರ ತಿಳಿಸಿದ್ದಾರೆ.
ಪಾಕಿಸ್ತಾನದ ಸೇನೆ ನಮ್ಮ ಪಕ್ಷದ ಕಾರ್ಯಕರ್ತರಲ್ಲಿ ಭೀತಿ ಹುಟ್ಟಿಸಲು ಮುಂದಾಗಿದೆ. ಇಂಥ ತಂತ್ರಗಳಿಗೆ ಮಣಿಯುವುದಿಲ್ಲ ಎಂದು ಹೇಳಿದ್ದಾರೆ.