Advertisement

ಪರಿಣಾಮಕಾರಿ ನೃತ್ಯ ಪ್ರಾತ್ಯಕ್ಷಿಕೆ 

06:00 AM Nov 16, 2018 | Team Udayavani |

ಗ್ರಾಮೀಣ ಪ್ರದೇಶದಲ್ಲಿದ್ದುಕೊಂಡು ಸಾಹಿತ್ಯ, ಸಂಸ್ಕೃತಿಯ ಸಂವರ್ಧನೆಯಲ್ಲಿ ತೊಡಗಿಕೊಂಡಿರುವ ಏತಡ್ಕದ ಕುಂಬಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯದ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮ ನೃತ್ಯ ಪ್ರಾತ್ಯಕ್ಷಿಕೆ. ಶಾಸ್ತ್ರೀಯ ನೃತ್ಯ ಪ್ರಕಾರವಾದ ಭರತನಾಟ್ಯದ ಮುಖ್ಯಾಂಶಗಳನ್ನು ಪ್ರದರ್ಶಿಸಲಾಯಿತು. ನಡೆಸಿಕೊಟ್ಟವರು ನಾಟ್ಯ ವಿದ್ಯಾನಿಲಯ ಕುಂಬಳೆಯ ವಿ| ವಿದ್ಯಾಲಕ್ಷ್ಮೀ ಮತ್ತು ಬಳಗದವರು.ಮಹಾಗಣಪತಿಂ ಎಂಬ ಗಣೇಶ ಸ್ತುತಿಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.ಮುಂದೆ ಪದಂನ್ನು ಪ್ರಸ್ತುತಪಡಿಸಲಾಯಿತು.

Advertisement

ಕೊನೆಯಲ್ಲಿ ತಿಲ್ಲಾನದೊಂದಿಗೆ ಮುಕ್ತಾಯಗೊಳಿಸಲಾಯಿತು.ಮಧ್ಯ ಮಧ್ಯೆ ನೃತ್ಯ ಕಲಿಯುವ ವಿದ್ಯಾರ್ಥಿನಿಯರು ಭರತನಾಟ್ಯದ ವಿವಿಧ ಅಡವು,ಆಸನ,ಅಭಿನಯಗಳನ್ನು ಪ್ರದರ್ಶಿಸಿದರು. ಗುರು ವಿದ್ಯಾಲಕ್ಷ್ಮೀಯವರ ನಿರೂಪಣೆಗೆ ನೃತ್ಯದಲ್ಲಿ ಸಹಕರಿಸಿದವರು ಹಿರಿಯ ಶಿಷ್ಯೆಯರಾದ ಶ್ರುತಿ ಕುಂಬಳೆ,ಧನ್ಯಾ ಕುಂಟಿಕಾನ ಮತ್ತು ಅಶ್ವಿ‌ನಿ ನೀರ್ಚಾಲು.ಒಟ್ಟಿನಲ್ಲಿ ಪರಿಣಾಮಕಾರಿಯಾಗಿ ಮೂಡಿ ಬಂದ ನೃತ್ಯ ಪ್ರಾತ್ಯಕ್ಷಿಕೆ ಆಸಕ್ತರಿಗೆ ಮುದ ನೀಡಿತು. 

ಕೆ.ನರಸಿಂಹ ಭಟ್‌ 

Advertisement

Udayavani is now on Telegram. Click here to join our channel and stay updated with the latest news.

Next