Advertisement
ಇಮ್ರಾನ್ “ಆಟ’ಕ್ಕೆ ಸಾಥ್ ನೀಡಿದ ಪಾಕ್ ಸಂಸತ್ತಿನ ಸ್ಪೀಕರ್ ಅಸಾದ್ ಖೈಸರ್ ಕೂಡ ಬೆಳಗ್ಗೆಯಿಂದ ಮಧ್ಯರಾತ್ರಿಯ ವರೆಗೂ ಒಂದೊಂದೇ ನೆಪ ಹೇಳುತ್ತ ಕಲಾಪವನ್ನು ಮುಂದೂಡುತ್ತಾ ಸಾಗಿದರು. ಹೀಗಾಗಿ ರಾತ್ರಿ 11ರ ವರೆಗೂ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ಗೊತ್ತುವಳಿ ಸಂಬಂಧ ಮತದಾನ ನಡೆಯಲೇ ಇಲ್ಲ.ಕಲಾಪ ಆರಂಭವಾದಾಗಿನಿಂದಲೂ ವಿಪಕ್ಷಗಳ ನಾಯಕರು, ಸರ್ವೋಚ್ಚ ನ್ಯಾಯಾಲಯದ ಆದೇಶದ ಅನ್ವಯ ಕೂಡಲೇ ಅವಿಶ್ವಾಸ ಗೊತ್ತುವಳಿ ಪರ ಮತದಾನ ನಡೆಸಿ ಎಂದು ಸ್ಪೀಕರ್ ಖೈಸರ್ ಅವರನ್ನು ಒತ್ತಾಯಿಸತೊಡಗಿದರು.
Related Articles
Advertisement
ಇದನ್ನೂ ಓದಿ:ಲಷ್ಕರ್ ಕಮಾಂಡರ್ ಬಲಿ: ಜನವರಿಯಿಂದ ಕಾಶ್ಮೀರದಲ್ಲಿ ಹತ್ಯೆಯಾದ ಉಗ್ರರೆಷ್ಟು?
ಇತಿಹಾಸ ನಿಮ್ಮನ್ನು ಕ್ಷಮಿಸದು“ಇಮ್ರಾನ್ ಖಾನ್ ಮತ್ತು ತಂಡ ನ್ಯಾಯಾಂಗ ನಿಂದನೆಗೆ ಮುಂದಾಗಿರುವುದು ಸ್ಪಷ್ಟವಾಗುತ್ತಿದೆ. ಇತಿಹಾಸ ಯಾವತ್ತೂ ಅವರನ್ನು ಸಂವಿಧಾನವನ್ನು ಉಲ್ಲಂ ಸಿದ ವಂಚಕರು ಎಂದೇ ಸ್ಮರಿಸಿಕೊಳ್ಳಲಿದೆ. ಅವರ ಅಹಂಕಾರವು ದೇಶಕ್ಕಿಂತ ದೊಡ್ಡದೇ’ ಎಂದು ವಿಪಕ್ಷ ನಾಯಕ ಶೆಹಬಾಜ್ ಷರೀಫ್ ಪ್ರಶ್ನಿಸಿದ್ದಾರೆ. ರಾಜಕೀಯ ಅನಿಶ್ಚಿತತೆ ಮುಂದುವರಿದಿರುವಂತೆಯೇ ರವಿವಾರ ಎಲ್ಲರೂ ಶಾಂತಿಯುತ ಪ್ರತಿಭಟನೆ ನಡೆಸುವಂತೆ ದೇಶವಾಸಿಗಳಿಗೆ ಇಮ್ರಾನ್ ಕರೆ ನೀಡಿದ್ದಾರೆ. ಪಂದ್ಯದಲ್ಲಿ ಸೋಲುತ್ತೇನೆಂಬ ಭಯದಿಂದ ವಿಕೆಟ್‌ನೊಂದಿಗೆ ಪಿಚ್ ನಿಂದಲೇ ಓಡಿ ಹೋದ ಮೊದಲ ಕ್ಯಾಪ್ಟನ್ ಇಮ್ರಾನ್ ಖಾನ್. ಅಧಿಕಾರ ಕಳೆದುಕೊಳ್ಳುವ ಮುನ್ನ ಸ್ವಲ್ಪವಾದರೂ ಕ್ರೀಡಾ ಸ್ಫೂರ್ತಿ ಪ್ರದರ್ಶಿಸಿ.
– ಬಿಲಾವಲ್ ಭುಟ್ಟೋ, ಪಿಪಿಪಿ ಮುಖ್ಯಸ್ಥ