ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಮಾತ್ರ 2021ರಲ್ಲಿ ಎನ್‌ಇಪಿ ಜಾರಿಗೆ ತರಲಾಗಿತ್ತು. ಯಾವುದೇ ಪೂರ್ವ ತಯಾರಿ ಇಲ್ಲದೆ ಎನ್‌ಇಪಿ ಜಾರಿ ಮಾಡಿರುವುದರಿಂದ ಸಾಕಷ್ಟು ನ್ಯೂನತೆ ಇರುವುದರಿಂದ ರದ್ದು ಮಾಡಲು ನಿರ್ಧರಿಸಲಾಗಿದೆ ಎಂದರು.
Advertisement
ರಾಜ್ಯದ ಹಲವು ಕಡೆಗಳಲ್ಲಿ ಎನ್‌ಇಪಿ ಜಾರಿ ನಂತರ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಮೂಲ ಸೌಕರ್ಯ ಅನೇಕ ಕಡೆ ಇಲ್ಲದ ಕಾರಣ ರಾಜ್ಯದಲ್ಲಿ ಎನ್‌ಇಪಿಗೆ ಪೂರಕ ವಾತಾವರಣ ಇಲ್ಲ. ಎನ್‌ಇಪಿ ವಿಷಯಗಳೇ ಬೇರೆ, ರಾಜ್ಯದಲ್ಲಿ ಚಾಲ್ತಿಯಲ್ಲಿರುವ ವಿಷಯಗಳೇ ಬೇರೆ. ಗ್ರಾಮೀಣ ಮಕ್ಕಳಿಗೆ ಅನೇಕ ರೀತಿಯ ಅನಾನುಕೂಲ ಆಗಿದೆ. ಆದ್ದರಿಂದ ಎಲ್ಲರಿಗೂ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲಾ ಜಾತಿ, ವರ್ಗಗಳನ್ನು ಒಳಗೊಂಡ ಶಿಕ್ಷಣ ನೀತಿ ಜಾರಿ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.
ಪರಿಶಿಷ್ಟ ವಿದ್ಯಾರ್ಥಿಗಳ ವೇತನ ವಿಳಂಬ ಆಗುತ್ತಿದೆ ಎಂಬ ಪ್ರಶ್ನೆಗೆ, ವಿದ್ಯಾರ್ಥಿ ವೇತನ ಮೊದಲಿನಂತೆ ಪಾವತಿ ಆಗುತ್ತಿದೆ. ಕೇಂದ್ರ ಸರ್ಕಾರ ಡಿಬಿಟಿ ಪದ್ಧತಿ ಮಾಡಿದೆ. ಶೇ.60 ಕೇಂದ್ರ, ಶೇ.40 ರಾಜ್ಯದ್ದು ಎಂದು ಮಾಡಿರುವುದರಿಂದ ಕೆಲವು ಕಾಲೇಜುಗಳಲ್ಲಿ ಗೊಂದಲ ಆಗಿದೆ. ಇದನ್ನೇ ನೆಪವಾಗಿಟ್ಟುಕೊಂಡು ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಪ್ರವೇಶಕ್ಕೆ ತೊಂದರೆ ಕೊಡಬಾರದು ಎಂದು ಈಗಾಗಲೇ ಸರ್ಕಾರ ಸ್ಪಷ್ಟ ಆದೇಶ ಹೊರಡಿಸಲಾಗಿದೆ ಎಂದು ಹೇಳಿದರು.
Related Articles
ಪರೀûಾ ವೇಳಾಪಟ್ಟಿ ಸಮಾನಾಂತರ
ಅತಿಥಿ ಉಪನ್ಯಾಸಕರ ನೇಮಕ ಹಾಗೂ ವರ್ಗಾವಣೆಯಿಂದ ಸಮಸ್ಯೆಯಾಗುತ್ತಿದೆ. ಆದ್ದರಿಂದ ಇಡೀ ರಾಜ್ಯದಲ್ಲಿ ಪರೀûಾ ವೇಳಾಪಟ್ಟಿಯನ್ನು ಸಮಾನಾಂತರವಾಗಿ ತರಬೇಕೆಂದು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ವಿವಿಧ ಇಲಾಖೆಗಳ ಎರಡೂವರೆ ಲಕ್ಷ ಹುದ್ದೆಗಳನ್ನು ತುಂಬಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಹೇಳಿದರು.
Advertisement