Advertisement

ಭುಗಿಲೆದ್ದ ಹಿಂಸಾಚಾರ: ಇಮ್ರಾನ್‌ ಖಾನ್‌ ಬೆಂಬಲಿಗರಿಂದ ಪಾಕ್‌ ಸೇನಾ ಕಚೇರಿಗೆ ಮುತ್ತಿಗೆ

12:09 AM May 10, 2023 | Team Udayavani |

ಇಸ್ಲಾಮಾಬಾದ್‌: ಮಂಗಳವಾರ ನಾಟಕೀಯ ಬೆಳವಣಿಗೆಯಲ್ಲಿ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಬಂಧನವಾಗುತ್ತಲೇ ಪಾಕಿಸ್ಥಾನದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ತಮ್ಮ ನಾಯಕನ ಬಂಧನ ಖಂಡಿಸಿ ಇಮ್ರಾನ್‌ ಖಾನ್‌ ಬೆಂಬಲಿಗರು ಹಾಗೂ ಪಾಕಿಸ್ತಾನ್‌ ತೆಹ್ರೀಕ್‌-ಇ-ಇನ್ಸಾಫ್(ಪಿಟಿಐ) ಪಕ್ಷದ ಕಾರ್ಯ ಕರ್ತರು ಬೀದಿಗಿಳಿ ದಿದ್ದಾರೆ.

Advertisement

ಸರಕಾರವು ಶಾಂತಿ ಕಾಪಾಡುವಂತೆ ನೀಡಿ ರುವ ಕರೆಯನ್ನೂ ಲೆಕ್ಕಿಸದೇ ಭಾರೀ ಸಂಖ್ಯೆಯ ಪ್ರತಿಭಟನಾಕಾರರು ಮಂಗಳವಾರ ಸಂಜೆ ವೇಳೆಗೆ ರಾವಲ್ಪಿಂಡಿಯಲ್ಲಿರುವ ಪಾಕ್‌ ಸೇನೆಯ ಪ್ರಧಾನ ಕಚೇರಿಗೆ ನುಗ್ಗಿದ್ದಾರೆ. ಸರ್ಗೋಡಾದಲ್ಲಿರುವ ವಾಯುಪಡೆಯು ಸ್ಮಾರಕವನ್ನು ಪುಡಿಗಟ್ಟಿದ್ದಾರೆ. ವ್ಯಾಪಕ ಹಿಂಸಾಚಾರದ ಮುನ್ಸೂಚನೆ ಹಿನ್ನೆಲೆಯಲ್ಲಿ ಸರಕಾರವು ಸಂಜೆಯೇ ಇಸ್ಲಾಮಾಬಾದ್‌ನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿತ್ತು. ಆದರೆ, ಇಮ್ರಾನ್‌ ಬೆಂಬಲಿಗರು ಸೆಕ್ಷನ್‌ 144 ಅನ್ನು ಉಲ್ಲಂ ಸಿ ಹೋರಾಟ ಆರಂಭಿಸಿದ್ದಾರೆ.

ಆರಂಭದಲ್ಲಿ ಇಸ್ಲಾಮಾಬಾದ್‌ಗೆ ಸೀಮಿತವಾಗಿದ್ದ ಪ್ರತಿಭಟನೆ ರಾತ್ರಿ ವೇಳೆಗೆ ದೇಶಾದ್ಯಂತ ವ್ಯಾಪಿಸಿದೆ. ಇಮ್ರಾನ್‌ರ ಅಪಾರ ಬೆಂಬಲಿಗರು ಕಾರ್ಪ್‌ ಕಮಾಂಡರ್‌ನ ಲಾಹೋರ್‌ನಲ್ಲಿರುವ ನಿವಾಸಕ್ಕೆ ಮುತ್ತಿಗೆ ಹಾಕುತ್ತಿರುವ ವಿಡಿಯೋವನ್ನು ಸ್ವತಃ ಪಿಟಿಐ ಪಕ್ಷವೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿ ಕೊಂಡಿದೆ.

ಅಶ್ರುವಾಯು, ಜಲಫಿರಂಗಿ ಪ್ರಯೋಗ: ಲಾಹೋರ್‌, ಪೇಶಾವರ, ಕರಾಚಿ, ಗಿಲ್‌ಗಿಟ್‌, ಕರಾಕ್‌, ಇಸ್ಲಾಮಾಬಾದ್‌ ಸೇರಿದಂತೆ ವಿವಿಧ ನಗರ ಗಳಲ್ಲಿ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದಂತೆ ಪ್ರತಿಭಟ ನಾಕಾರರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಹಾಗೂ ಅಶ್ರುವಾಯು ಪ್ರಯೋಗಿಸಿªದಾರೆ. ಧರಣಿನಿರತರು ಹಲವೆಡೆ ರಸ್ತೆ ತಡೆ ನಡೆಸಿದ್ದಾರೆ.

ನ್ಯೂಯಾರ್ಕ್‌ನಲ್ಲೂ ಪ್ರತಿಭಟನೆ: ಇಮ್ರಾನ್‌ ಬಂಧನ ಖಂಡಿಸಿ ಅಮೆರಿಕದ ನ್ಯೂಯಾರ್ಕ್‌ನ ಟೈಮ್ಸ್‌ ಸ್ಕ್ವೇರ್‌ನಲ್ಲಿ ಪಾಕಿಸ್ತಾನಿ ಅಮೆರಿಕನ್‌ ಸಮುದಾಯ ಪ್ರತಿಭಟನೆ ನಡೆಸಿದೆ.

Advertisement

ಮೊದಲೇ
ಸುಳಿವು ಸಿಕ್ಕಿತ್ತಾ?
ಇಸ್ಲಾಮಾಬಾದ್‌ ಹೈಕೋರ್ಟ್‌ ಆವರಣದಲ್ಲಿ ಏಕಾಏಕಿ ಇಮ್ರಾನ್‌ ಖಾನ್‌ರನ್ನು ಬಂಧಿಸಿದ್ದು ಅವರ ಬೆಂಬಲಿಗರನ್ನು ಆಘಾತಕ್ಕೀಡುಮಾಡಿದೆ. ಇದಾದ ಬೆನ್ನಲ್ಲೇ ಅವರ ಪಕ್ಷ ಪಿಟಿಐ, ಇಮ್ರಾನ್‌ ಖಾನ್‌ ಅವರ ರೆಕಾರ್ಡೆಡ್‌ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ಇಮ್ರಾನ್‌ ಅವರು, “ನಿಮ್ಮನ್ನು ಉದ್ದೇಶಿಸಿ ಮಾತನಾಡಲು ನನಗೆ ಮತ್ತೂಂದು ಅವಕಾಶ ಸಿಗಲಿಕ್ಕಿಲ್ಲ’ ಎಂದು ಹೇಳಿದ್ದಾರೆ. ಇದನ್ನು ನೋಡಿದ ಅನೇಕರು, ತಾವು ಅರೆಸ್ಟ್‌ ಆಗುವ ಬಗ್ಗೆ ಇಮ್ರಾನ್‌ಗೆ ಮೊದಲೇ ಸುಳಿವು ಸಿಕ್ಕಿತ್ತೇ ಎಂದು ಪ್ರಶ್ನಿಸತೊಡಗಿದ್ದಾರೆ.

ಮಾಜಿ ಪ್ರಧಾನಿ ವಿರುದ್ಧ 120 ಕೇಸುಗಳು!
ಪಿಟಿಐ ಪಕ್ಷದ ಮುಖ್ಯಸ್ಥ ಇಮ್ರಾನ್‌ ಖಾನ್‌ ಅವರ ವಿರುದ್ಧ ಪಾಕಿಸ್ಥಾನದಲ್ಲಿ ಒಟ್ಟು 121 ಪ್ರಕರಣಗಳು ದಾಖಲಾಗಿವೆ. ದೇಶದ್ರೋಹ, ಭ್ರಷ್ಟಾಚಾರ, ಧರ್ಮನಿಂದನೆ, ಹಿಂಸಾಚಾರಕ್ಕೆ ಪ್ರೇರಣೆ, ಭಯೋತ್ಪಾದನೆ ಸೇರಿದಂತೆ ಬೇರೆ ಬೇರೆ ಆರೋಪಗಳಲ್ಲಿ ಅವರು ತನಿಖೆ ಎದುರಿಸುತ್ತಿದ್ದಾರೆ. ಈ ಪೈಕಿ 22 ಪ್ರಕರಣಗಳು ಉಗ್ರವಾದಕ್ಕೆ ಸಂಬಂಧಿಸಿದ್ದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭ್ರಷ್ಟಾಚಾರ ಪ್ರಕರಣ(ಅಲ್‌ಖಾದಿರ್‌ ಟ್ರಸ್ಟ್‌ ಕೇಸು)ವೊಂದರಲ್ಲಿ ದೇಶದ ಬೊಕ್ಕಸಕ್ಕೆ ಭಾರೀ ಪ್ರಮಾಣದಲ್ಲಿ ನಷ್ಟ ಉಂಟುಮಾಡಿರುವ ಕಾರಣ ಇಮ್ರಾನ್‌ ಖಾನ್‌ರನ್ನು ಬಂಧಿಸಲಾಗಿದೆ. ಅಲ್ಲದೇ ಅವರು ದೇಶದ ಶತ್ರುಗಳೊಂದಿಗೆ ಕೈಜೋಡಿಸಿ, ದೇಶಕ್ಕೆ ಹಾನಿ ಉಂಟು ಮಾಡಲು ಯತ್ನಿಸಿದ್ದಾರೆ.
-ರಾಣಾ ಸನಾವುಲ್ಲಾ, ಪಾಕ್‌ ಗೃಹ ಸಚಿವ

ಇಮ್ರಾನ್‌ ಖಾನ್‌ ಅವರ ರಾಜಕೀಯವು ಹಸಿ ಸುಳ್ಳುಗಳು, ಸತ್ಯಕ್ಕೆ ದೂರವಾದ ಆರೋಪ ಗಳು, ಯೂಟರ್ನ್ಗಳಿಂದ ಕೂಡಿದೆ. ದೇಶದ ಕಾನೂನು ತನಗೆ ಅನ್ವಯವಾಗುವುದಿಲ್ಲ ಎಂಬಂತೆ ಅವರು ವರ್ತಿಸುತ್ತಿದ್ದರು.
-ಶೆಹಬಾಜ್‌ ಷರೀಫ್, ಪಾಕ್‌ ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next