Advertisement

ನಾಳೆಯಿಂದ ಆಗುವ ಈ ಎಲ್ಲ ಬದಲಾವಣೆಗಳು ನಿಮಗೆ ತಿಳಿದಿರಲಿ

06:52 PM Sep 30, 2020 | Karthik A |

ಮಣಿಪಾಲ: ನಾಳೆ ಅಂದರೆ ಅಕ್ಟೋಬರ್‌ 1ರಿಂದ ದೇಶಾದ್ಯಂತ ಅನೇಕ ನಿಯಮಗಳು ಬದಲಾಗಲಿವೆ. ವಾಹನಗಳನ್ನು ಓಡಿಸುವವರಿಂದ ಹಿಡಿದು, ವಿದೇಶಕ್ಕೆ ಹಣ ಕಳುಹಿಸುವವರು, ಗೂಗಲ್‌ ಮೂಲಕ ಮೀಟ್‌ ಆಗುವವರಿಗೂ ಇದು ಅನ್ವಯವಾಗಲಿದೆ. ಹೀಗಾಗಿ ಈ ಎಲ್ಲ ಬದಲಾವಣೆಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

Advertisement

ವಾಹನದಲ್ಲಿ ಆರ್‌ಸಿ, ಡಿಎಲ್‌ ಮುದ್ರಿತ ಪ್ರತಿ ಬೇಕಾಗೇ ಇಲ್ಲ
ವಾಹನದಲ್ಲಿ ನಿಮ್ಮ ಡ್ರೈವಿಂಗ್‌ ಲೈಸೆನ್ಸ್‌ ಮತ್ತು ವಾಹನದ ಆರ್‌ಸಿಯನ್ನು ಇನ್ನು ಮುಂದೆ ನೀವು ಇಡಬೇಕಾಗಿಲ್ಲ. ವಾಹನ ಚಲಾಯಿಸುವಾಗ ಪರವಾನಗಿ ಮತ್ತು ನೋಂದಣಿ ದಾಖಲೆಗಳನ್ನು ಇಟ್ಟುಕೊಳ್ಳುವ ಅಗತ್ಯವಿಲ್ಲ. ಆದರೆ ಅದಕ್ಕೆ ಬದಲಾಗಿ ಅದರ ಸಾಫ್ಟ್ ಕಾಪಿಯನ್ನು ದಾಖಲೆಯಾಗಿ ತೋರಿಸಬಹುದಾಗಿದೆ.

ಚಾಲನೆ ಸಂದರ್ಭ ಮೊಬೈಲ್‌ ಬಳಸಿ! ಆದರೆ…
ಹೌದು ಕೆಲವೊಬ್ಬರಿಗೆ ಚಾಲನೆ ಸಂದರ್ಭ ಮೊಬೈಲ್‌ ಬಳಸುವ ಅಭ್ಯಾಸ ಇರುತ್ತದೆ. ಇದಕ್ಕೆ ಅನುಮತಿ ಇದೆ. ವಿಶೇಷವಾಗಿ ಕಾರಿನಲ್ಲಿ ಪ್ರಯಾಣಿಸುವವರು ಮೊಬೈಲ್‌ ಅನ್ನು ಬಳಸಬಹುದು. ಆದರೆ ಗೂಗಲ್‌ ಮ್ಯಾಪ್‌ ಅಥವ ಮಾರ್ಗವನ್ನು ತಿಳಿಯಲು ಮಾತ್ರ. ಎಲ್ಲಾದರೂ ನಿಯಮ ಮೀರಿ ಮೊಬೈಲ್‌ನಲ್ಲಿ ಮಾತನಾಡಿದರೆ 5000 ರೂ.ವರೆಗೆ ದಂಡ ವಿಧಿಸಬಹುದು.

ಸಿಹಿ ತಿನಿಸುಗಳ ಸಮಯ ಬರೆಯಬೇಕು
ಬೇಕರಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಲಭ್ಯವಾಗುವ ಸಿಹಿ ತಿಂಡಿಗಳ ಪ್ಯಾಕ್‌ನಲ್ಲಿ ಬಳಕೆಯ ದಿನಾಂಕವನ್ನು ಕಡ್ಡಾಯವಾಗಿ ಬರೆಯಲೇ ಬೇಕಾಗಿದೆ. ಭಾರತೀಯ ಆಹಾರ ಮತ್ತು ಗುಣಮಟ್ಟ ಪ್ರಾಧಿಕಾರದ ಹೊಸ ನಿಯಮಗಳ ಪ್ರಕಾರ ಅಂಗಡಿಗಳಲ್ಲಿನ ಸಿಹಿತಿಂvಡಿಗಳ ಮೇಲೆ ಅವು ಯಾವ ದಿನಾಂಕದವರೆಗೆ ತಿನ್ನಲು ಯೋಗ್ಯ ಎಂಬುದನ್ನು ನಮೂದಿಸಬೇಕು.

ವಿಮಾ ಪಾಲಿಸಿಯಲ್ಲಿ ಬದಲಾವಣೆ
ವಿಮಾ ಪಾಲಿಸಿ ಹೊಂದಿರುವವರು ಸತತ ಎಂಟು ವರ್ಷಗಳ ಕಾಲ ಪ್ರೀಮಿಯಂ ಪಾವತಿಸಿದರೆ, ಕಂಪೆನಿಗಳು ಅವರ ಹಕ್ಕನ್ನು ತಿರಸ್ಕರಿಸಲು ಸಾಧ್ಯವಾಗುವುದಿಲ್ಲ. ಇವು ಈಗ ಮೊದಲಿಗಿಂತ ಹೆಚ್ಚಿನ ರೋಗಗಳನ್ನು ಸೇರಿಸಿಕೊಳ್ಳಲಾಗಿದೆ.

Advertisement

ವಿದೇಶಕ್ಕೆ ಹಣವನ್ನು ಕಳುಹಿಸಲು ಶೇ. 5ತೆರಿಗೆ
ಮಕ್ಕಳು ಅಥವಾ ಸಂಬಂಧಿಕರು ವಿದೇಶಕ್ಕೆ ಹಣವನ್ನು ಕಳುಹಿಸುವ ಅಥವಾ ಆಸ್ತಿ ಖರೀದಿಸುವ ಮೊತ್ತಕ್ಕೆ ಶೇ. 5ರ ಟಿಸಿಎಸ್‌ ಪಾವತಿಸಬೇಕಾಗುತ್ತದೆ. ಹಣಕಾಸು ಕಾಯ್ದೆ 2020ರ ಪ್ರಕಾರ ನೀವು ವಾರ್ಷಿಕವಾಗಿ 2.5 ಮಿಲಿಯನ್‌ ಡಾಲರ್‌ ವಿದೇಶಕ್ಕೆ ಕಳುಹಿಸಬಹುದು. ಇದನ್ನು ಟಿಸಿಎಸ್‌ ವ್ಯಾಪ್ತಿಗೆ ತರಲಾಗಿದೆ.

ಕಲರ್‌ ಟಿವಿ ಖರೀದಿ ದುಬಾರಿ
ಕಲರ್ ಟಿವಿಗಳಿಗೆ  ಸಂಬಂಧಪಟ್ಟ ಬಿಡಿಭಾಗಗಳ  ಆಮದಿನ ಮೇಲೆ ಕೇಂದ್ರ ಸರಕಾರ ಶೇ. 5ರ ಕಸ್ಟಮ್ಸ್‌ ಸುಂಕ ಹಾಕಿದೆ. ಈ ಹಿಂದೆ ಇದಕ್ಕೆ ಸರಕಾರ ಒಂದು ವರ್ಷದ ವಿನಾಯಿತಿ ನೀಡಿತ್ತು.

ಗೂಗಲ್‌ ಮೀಟ್‌ಗೆ 60 ನಿಮಿಷಕ್ಕೆ ಸೀಮಿತ
ಗೂಗಲ್‌ ಮೀಟ್‌ ಅನ್ನು ಬಳಸುತ್ತಿರುವವರು ಇನ್ನು ಕೇವಲ 60 ನಿಮಿಷಗಳು ಮಾತ್ರ ಉಚಿತವಾಗಿ ಬಳಸಬಹುದಾಗಿದೆ. ಉಚಿತ ಬಳಕೆದಾರರು ಸಭೆಯ ಗರಿಷ್ಠ 60 ನಿಮಿಷಗಳು ಮಾತ್ರ ಹೊಂದಬಹುದಾಗಿದೆ. ಇನ್ನೂ ಹೆಚ್ಚಿನ ಅವಧಿಗಳ ಸೇವೆ ಬೇಕೆಂದಾದರೆ ನೀವು ಪಾವತಿಸಬೇಕು.

ಉಜ್ವಾಲಾ ಅನಿಲ ಸಂಪರ್ಕ ಉಚಿತವಲ್ಲ
ಉಚಿತ ರಸಾಯಿ ಅನಿಲ ಸಂಪರ್ಕವನ್ನು ಪಡೆಯುವ ಪ್ರಕ್ರಿಯೆಯು ಸೆ.‌ 30ರಂದು ಕೊನೆಗೊಳ್ಳುತ್ತಿದೆ. ಕೋವಿಡ್‌ ಕಾರಣ ಅದರ ಕಡೆಯ ದಿನಾಂಕವನ್ನು ವಿಸ್ತರಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next