Advertisement

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!

01:33 AM Sep 20, 2024 | Team Udayavani |

ಹೊಸದಿಲ್ಲಿ: ಇನ್ನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ವಿದೇಶಗಳಿಂದ ಬರುವವರಿಗೆ ವಲಸೆ ಪ್ರಕ್ರಿಯೆ ಚಿಟಿಕೆ ಹೊಡೆಯುವಷ್ಟರಲ್ಲಿ ಮುಗಿಯಲಿದೆ. ಹೀಗಾಗಿ, ಈಗಿನ 30 ನಿಮಿಷಕ್ಕಿಂತ ಹೆಚ್ಚು ಬೇಕಾಗಿರುವ ಕಾಲಾವಧಿ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಲಿದೆ. “ಫಾಸ್ಟ್‌ ಟ್ರ್ಯಾಕ್‌ ಇಮಿಗ್ರೇಶನ್‌ ಟ್ರಸ್ಟೆಡ್‌ ಟ್ರಾವೆಲರ್‌ ಪ್ರೊಗ್ರಾಂ(ಎಫ್ಟಿಐ- ಟಿಟಿಪಿ) ಯೋಜನೆಯ ಅನ್ವಯ ಹೊಸ ವ್ಯವಸ್ಥೆ ಜಾರಿಯಾಗಲಿದೆ.

Advertisement

ಸದ್ಯ ಹೊಸದಿಲ್ಲಿ ವಿಮಾನ ನಿಲ್ದಾಣ ದಲ್ಲಿ ಇದನ್ನು ಅಳವಡಿಸಲಾಗಿದೆ. ಬೆಂಗ ಳೂರು, ಮುಂಬಯಿ, ಚೆನ್ನೈ,ಕೋಲ್ಕತಾ, ಹೈದರಾಬಾದ್‌, ಕೊಚ್ಚಿ, ಅಹ್ಮದಾಬಾ ­ದ್‌‑ ವಿಮಾನ ನಿಲ್ದಾಣಗಳಲ್ಲಿ ಅದನ್ನು ಅಳವಡಿಸಲು ಸಿದ್ಧತೆ ನಡೆದಿವೆ. ಅದರ ಜತೆಗೆ ಇನ್ನೂ 21 ವಿಮಾನ ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಲಭ್ಯವಾಗಲಿದೆ.

ಪ್ರಕ್ರಿಯೆಯೇನು?
ಎಫ್ಟಿಐ-ಟಿಟಿಪಿಯನ್ನು ವಲಸೆ ಬ್ಯೂರೋ ಮೂಲಕ ಜಾರಿಗೊಳಿಸ ಲಾಗುತ್ತದೆ. ಅದಕ್ಕಾಗಿ www.ftittp.mha.gov.in ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಬೇಕು. ಜತೆಗೆ ಬೇಕಾಗಿರುವ ವಿವರಗಳನ್ನೂ ನೀಡಬೇಕು. ಅದನ್ನು ವಲಸೆ ಇಲಾಖೆ ಖಚಿತಪಡಿಸಿದ ಬಳಿಕ ಅವರಿಗೆ ಈ ಸೌಲಭ್ಯ ಸಿಗಲಿದೆ. ಆನ್‌ಲೈನ್‌ ಮೂಲಕ ನೋಂದಣಿ ಮಾಡಿಸಿಕೊಂಡ ಪ್ರಯಾಣಿಕರು ಇ- ಗೇಟ್‌ ಸಮೀಪ ಬಂದಾಗ ವಿಮಾನಯಾನ ಕಂಪೆನಿಯಿಂದ ನೀಡಲಾಗಿರುವ ಬೋರ್ಡಿಂಗ್‌ ಪಾಸ್‌ ಅನ್ನು ಸ್ಕ್ಯಾನ್‌ ಮಾಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.