Advertisement

Imran Khan: ದಂಗೆ ಏಳಲು ಪ್ರಚೋದನೆ; ಇಮ್ರಾನ್‌ ವಿರುದ್ಧ ಕೇಸು

08:16 PM Sep 14, 2024 | Team Udayavani |

ಇಸ್ಲಾಮಾಬಾದ್‌: ಸಾಮಾಜಿಕ ಜಾಲತಾಣಗಳ ಮುಖಾಂತರ ಸರ್ಕಾರಿ ಅಧಿಕಾರಿಗಳನ್ನು ದಂಗೆ ಏಳಲು ಪ್ರಚೋದಿಸಿದ ಆರೋಪದ ಮೇಲೆ ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ವಿರುದ ಹೊಸ ಕೇಸು ದಾಖಲಿಸಲಾಗಿದೆ.

Advertisement

ಈ ಬಗ್ಗೆ ಅಲ್ಲಿನ ತನಿಖಾ ಸಂಸ್ಥೆ ಇಮ್ರಾನ್‌ ಬಂಧಿತರಾಗಿರುವ ಜೈಲಿಗೆ ಬಂದು ಅವರ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿರುವ ಅಂಶಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಮುಂದಾಗಿತ್ತು. ಆದರೆ, ತಮ್ಮ ವಕೀಲರ ಉಪಸ್ಥಿತಿಯಲ್ಲಿಯೇ ವಿಚಾರಣೆ ಎದುರಿಸುವುದಾಗಿ ಖಾನ್‌ ತಿಳಿಸಿದ್ದಾರೆ.  ಖಾನ್‌ ವಿರುದ್ಧ ಹೊಸ ಕೇಸು ದಾಖಲಿಸುವ ಬಗ್ಗೆ ಪಾಕ್‌ ಸಚಿವ ಅತಾವುಲ್ಲ ತರಾರ್‌ ಸುಳಿವು ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next