Advertisement

ಯಾರು ವಿರೋಧಿಸಿದರೂ ಯೋಜನೆ ಅನುಷ್ಠಾನ: ಸಚಿವ ಪ್ರಹ್ಲಾದ ಜೋಷಿ

11:21 PM Jan 01, 2023 | Team Udayavani |

ಹುಬ್ಬಳ್ಳಿ: ಯಾವ ರಾಜ್ಯದ ನಾಯಕರು ವಿರೋಧ ಮಾಡಿದರೂ ನ್ಯಾಯಾ ಧಿಕರಣದ ಆದೇಶ ದಂತೆ ಇನ್ನೆರಡು ತಿಂಗಳಲ್ಲಿ ಮಹಾದಾಯಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ಇದಕ್ಕೆ ಪರಿಸರ ಇಲಾಖೆ ಅನುಮತಿ ಅಗತ್ಯವಿಲ್ಲ. ಡಿಪಿಆರ್‌ ಅನುಮೋದನೆಯಲ್ಲಿ ಏನೆಲ್ಲ ನಿಬಂಧನೆ ಹಾಕಿದ್ದಾರೋ ಅವೆಲ್ಲವನ್ನೂ ಪೂರ್ಣಗೊಳಿಸಿ ಯೋಜನೆ ಆರಂಭಿ ಸಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆ ಕುರಿತು ಜನರಲ್ಲಿ ಯಾವುದೇ ಗೊಂದಲ ಬೇಡ. ಕಾಂಗ್ರೆಸ್‌ ನಾಯಕರು ವಿನಾಕಾರಣ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರಕಾರದಿಂದ ರಾಜ್ಯ ಸರಕಾರಕ್ಕೆ ಕಳುಹಿಸುವ ಪತ್ರದಲ್ಲಿ ದಿನಾಂಕ ಹುಡುಕುವ ಸಣ್ಣ ಕೆಲಸ ಕಾಂಗ್ರೆಸ್‌ ಮಾಡುತ್ತಿದೆ. ಯೋಜನೆಗಾಗಿ ಬಿಜೆಪಿಯೂ ಹೋರಾಟ ಮಾಡಿದೆ. ಇದನ್ನು ನಾವೇ ಕಾರ್ಯ ರೂಪಕ್ಕೆ ತರುತ್ತೇವೆ ಎಂದರು.

ಹಿಂದಿನ ಕಾಂಗ್ರೆಸ್ಸಲ್ಲ
ಹಿಂದಿನ ಕಾಂಗ್ರೆಸ್‌ ನಾಯಕರು ಸ್ವಾತಂತ್ರÂಕ್ಕಾಗಿ ಹೋರಾಟ ಮಾಡಿ ಪ್ರಾಣತ್ಯಾಗ ಮಾಡಿದ್ದಾರೆ. ಆದರೆ ಇಂದಿನ ಕಾಂಗ್ರೆಸ್‌ ಇಟಲಿ ಬೇಸ್ಡ್ ಕಾಂಗ್ರೆಸ್‌ ಪಕ್ಷವಾಗಿದೆ. ಇವರ್ಯಾರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ. ಇವರು ಕಾಂಗ್ರೆಸ್‌ ಎಂದು ಹೇಳಿ ಕೊಳ್ಳುತ್ತಿದ್ದಾರೆ. ಇವರಿಗೆ ಅಂತಹ ನೈತಿ ಕತೆಯೇ ಇಲ್ಲ. ನೆಹರೂ, ಇಂದಿರಾ ಗಾಂಧಿ, ರಾಜೀವ ಗಾಂಧಿ ಹೆಸರಲ್ಲಿ 450ಕ್ಕೂ ಹೆಚ್ಚು ಯೋಜನೆಗಳಿವೆ. ಕಾಂಗ್ರೆಸ್‌ನಲ್ಲಿ ಇವರನ್ನು ಬಿಟ್ಟರೆ ಮತಾöರೂ ಇರಲಿಲ್ಲವೆ.

ಸುಭಾಸಚಂದ್ರ ಬೋಸ್‌, ಸರ್ದಾರ್‌ ವಲ್ಲಭಭಾಯಿ ಪಟೇಲರಂತಹ ಮಹಾನರ ಹೆಸರಲ್ಲಿ ಯೋಜನೆ ತರಲು ನರೇಂದ್ರ ಮೋದಿ ಅವರೇ ಬರಬೇಕಾಯಿತು ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next