ಶಿವಮೊಗ್ಗ: ಉನ್ನತ ಶಿಕ್ಷಣದಲ್ಲಿ ಜಾರಿ ಮಾಡಿರುವ ಎನ್ಇಪಿಯನ್ನು ಮುಂದಿನ ವರ್ಷದಿಂದ ಪ್ರಾಥಮಿಕ ಶಿಕ್ಷಣದಲ್ಲೂ ಪ್ರಾರಂಭ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಪ್ರಧಾನಿ ಮೋದಿ ನೂತನ ಶಿಕ್ಷಣ ನೀತಿ ಮಾಡಿದ್ದಾರೆ. ಈ ಸರಳೀಕರಣವೇ ಹೊಸ ವಿದ್ಯಾ ನೀತಿಯ ಒಂದು ಭಾಗ. ಸರಳ, ಸಹಜ ಹಾಗೂ ಸ್ಪಷ್ಟವಾಗಿ ಕಲಿಯಲು ಜತೆಗೆ ಹತ್ತು ಹಲವಾರು ಅವಕಾಶಗಳಿವೆ. ಕಲಾ ವಿಭಾಗದವರು ವಿಜ್ಞಾನ ಕಲಿಯಬಹುದು. ವಿಜ್ಞಾನದಿಂದ ಪ್ರಾರಂಭ ಮಾಡಿ ಕಲಾ ವಿಭಾಗ ಕಲಿಯಬಹುದು.ಎರಡು ಬಿಟ್ಟು ಕಾಮರ್ಸ್ ವಿಭಾಗಕ್ಕೂ ಹೋಗಬಹುದು. ಈ ರೀತಿಯ ಮಲ್ಟಿ ಕೋರ್ಸ್ಗಳನ್ನು ಒಬ್ಬ ವಿದ್ಯಾರ್ಥಿ ಒಂದೇ ಸಂದರ್ಭದಲ್ಲಿ ಎರಡು ಅಥವಾ ಮೂರು ಡಿಗ್ರಿಗಳನ್ನು ಪಡೆಯುವಂತಹ ಹೊಸ ನೀತಿಯನ್ನು ಕರ್ನಾಟಕ ಅನುಷ್ಠಾನಗೊಳಿಸುತ್ತಿದೆ. ಈಗಾಗಲೇ ಉನ್ನತ ಶಿಕ್ಷಣದಲ್ಲಿ ಜಾರಿ ಮಾಡಿದ್ದೇವೆ. ಮುಂದಿನ ವರ್ಷ ಪ್ರಾಥಮಿಕ ಶಿಕ್ಷಣದಲ್ಲೂ ಪ್ರಾರಂಭ ಮಾಡುತ್ತಿದ್ದೇವೆ. ಅದಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.