ಇಸ್ಲಾಮಾಬಾದ್: ಪಾಕಿಸ್ತಾನ ಮಾಜಿ ಪಿಎಂ ಇಮ್ರಾನ್ ಖಾನ್ ಅವರಿಗೆ ಮಾ.27ರ ವರೆಗೆ ಇಸ್ಲಾಮಾಬಾದ್‌ನ ಸ್ಥಳೀಯ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ.
ಅವರ ವಿರುದ್ಧ ದಾಖಲಾಗಿರುವ ಮೂರು ಉಗ್ರ ಕೃತ್ಯಗಳಲ್ಲಿ ಭಾಗಿಯಾದ ಆರೋಪಗಳ ಪೈಕಿ ಎರಡು ಪ್ರಕರಣಗಳಲ್ಲಿ ತನಿಖಾ ಸಂಸ್ಥೆಗಳು ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಸಂಸ್ಥಾಪಕನಿಗೆ ಜಾಮೀನು ನೀಡಲಾಗಿದೆ.
ಈ ಪೈಕಿ ಕಳೆದ ಶನಿವಾರ ಇಸ್ಲಾಮಾಬಾದ್‌ನಲ್ಲಿ ಉಂಟಾಗಿದ್ದ ದಾಂಧಲೆ ಪ್ರಕರಣವೂ ಸೇರಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಮ್ರಾನ್ ಪರ ವಕೀಲ ಸಲ್ಮಾನ್ ಸಫಾರ್ ಲಾಹೋರ್ ಹೈಕೋರ್ಟ್‌ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಮನವಿ ಪರಿಗಣಿಸಿದ ನ್ಯಾಯಾಲಯ ಒಂದು ವಾರದ ಅವಧಿಯ ಜಾಮೀನು ಮಂಜೂರುಗೊಳಿಸಿದೆ.
ಜತೆಗೆ ಎಲ್ಲ ಭಯೋತ್ಪಾದಕ ಪ್ರಕರಣಗಳ ವಿಚಾರಣೆಯಲ್ಲಿ ಕೋರ್ಟ್ ಹಾಜರಾಗುವುದರಿಂದ ವಿನಾಯತಿ ಕೋರಿ ಸಲ್ಲಿಕೆಯಾದ ಅರ್ಜಿಯ ತೀರ್ಪನ್ನು ಇಸ್ಲಾಮಾಬಾದ್ ನ್ಯಾಯಾಲಯ ಕಾಯ್ದಿರಿಸಿದೆ
Related Articles
30ಕ್ಕೆ ಹಾಜರಿಗೆ ಸೂಚನೆ:
ಮತ್ತೊಂದೆಡೆ, ಉಡುಗೊರೆಗಳನ್ನು ಮಾರಾಟ ಮಾಡಿದ ಪ್ರಕರಣದಲ್ಲಿ ಮತ್ತೂಮ್ಮೆ ವಿಚಾರಣೆಗೆ ಬರುವಂತೆ ಖಾನ್‌ಗೆ ಇಸ್ಲಾಮಾಬಾದ್‌ನ ಸ್ಥಳೀಯ ನ್ಯಾಯಾಲಯ ಮಾ.30ರಂದು ವಿಚಾರಣೆಗೆ ಬರುವಂತೆ ಸಮನ್ಸ್ ನೀಡಿದೆ. ಇದಲ್ಲದೆ, ಅವರ ಮೂರನೇ ಪತ್ನಿ ಬುಶ್ರಾ ಬೀಬಿ ಅವರಿಗೆ ಭ್ರಷ್ಟಾಚಾರ ನಿಗ್ರಹ ದಳ ನೋಟಿಸ್ ನೀಡಿದೆ. ಈ ನಡುವೆ, ಹಿಂಸಾಕೃತ್ಯಗಳಿಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಿಯ ಸೋದರ ಸಂಬಂಧಿಯನ್ನು ಪೊಲೀಸರು ಬಂಧಿಸಿದ್ದಾರೆ.