Advertisement

ವುಹಾನ್ ಕೋವಿಡ್ ನ ಮೂಲ ಕೇಂದ್ರ;ಅಮೆರಿಕದ ಆರೋಪ ವುಹಾನ್ ಲ್ಯಾಬ್ ನಿರ್ದೇಶಕ ಅಲ್ಲಗಳೆದಿದ್ದೇಕೆ?

09:27 AM Apr 20, 2020 | Nagendra Trasi |

ಬೀಜಿಂಗ್: ಇಡೀ ವಿಶ್ವವನ್ನೇ ಕಂಗೆಡಿಸಿರುವ ಮಾರಣಾಂತಿಕ ಕೋವಿಡ್ 19 ವೈರಸ್ ಹಬ್ಬಲು ಚೀನಾದ ವುಹಾನ್ ನಲ್ಲಿರುವ ಪ್ರಯೋಗಾಲಯ ಕಾರಣ ಎಂಬ ಆರೋಪವನ್ನು ಪ್ರಯೋಗಾಲಯದ ನಿರ್ದೇಶಕ ಸಾರಸಗಟಾಗಿ ತಳ್ಳಿಹಾಕಿದ್ದು, ಇದೊಂದು ಅಸಾಧ್ಯವಾದ ಕೆಲಸ ಎಂದು ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.

Advertisement

ಮಾರಣಾಂತಿಕ ಕೋವಿಡ್ ವೈರಸ್ ಅನ್ನು ಪಾರದರ್ಶಕವಾಗಿ ನಿಭಾಯಿಸಬೇಕು ಎಂದು ಬೀಜಿಂಗ್ ಮೇಲೆ ಒತ್ತಡ ಹೆಚ್ಚುತ್ತಿದ್ದು, ಮತ್ತೊಂದೆಡೆ ವುಹಾನ್ ನಲ್ಲಿರುವ ಬಿಗಿ ಭದ್ರತೆಯ ಜೈವಿಕ ಪ್ರಯೋಗಾಲಯದಿಂದಲೇ ಸೋಂಕು ಹರಡಿತೆ ಎಂಬ ಬಗ್ಗೆ ಅಮೆರಿಕ ತನಿಖೆ ನಡೆಸುತ್ತಿದೆ.

ಚೀನಾದ ವುಹಾನ್ ನಿಂದಲೇ ವೈರಸ್ ಹರಡಿದೆ ಎಂಬ ಅಮೆರಿಕದ ಆರೋಪವನ್ನು ಪ್ರಯೋಗಾಲಯದ ಮುಖ್ಯಸ್ಥ ಯುವಾನ್ ಜಿಮಿಂಗ್ ತಿರುಗೇಟು ನೀಡಿದ್ದಾರೆ. ನಮ್ಮ ಪ್ರಯೋಗಾಲಯದಿಂದ ಕೋವಿಡ್ ವೈರಸ್ ಹಬ್ಬಿದ್ದರೆ ನಮ್ಮ ಸಂಶೋಧಕರಿಗೂ ಸೋಂಕು ತಗುಲಬೇಕಿತ್ತು. ಆದರೆ ಇಡೀ ಪ್ರಯೋಗಾಲಯದಲ್ಲಿ ಒಬ್ಬರೇ ಒಬ್ಬ ವ್ಯಕ್ತಿಗೆ ಸೋಂಕು ತಗುಲಿಲ್ಲ ಎಂದು ಹೇಳಿದೆ.

ಚೀನಾ ವಿಜ್ಞಾನಿಗಳು ಈ ಮೊದಲೇ ಹೇಳಿದಂತೆ ವುಹಾನ್ ನ ವನ್ಯಜೀವಿ ಮಾಂಸ ಮಾರಾಟದ ಮಾರುಕಟ್ಟೆಯಿಂದಲೇ ಮನುಷ್ಯನಿಗೆ ಸೋಂಕು ಹರಡಿರಬೇಕು ಎಂದು ಪುನರುಚ್ಚರಿಸಿದೆ. ಪ್ರಯೋಗಾಲಯದಿಂದ ವೈರಸ್ ಹೊರ ಬರಲು ಯಾವುದೇ ದಾರಿ ಇಲ್ಲ ಎಂದು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶಬದಲ್ಲಿ ಯುವಾನ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next