ಅನಾನಸು ಹಣ್ಣು ನೋಡಲು ಮುಳ್ಳು ಮತ್ತು ಒರಟಿನಿಂದ ಕೂಡಿದ್ದರೂ ಇದರಲ್ಲಿ ಅನೇಕ ಆರೋಗ್ಯಕರ ಅಂಶಗಳನ್ನು ಹೊಂದಿದೆ. ಅನಾನಸು ಹಣ್ಣನ್ನು ಆರೋಗ್ಯ ಮತ್ತು ರುಚಿಕರ ವಾದ ಒಂದು ಹಣ್ಣಾಗಿದೆ. ಉಷ್ಣವಲಯದ ಹಣ್ಣಾಗಿದೆ. ಈ ಹಣ್ಣು ಸಮೃದ್ಧ ನ್ಯೂಟ್ರಿಯಂಟ್ಸ್ ಮತ್ತು ಪೋಷಕಾಂಶಗಳಿಂದ ತುಂಬಿದ್ದು ಇದನ್ನು ಸೇವಿಸುವುದರಿಂದ ಹಲವು ರೀತಿಯ ಲಾಭಗಳನ್ನು ಪಡೆಯಬಹುದಾಗಿದೆ.
ರೋಗ ನಿರೋಧಕ
ಅನಾನಸು ಹಣ್ಣು ಆ್ಯಂಟಿ ಆ್ಯಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದೆ. ಆ್ಯಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಅನಾನಸು ಹೊಂದಿದೆ. ಇದು ಆ್ಯಂಟಿ ಆಕ್ಸಿಡೆಂಟ್‌ಗಳಾದ ಫ್ಲೇವನಾಯ್ಡ್ಸ್ ಮತ್ತು ಫೇನೋಲಿಕ್ ಆ್ಯಸಿಡ್‌ಗಳನ್ನು ಹೊಂದಿದೆ. ಅನಾನಸು ದೀರ್ಘಾವದಿಯ ಪರಿಣಾಮ ನಿವಾರಿಸುತ್ತದೆ. ಇದರಲ್ಲಿರುವ ರೋಗ ನಿರೋಧಕ ಗುಣಗಳು ಡಯಾಬಿಟೀಸ್ ಮತ್ತು ಹೃದಯ ಸಂಬಂಧಿ ರೋಗಗಳನ್ನು ಸಾಧ್ಯತೆ ಕಡಿಮೆ ಮಾಡುತ್ತದೆ.
ಜೀರ್ಣಕ್ರಿಯೆಗೆ ಸಹಕಾರಿ
ಬ್ರೋಮೆಲಿನ್ ಎಂದು ಕರೆಯಲ್ಪಡುವ ಜೀರ್ಣಕಾರಿ ಕಿಣ್ವಗಳ ಗುಂಪೊಂದು ಅನಾನಸು ಹಣ್ಣಿನಲ್ಲಿದೆ. ಇವುಗಳು ಪ್ರೋಟೀನ್ ಅಣುಗಳನ್ನು ಸಣ್ಣಸಣ್ಣ ತುಂಡುಗಳನ್ನಾಗಿ ಮಾಡಿ ಕರುಳಿನಲ್ಲಿ ಸುಲಭದಲ್ಲಿ ಹೀರಿಕೊಳ್ಳುವಂತೆ ಮಾಡುತ್ತದೆ. ಪ್ಯಾಂಕ್ರಿಯಾಟಿಕ್ ಕೊರತೆಯಿಂದ ಬಳಲುತ್ತಿರುವವರಿಗೆ ಇದು ಪ್ರಯೋಜನವಾಗಿದ್ದು ಜೀರ್ಣಕ್ರಿಯೆಯನ್ನು ಸರಿಯಾದ ಹಾದಿಯಲ್ಲಿ ಇಡಲು ಇದು ಸಹಾಯಕವಾಗಿದೆ.
ಕಣ್ಣಿನ ಆರೋಗ್ಯಕ್ಕೆ ಸಹಕಾರಿ
ವಿಟಮಿನ್ ಸಿ, ಆ್ಯಂಟಿ ಆಕ್ಸಿಡೆಂಟ್‌ಗಳು, ಮಿನರಲ್‌ಗಳಾದ ಪೋಟ್ಯಾಸಿಯಂ ಮತ್ತು ಮ್ಯಾಂಗನೀಸ್‌ಗಳಿಂದ ಅನಾನಸು ಶ್ರೀಮಂತವಾಗಿದೆ. ಇದರಲ್ಲಿ ಜೀವಕೋಶಗಳು ಡ್ಯಾಮೇಜ್ ಆಗುವುದನ್ನು ತಡೆಯುವ ಸಾಮರ್ಥ್ಯ ಹೊಂದಿದೆ. ಅನಾನಸ್ ಹಣ್ಣುಗಳು ಕಣ್ಣುಗಳ ಸ್ನಾಯು ಕ್ಷೀಣತೆಯ ಅಪಾಯವನ್ನು ಕಡಿಮೆ ಮಾಡುತ್ತವೆ. ಹಣ್ಣಿನಲ್ಲಿರುವ ಬೀಟಾ-ಕ್ಯಾರೊಟಿನ್ ಅಂಶಗಳು ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಮಾಡುತ್ತದೆ.
Related Articles
ಪೌಷ್ಟಿಕ ಆಹಾರ
ಅನಾನಸು ಹಣ್ಣು ಅತೀ ಕಡಿಮೆ ಕ್ಯಾಲೋರಿ ಅಂಶಗಳನ್ನು ಹೊಂದಿದ್ದು, ಹೆಚ್ಚು ಪೋಷಕಾಂಶಗಳನ್ನು ಒಳಗೊಂಡಿದೆ. ಅನಾನಸು ಸೇವನೆಯಿಂದ ಪ್ರೋಟೀನ್, ಕಾರ್ಬೋ ಹೈಡ್ರೇಟ್ಸ್, ಫೈಬರ್, ಪೊಟಾಶಿಯಂ, ಕೊಬ್ಬಿನಾಂಶ, ವಿಟಮಿನ್ ಸಿ, ತಾಮ್ರ, ಥೈಯಾಮಿನ್‌ನ ಅಂಶಗಳು ದೇಹಕ್ಕೆ ಲಭಿಸುತ್ತದೆ.