Advertisement

ಐಬಿಸಿಯಿಂದ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಸುಧಾರಣೆ

06:00 AM Sep 23, 2018 | Team Udayavani |

ಬೆಂಗಳೂರು: ಕೇಂದ್ರ ಸರ್ಕಾರವು ನೂತನವಾಗಿ ಜಾರಿಗೊಳಿಸಿರುವ ದಿವಾಳಿತನ ಸಂಹಿತೆಯಿಂದಾಗಿ(ಐಬಿಸಿ) ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಸುಧಾರಣೆಯಾಗಿದೆ ಎಂದು ರಾಜ್ಯಸಭೆ ಸದಸ್ಯ ರಾಜೀವ್‌ ಚಂದ್ರಶೇಖರ್‌ ತಿಳಿಸಿದ್ದಾರೆ.

Advertisement

ಬಿಜೆಪಿ  ಆರ್ಥಿಕ ಪ್ರಕೋಷ್ಠವತಿಯಿಂದ  ಆಯೋಜಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕ್ರಮಬದ್ಧ ಆರ್ಥಿಕ ಸುಧಾರಣೆಗಳು ಮತ್ತು ಸಾಮಾನ್ಯ ಜನರ ಮೇಲಿನ ಪ್ರಭಾವ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಬ್ಯಾಂಕುಗಳು ಸಾಲ ವಸೂಲಾತಿ ವಿಷಯದಲ್ಲಿ ಮಧ್ಯಮ, ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲಾ ಉದ್ಯಮಿಗಳನ್ನು ಸಮಾನವಾಗಿ ಪರಿಗಣಿಸುತ್ತಿವೆ ಎಂದು ಹೇಳಿದರು.

ಕೇಂದ್ರ ಸರ್ಕಾರವು ದಿವಾಳಿತನ ಸಂಹಿತೆಯನ್ನು (ಐಬಿಸಿ) ಜಾರಿಗೊಳಿಸಿದೆ. ಇದರಿಂದ ಮಧ್ಯಮ ಉದ್ಯಮಗಳು ಸಾಲ ಮರುಪಾವತಿ ಮಾಡದಿದ್ದರೆ ಸಾಲ ವಸೂಲಿ ಮಾಡಲು ಯಾವ ಕ್ರಮಗಳನ್ನು ಅನುಸರಿಸಲಾಗುತ್ತದೆಯೋ ಅದೇ ಕ್ರಮಗಳನ್ನು ಶ್ರೀಮಂತ ಉದ್ಯಮಿಗಳ ವಿರುದ್ಧವೂ ಕೈಗೊಳ್ಳಲಾಗುತ್ತಿದೆ. ಸುಸ್ತಿದಾರ ಕಂಪನಿಗಳನ್ನು ಸಾಲ ವಸೂಲಾಗದ (ಎನ್‌ಪಿಎ) ವರ್ಗಕ್ಕೆ ಸೇರಿಸಿದರೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಿದೆ ಎಂದರು.ನೋಟು ಅಮಾನ್ಯಿàಕರಣ ಬಳಿಕ ಜನರು ಕಷ್ಟಪಟ್ಟಿದ್ದರು. ಆದರೆ, ತೆರಿಗೆ ಪಾವತಿಯಿಂದ ದೂರ ಉಳಿದವರನ್ನು ಪತ್ತೆ ಮಾಡಲು ನೋಟು ಅಮಾನ್ಯಿàಕರಣ ಸಹಕಾರಿಯಾಗಿದೆ ಎಂದು ಹೇಳಿದರು.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೂ ಮುನ್ನ ಸಣ್ಣಪುಟ್ಟ ಉದ್ಯಮಿಗಳು ತಮ್ಮ ಉತ್ಪನ್ನಗಳನ್ನು ಹೊರರಾಜ್ಯಗಳಿಗೆ ಮಾರಾಟ ಮಾಡಲು ಕಷ್ಟಪಡಬೇಕಾಗಿತ್ತು. ಜಿಎಸ್‌ಟಿಯಿಂದ ಇದಕ್ಕೆಲ್ಲಾ ಮುಕ್ತಿ ಸಿಕ್ಕಂತಾಗಿದೆ. ಹೊರರಾಜ್ಯಗಳಿಗೆ ಸುಲಭವಾಗಿ ತಮ್ಮ ಉತ್ಪನ್ನಗಳನ್ನು ತಲುಪಿಸಬಹುದಾಗಿದೆ. ಯಾವುದೇ ರೀತಿಯಾಗಿ ಅಧಿಕಾರಿಗಳ ಕಿರುಕುಳ ಇಲ್ಲವಾಗಿದೆ ಎಂದುಹೇಳಿದರು.  ವಿಧಾನಪರಿಷತ್‌ ಸದಸ್ಯ ರವಿಕುಮಾರ್‌, ಬಿಜೆಪಿ ಆರ್ಥಿಕ ಪ್ರಕೋಷ್ಠದ ಸಂಚಾಲಕ ವಿಶ್ವನಾಥ್‌ ಭಟ್‌ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next