Advertisement
ಸುರತ್ಕಲ್ ನಲ್ಲಿ ರವಿವಾರ ಸುರತ್ಕಲ್, ಪಣಂಬೂರು, ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ 148ಕ್ಕೂ ಹೆಚ್ಚು ರೌಡಿಗಳ ಪೆರೆಡ್ ನಡೆಸಿ ಎಚ್ಚರಿಸಿದರು.
Related Articles
Advertisement
ಬಳಿಕ ಪಣಂಬೂರು ಉಪವಿಭಾಗದ ಮೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ರೌಡಿ ಶೀಟರ್ ಗಳನ್ನು ಕರೆಸಿ ಅವರ ಚಟುವಟಿಕೆಗಳ ಕುರಿತು ಆಯಾ ಠಾಣಾ ಅಧಿಕಾರಿಗಳಿಂದ ಮಾಹಿತಿ ಪಡೆದ ಎನ್.ಶಶಿಕುಮಾರ್ ಅವರು ಪ್ರತೀ ರೌಡಿಗಳ ಮಾಹಿತಿಯನ್ನು ಪೊಲೀಸ್ ಠಾಣೆಗಳಲ್ಲಿ ಇರುವ ಅಧಿಕಾರಿಗಳು, ಸಿಬಂದಿಗಳು, ಬೀಟ್ ಪೊಲೀಸರು ಪಡೆದುಕೊಂಡು ನಿಗಾವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಯಾರಾದರೂ ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದೇ ಆದಲ್ಲಿ ಅಂತಹವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ ಎಂದು ಸೂಚಿಸಿದರು. ಈ ಸಂದರ್ಭ ಡಿಸಿಪಿ ಹರಿರಾಮ್ ಶಂಕರ್, ಎಸಿಪಿ ಬೆಳ್ಳಿಯಪ್ಪ, ಸುರತ್ಕಲ್ ಸಿಐ ಚಂದ್ರಪ್ಪ, ವಿವಿಧ ಠಾಣೆಯ ಪೊಲೀಸ್ ಅಧಿಕಾರಿಗಳು ಮತ್ತಿತರರು ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಸೋದರಳಿಯನ ಪ್ರಗತಿಗೆ ಶ್ರಮಿಸುತ್ತಿರುವ ಮಮತಾ ಬ್ಯಾನರ್ಜಿ ಇನ್ಮುಂದೆ ಏಕಾಂಗಿ: ಶಾ ಆಕ್ರೋಶ
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಆಯುಕ್ತರು, ಪ್ರತೀ ಠಾಣಾ ವ್ಯಾಪ್ತಿಯ ಅಪರಾಧಿಗಳ ಬಗ್ಗೆ ಠಾಣೆಯ ಎಲ್ಲಾ ಅಧಿಕಾರಿ, ಸಿಬಂದಿಗಳಿಗೆ ಮಾಹಿತಿ ಇರಬೇಕು. ಈ ನಿಟ್ಟಿನಲ್ಲಿ ರೌಡಿ ಪೆರೇಡ್ ಸಾಮಾನ್ಯವಾಗಿ ಮಾಡಲಾಗುತ್ತದೆ. ಇತ್ತೀಚೆಗೆ ಸುರತ್ಕಲ್ ಸಮೀಪದ ಗಣೇಶಪುರದಲ್ಲಿ ಚೂರಿ ಇರಿತ ಪ್ರಕರಣವಾಗಿದೆ. ಅಪರಾಧಿಗಳ ಬಂಧನ ಮಾಡಲಾಗಿದೆ. ಇಂತಹ ಘಟನೆ ಮರುಕಳಿಸದಂತೆ ರೌಡಿ ಪೆರೆಡ್ ನಡೆಸಿ ಎಚ್ಚರಿಕೆ ನೀಡಲಾಗಿದೆ. ಪಣಂಬೂರು, ಸುರತ್ಕಲ್, ಬಜಪೆ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಹಿನ್ನಲೆಯ ಸೂಕ್ಷ್ಮ ಪ್ರದೇಶ. ಹೀಗಾಗಿ ಕ್ರಿಮಿನಲ್ ಗಳ ವಿರುದ್ದ ಅಗತ್ಯ ಬಿದ್ದರೆ ರೌಡಿ ಶೀಟ್ ಹಾಕುವ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುವುದು. ಸಮಾಜದಲ್ಲಿ ಶಾಂತಿಯಿಂದ ಬದುಕುವ ಹಳೆ ರೌಡಿಗಳಿದ್ದರೆ ಅವರಿಗೆ ಉತ್ತಮ ಜೀವನ ನಡೆಸಲು ಸಹಕಾರ ನೀಡಲಾಗುವುದು. ಗಾಂಜಾ ಮಾರಾಟ ಸಹಿತ ಅಪರಾಧ ಚಟುವಟಿಕೆಗಳಿಗೂ ಕಡಿವಾಣ ಹಾಕಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದರು.
ಕೃಷ್ಣಾಪುರ-ಕಾಟಿಪಳ್ಳದಲ್ಲಿ ಆಯುಕ್ತರ ಪಥಸಂಚಲನ, ವಾಹನ ತಪಾಸಣೆ
ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನಿಗೆ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿ ಅದೇ ದಿನ ಆರೋಪಿಗಳನ್ನು ಬಂಧಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಿದ ಪೊಲೀಸರ ಕಾರ್ಯಾಚರಣೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿರುವಂತೆಯೇ ಶನಿವಾರ ಸೂಕ್ಷ್ಮ ಪ್ರದೇಶವಾದ ಕಾಟಿಪಳ್ಳ, ಕೃಷ್ಣಾಪುರ, ಸುರತ್ಕಲ್ ಪ್ರದೇಶದ 6 ಕಿ.ಮೀ ವ್ಯಾಪ್ತಿಯಲ್ಲಿ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಪಥ ಸಂಚಲನದಲ್ಲಿ ಭಾಗವಹಿಸಿ ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದರು.