Advertisement

Kundapur;ಕಾಂಗ್ರೆಸ್‌ ಅಧಿಕಾರಕ್ಕೇರಿದಾಕ್ಷಣ ಗ್ಯಾರಂಟಿ Card ಅನುಷ್ಠಾನ: ದಿನೇಶ್‌ ಹೆಗ್ಡೆ

01:30 PM May 08, 2023 | Team Udayavani |

ಕುಂದಾಪುರ: ಕಾಂಗ್ರೆಸ್‌ ಪಕ್ಷದ ವತಿಯಿಂದ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ನೀಡುವ ಸವಲತ್ತುಗಳ ಕುರಿತು ಗ್ಯಾರಂಟಿ ಕಾರ್ಡ್‌ ಬಿಡುಗಡೆ ಮಾಡಿದೆ. ಅದನ್ನು ಈಗಾಗಲೇ ಮನೆ ಮನೆಗೆ ಹಂಚಲಾಗಿದೆ. ಮಹಿಳೆಯರಿಂದ, ಹಿರಿಯರಿಂದ ಅಪಾರ ಸ್ಪಂದನೆ ದೊರೆಯುತ್ತಿದೆ. ಅದರಲ್ಲಿ ಇರುವ ಪ್ರಮುಖ ಐದು ಅಂಶಗಳು. ಗೃಹಲಕ್ಷಿ$¾à, ಗೃಹ ಜ್ಯೋತಿ, ಅನ್ನಭಾಗ್ಯ, ಯುವನಿಧಿ  ಹಾಗೂ ಮಹಿಳೆಯರಿಗೆ ಸರಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ ಸೌಲಭ್ಯ. ಈ ಭರವಸೆಗಳನ್ನು ಖಂಡಿತಾ ನಮ್ಮ ಸರಕಾರ ಅಧಿ ಕಾರಕ್ಕೆ ಬಂದ ತಕ್ಷಣ ಅನುಷ್ಠಾನ ಮಾಡಲಿದೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ದಿನೇಶ್‌ ಹೆಗ್ಡೆ ಮೊಳಹಳ್ಳಿ ಹೇಳಿದ್ದಾರೆ.

Advertisement

ಅವರು ಕೋಟದಿಂದ ಹೊರಟ ಪಾದಯಾತ್ರೆ ಸಾಲಿಗ್ರಾಮ ತಲುಪಿ ಅಲ್ಲಿ ಕಾಂಗ್ರೆಸ್‌ ಪರ ಮತಯಾಚಿಸಿ ನಡೆದ ರೋಡ್‌ ಶೋದಲ್ಲಿ ಮಾತನಾಡಿದರು.

ಮತ ಯಾಚನೆ ನಿರ್ಧಾರ
ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ನಾವು ಕೊಟ್ಟ ಗ್ಯಾರಂಟಿಯನ್ನು ಮೊದಲ ಕ್ಯಾಬಿನೆಟ್‌ ಸಭೆಯಲ್ಲೇ ಅಂಗೀಕಾರಗೊಳ್ಳಲಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿಯನ್ನು ಜಾರಿ ಮಾಡದೇ ಇದ್ದರೆ ನಾವು ಮುಂದಿನ ಚುನಾವಣೆಗಳಲ್ಲಿ ಮತ ಯಾಚಿಸುವುದಿಲ್ಲ. ಗ್ಯಾರಂಟಿಯನ್ನು ಜಾರಿ ಮಾಡಿದರೆ ಬಿಜೆಪಿ ಕೂಡಾ ಇಂತಹ ನಿರ್ಧಾರ ಕೈಗೊಳ್ಳುತ್ತದೆಯೇ ಎಂದು ಸವಾಲು ಹಾಕಿದರು.

ಹಾಲಾಡಿ ಹೆಸರಲ್ಲಿ ಮತ?
ಡಿಸಿಸಿ ವಕ್ತಾರ ವಿಕಾಸ ಹೆಗ್ಡೆ, ಕುಂದಾಪುರ ಕ್ಷೇತ್ರದಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರು ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಅವರ ನಾಯಕತ್ವದಲ್ಲಿ ಈ ಚುನಾವಣೆಯಲ್ಲಿ ಇರಬಹುದು. ಆದರೆ ಇಲ್ಲಿ ಅಭ್ಯರ್ಥಿಯ ಪರವಾಗಿ ಯಾರೂ ಮತ ಕೇಳುತ್ತಿಲ್ಲ. ಹಾಲಾಡಿ ಶ್ರೀನಿವಾಸ ಶೆಟ್ಟರ ಹೆಸರು ಹೇಳಿ ಮತ ಕೇಳಲಾಗುತ್ತಿದೆ ಎಂದರು.

30 ವರ್ಷಗಳಿಂದ ರಾಜಕಾರಣದಲ್ಲಿ ಇದ್ದು ಸ್ವಂತ ಊರನ್ನೇ ಅಭಿವೃದ್ಧಿ ಮಾಡಲಾಗದವರು ಇಡೀ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಸಾಧ್ಯವೇ? ಅಮಾಸೆಬೈಲು ಗ್ರಾಮದಲ್ಲಿ 11 ಶಾಲೆಗಳಿದ್ದು 3 ಶಾಲೆಗಳಲ್ಲಿ ಶೂನ್ಯ ಶಿಕ್ಷಕರ ಶಾಲೆಯಾಗಿದೆ. ಅಮಾಸೆಬೈಲು ಗ್ರಾಮದಲ್ಲಿ ಹಿಂದು ರುದ್ರಭೂಮಿ ಇಲ್ಲ, ಜೂನಿಯರ್‌ ಕಾಲೇಜು ಬೇಡಿಕೆ ಇದೆ. ವಾರಾಹಿ ನೀರು ಅಲ್ಲೇ ಹರಿದರೂ ಅಮಾಸೆಬೈಲು ಗ್ರಾಮಕ್ಕೆ ಸಿಗುತ್ತಿಲ್ಲ. ಕೃಷಿಕರ ಪಾಡು ಹೇಳತೀರದು. ಇಷ್ಟೊಂದು ಸಮಸ್ಯೆ ಅಮಾಸೆಬೈಲು ಗ್ರಾಮದಲ್ಲಿದ್ದರೂ ಕೂಡಾ ಕಳೆದ 30 ವರ್ಷಗಳಿಂದ ಶಾಸಕರ ನಿಕಟ ಸಂಪರ್ಕ ಇರುವ ಕಿರಣ್‌ ಕೊಡ್ಗಿಯವರಿಂದ ಏಕೆ ಪರಿಹರಿಸಲು ಆಗಲಿಲ್ಲ ಎಂದು ಪ್ರಶ್ನಿಸಿದರು.

Advertisement

ಅಧಿಕಾರಕ್ಕೆ
ಕೋಟ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶಂಕರ ಎ.ಕುಂದರ್‌, ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ. ಕುಂದಾಪುರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ದಿನೇಶ ಹೆಗ್ಡೆ ಅವರಿಗೆ ರಾಜಕಾರಣ ಹೊಸತಲ್ಲ, ಕ್ಷೇತ್ರದ ಸಮಗ್ರ ಪರಿಚಯ ಹೊಂದಿದ್ದಾರೆ. ಅವರು ಗೆಲುವು ಸಾಧಿಸಲಿದ್ದಾರೆ. ಯಾವುದೇ ಅಪಪ್ರಚಾರಕ್ಕೆ ಕಿವಿಗೊಡಬೇಕಾದ ಅವಶ್ಯವಿಲ್ಲ ಎಂದರು.

ಇಂದು ಬೈಕ್‌ ಜಾಥಾ
ಕಾಂಗ್ರೆಸ್‌ ಪರವಾಗಿ ಮೇ 8ರಂದು ಸಾಸ್ತಾನದಿಂದ ಕುಂದಾಪುರವರೆಗೆ ಬೈಕ್‌ ಜಾಥಾ ನಡೆಯಲಿದೆ. ನೂರಾರು ಕಾರ್ಯಕರ್ತರು ಬೈಕ್‌ಗಳಲ್ಲಿ ಕಾಂಗ್ರೆಸ್‌ ಧ್ವಜದೊಂದಿಗೆ ಜಾಥಾದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ನಗರದಲ್ಲಿ ಪಾದಯಾತ್ರೆ ಮೂಲಕ ಅಭ್ಯರ್ಥಿ ದಿನೇಶ್‌ ಹೆಗ್ಡೆ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹರಿಪ್ರಸಾದ್‌ ಶೆಟ್ಟಿ ಕಾನ್ಮಕ್ಕಿ ಇತರ ನಾಯಕರು, ಕಾರ್ಯಕರ್ತರು ಸಾಮೂಹಿಕವಾಗಿ ತೆರಳಿ ಮತಯಾಚನೆ ಮಾಡಲಿದ್ದಾರೆ. ಈ ಮೂಲಕ ಕಾಂಗ್ರೆಸ್‌ ಗೆಲುವಿಗೆ ಮುನ್ನುಡಿ ಬರೆಯಲಿದ್ದಾರೆ. ಈ ಬಾರಿಯ ಚುನಾವಣೆ ಹೊಸ ಇತಿಹಾಸದ ಸೃಷ್ಟಿಗೆ ಕಾರಣವಾಗಲಿದೆ. ಈಗಾಗಲೇ ಕೋಟದಿಂದ ಸಾಲಿಗ್ರಾಮವರೆಗೆ ನಡೆದ ಜಾಥಾ, ಪಾದಯಾತ್ರೆಗೆ ಅಭೂತಪೂರ್ವ ಜನಸ್ಪಂದನ ದೊರೆತಿದ್ದು ಗ್ರಾಮಾಂತರಗಳಲ್ಲಿ ನಡೆದ ಪ್ರಚಾರ ಸಭೆಗಳಿಗೂ ಜನರ ದಂಡೇ ಆಗಮಿಸಿತ್ತು. ದಿನೇಶ್‌ ಹೆಗ್ಡೆ ಗೆಲುವು ನಿಚ್ಚಳವಾಗಲಿದೆ ಎಂದು ಪ್ರಕಟನೆ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next