Advertisement

ಪಾಕಿಸ್ತಾನ; ನನ್ ಕಾನಾ ಹಿಂಸಾಚಾರಕ್ಕೆ ಪ್ರಚೋದನೆ ಕೊಟ್ಟ ಇಮ್ರಾನ್ ಚಿಸ್ತಿ ಬಂಧನ

10:04 AM Jan 07, 2020 | Nagendra Trasi |

ಇಸ್ಲಾಮಾಬಾದ್:ಸಿಖ್ಖರ ಪವಿತ್ರ ಯಾತ್ರಾಸ್ಥಳ, ಪಾಕಿಸ್ತಾನದಲ್ಲಿರುವ ನನ್ ಕಾನಾ ಸಾಹಿಬ್ ಗುರುದ್ವಾರಕ್ಕೆ ಸಂಬಂಧಿಸಿದಂತೆ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದ ಆರೋಪದಡಿ ಇಮ್ರಾನ್ ಚಿಸ್ತಿಯನ್ನು ಪೊಲೀಸರು ಭಾನುವಾರ ಬಂಧಿಸಿರುವುದಾಗಿ ವರದಿ ತಿಳಿಸಿದೆ.

Advertisement

ನನ್ ಕಾನಾ ಸಾಹಿಬ್ ಗುರುದ್ವಾರದ ಮೇಲೆ ದಾಳಿ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳದ ಪಾಕಿಸ್ತಾನದ ವಿರುದ್ಧ ಭಾರೀ ಪ್ರತಿಭಟನೆ, ಟೀಕೆ ವ್ಯಕ್ತವಾದ ನಂತರ ಚಿಸ್ತಿಯನ್ನು ಬಂಧಿಸಲಾಗಿದೆ ಎಂದು ವರದಿ ವಿವರಿಸಿದೆ.

ಘಟನೆಗೆ ಸಂಬಂಧಿಸಿದಂತೆ ಚಿಸ್ತಿ ಮನೆಯಿಂದಲೇ ಕ್ಷಮಾಪಣೆಯ ವೀಡಿಯೋವನ್ನು ಬಿಡುಗಡೆ ಮಾಡಿರುವುದಾಗಿ ವರದಿ ತಿಳಿಸಿದೆ. ಸ್ಥಳೀಯ ನಿವಾಸಿಗಳ ಜತೆಗೂಡಿ ಚಿಸ್ತಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿ ನನ್ ಕಾನಾ ಗುರುದ್ವಾರ ಸಾಹಿಬ್ ಮೇಲೆ ಕಲ್ಲುತೂರಾಟ ನಡೆಸಿ ದಾಂಧಲೆ ನಡೆಸಿರುವ ಘಟನೆ ನಡೆದಿತ್ತು.

ಚಿಸ್ತಿ ಈಶಾನಾ ಸಹೋದರನಾಗಿದ್ದು, ಈತ ಸಿಖ್ಖ ಯುವತಿ ಜಗ್ಜೀತ್ ಕೌರ್ ಅಪಹರಣದ ಆರೋಪಿಯಾಗಿದ್ದಾನೆ. ನನ್ ಕಾನಾ ಗುರುದ್ವಾರದ ಮೇಲೆ ದಾಳಿ ನಡೆಸಿದ ಗುಂಪು ಸಿಖ್ಖ ವಿರೋಧಿ ಘೋಷಣೆ ಕೂಗಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next