ಡಾ| ಸುದರ್ಶನ ಬಲ್ಲಾಳ್ ಉದ್ಘಾಟಿಸಿದರು.
Advertisement
ಡಾ| ಟಿಎಂಎ ಪೈ ಸಭಾಭವನದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತ ನಾಡಿದ ಡಾ| ಸುದರ್ಶನ ಬಲ್ಲಾಳ್ ಅವರು ತಾವು ಕಲಿತ ದಿನಗಳನ್ನು ನೆನಪಿಸಿ ಕೊಂಡರು. ಆಗ ಸಿಟಿ ಸ್ಕ್ಯಾನ್ ಇರಲಿಲ್ಲ, ರೋಗನಿರ್ಣಯ ಪರೀಕ್ಷೆಗಳು ಸುಧಾರಿತವಾಗಿರಲಿಲ್ಲ. ಈಗ ರೇಡಿಯೋ ರೋಗನಿರ್ಣಯ ಮತ್ತು ಚಿತ್ರದಲ್ಲಿರುವ ಬೆಳವಣಿಗೆಗಳು ರೋಗಿಗಳಿಗೆ ಗಣನೀಯ ಪ್ರಮಾಣದ ಪರಿಹಾರ ಒದಗಿಸಿವೆ. ವೈದ್ಯರು ಇದರಿಂದಾಗಿ ರೋಗಗಳನ್ನು ನಿಖರವಾಗಿ ಪತ್ತೆ ಹಚ್ಚಲು ಶಕ್ತರಾಗಿದ್ದಾರೆ ಮತ್ತು ಇದು ರೋಗಿಗಳಿಗೆ ಉತ್ತಮ ಸೇವೆ ನೀಡುತ್ತದೆ. ಇದು ಮಾನವ ಕುಲದ ಯಶಸ್ವೀ ದಿನಗಳಾಗಿವೆ ಎಂದರು.
Related Articles
ಫಿಲಿಪ್ಸ್ ಮತ್ತು ಮಾಹೆಯೊಂದಿಗೆ ಸಂಬಂಧ ರೋಗ ನಿರ್ಣಯದ ಗುಣಮಟ್ಟ ಸುಧಾರಿಸಲು ಸಹಕಾರಿಯಾಗಿದೆ. ಪರವಾನಿಗೆ ಪ್ರಕ್ರಿಯೆ ಬಳಿಕ ಸಾರ್ವಜನಿಕ ಉಪಯೋಗ ಆರಂಭವಾಗಲಿವೆ. ಸುರಕ್ಷೆ, ದಕ್ಷತೆ, ವೇಗಗಳು ಸುಧಾರಿತ ಯಂತ್ರಗಳ ಉಪಯೋಗಗಳು. ಆಸ್ಪತ್ರೆಯ ಆಧುನೀಕರಣದಲ್ಲಿ ಇದೂ ಒಂದು ಮೈಲುಗಲ್ಲು ಎಂದು ಮಾಹೆ ಕುಲಪತಿ ಡಾ| ಎಚ್. ವಿನೋದ ಭಟ್ ತಿಳಿಸಿದರು.
Advertisement
ಆಸ್ಪತ್ರೆ ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ. ಮುತ್ತಣ್ಣ, ಕೆಎಂಸಿ ಡೀನ್ ಡಾ| ಪ್ರಜ್ಞಾ ರಾವ್ ಉಪಸ್ಥಿತರಿದ್ದರು. ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ ಶೆಟ್ಟಿ ಸ್ವಾಗತಿಸಿದರು. ರೇಡಿಯಾಲಜಿ ವಿಭಾಗ ಮುಖ್ಯಸ್ಥೆ ಡಾ| ಸ್ಮ ƒತಿ ಶ್ರೀಪತಿ ಯಂತ್ರದ ವೈಶಿಷ್ಟ é ವಿವರಿಸಿದರು. ಪ್ರಾಧ್ಯಾಪಕ ಡಾ| ಮುತ್ತು ಕಾರ್ಯ ಕ್ರಮ ನಿರ್ವಹಿಸಿದರು.
ಅತ್ಯಾಧುನಿಕ ಯಂತ್ರದ ವೈಶಿಷ್ಟ ಗಳುವರ್ಕ್ ಸ್ಟೇಶನ್ ಮತ್ತು ಸಾಫ್ಟ್ವೇರ್‌ವುಳ್ಳ 128 ಸ್ಲೆ „ಸ್ ಇನ್ಸಿಸಿವ್ ಸಿಸ್ಟಮ್ಸ್ ಅನೇಕ ಡಯಾಗ್ನೊಸ್ಟಿಕ್ ಪರಿಹಾರ ಒದಗಿಸುವ ಸಾಮರ್ಥ್ಯ ಹೊಂದಿದೆ. ಉನ್ನತ ದರ್ಜೆಯ ಕಾರ್ಯನಿರ್ವಹಣೆ ಮತ್ತು ಹೆಚ್ಚು ಪ್ರಮಾಣದ ಕೆಲಸ ಗಳನ್ನು ಶೀಘ್ರವಾಗಿ ಪಡೆಯಬಹುದು. ಗುಣಮಟ್ಟದ ಚಿತ್ರಗಳು ಲಭ್ಯ. ಇತರ ಯಂತ್ರಗಳಂತೆ ತಲೆ, ಕುತ್ತಿಗೆ, ಕಿಬ್ಬೊಟ್ಟೆ , ಸೊಂಟದ ಮಾಮೂಲಿ ಇಮೇಜಿಂಗ್‌ನ್ನು ಪಡೆಯಬಹುದು. ಇದರೊಂದಿಗೆ ಇದು ದೇಹದ ಯಾವುದೇ ಭಾಗದ ಸಿಟಿ ಆ್ಯಂಜಿಯೋಗ್ರಫಿ ಮಾಡಬಲ್ಲದು. ಇದರಿಂದ ಪಡೆದ 3ಡಿ ವಾಲ್ಯೂಮ್ ಇಮೇಜ್‌ಗಳು ಅಪಘಾತದ ರೋಗಿ ಗಳಿಗೆ ತುಂಬಾ ಉಪಯುಕ್ತವಾಗುತ್ತವೆ. ಏಕೆಂದರೆ ಇಂತಹ ಪ್ರಕರಣಗಳಲ್ಲಿ ತ್ವರಿತ ಇಮೇಜಿಂಗ್ ಮತ್ತು ಡಯಗ್ನೊಸಿಸ್ ಬಹಳ ಮುಖ್ಯವಾಗಿರುತ್ತದೆ. ಈ ಹೈಸ್ಪೀಡ್ ಸ್ಕ್ಯಾನರ್‌ನಲ್ಲಿರುವ ಸಮಗ್ರ ಕಾರ್ಡಿಯಾಕ್ ಸಾಫ್ಟ್ವೇರ್ ಅತೀವ ಹೃದಯ ಬಡಿತ ಮತ್ತು ಕಷ್ಟಕರ ಉಸಿರಾಟ ಸಂದರ್ಭದಲ್ಲಿಯೂ ಕೊರೊನರಿ ಅಪಧಮನಿ ಕಿರಿದಾಗಿರುವುದನ್ನು ಅತ್ಯುತ್ತಮವಾಗಿ ಮೌಲ್ಯ ಮಾಪನ ಮಾಡುತ್ತದೆ. ನಾನ್ ಇನ್ಸಿಸಿವ್ ಮಯೋಕಾರ್ಡಿಯಲ್ ಪಪ್ರೂéಷನ್ ಇಮೇಜಿಂಗ್ ಮೂಲಕ ಹೃದಯದ ಸ್ನಾಯುಗಳಿಗೆ ರಕ್ತ ಪೂರೈಕೆ (ಬ್ಲಿಡ್ ಫ್ಲೋ ಕ್ವಾಂಟಿಫಿಕೇಶನ್) ಸಾಧ್ಯ. ಇನ್ನಿತರ ಪ್ರಯೋಜನಗಳೆಂದರೆ ರೋಗಿಗಳಲ್ಲಿ ಆಸ್ಟಿಯೋಪೋರೋಸಿಸ್ ಮಟ್ಟವನ್ನು ವಿಶ್ಲೇಷಣೆ, ಶಾರ್ಪ್ ಪೀಡಿಯಾಟ್ರಿಕ್ ಇಮೇಜಿಂಗ್, ಕಡಿಮೆ ವಿಕಿರಣ ಬಳಸಿ ಮೂತ್ರಪಿಂಡಗಳಲ್ಲಿ ಕಲ್ಲುಗಳನ್ನು ಪತ್ತೆ ಹಚ್ಚುವುದು.