Advertisement
ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯ ಕಡಮಕಲ್ಲು ಮತ್ತು ಕೂಜುಮಲೆ ಎರಡು ರಬ್ಬರ್ ಎಸ್ಟೇಟುಗಳು ಗಾಳಿಬೀಡು ಮತ್ತು ಕಾಲೂರು ಗ್ರಾಮಕ್ಕೆ ಸೇರಿದೆ. ಕಡಮಕಲ್ಲು ಎಸ್ಟೇಟಿನಲ್ಲಿ ಸುಮಾರು 2,800 ಎಕರೆ ಹಾಗೂ ಕೂಜುಮಲೆ ಎಸ್ಟೇಟಿನಲ್ಲಿ 1,200 ಎಕರೆ ವಿಸ್ತಾರದಲ್ಲಿ ರಬ್ಬರ್ ತೋಟವಿದೆ. ಎರಡು ಎಸ್ಟೇಟಿನಲ್ಲಿ 650ಕ್ಕೂ ಅಧಿಕ ಮಂದಿ ಕೂಲಿ ಕಾರ್ಮಿಕರಿದ್ದು ಇವರೆಲ್ಲರೂ ವಲಸಿಗರು. ಕಡಿಮೆ ವೇತನಕ್ಕೆ ಈ ಕಾರ್ಮಿಕರನ್ನು ದುಡಿಸಿಕೊಳ್ಳಲಾಗುತ್ತಿದೆ. ಹಿಂದಿ ಭಾಷಿಗರಾದ ಇವರ ಮೂಲ ವಿಚಾರಿಸಿದರೆ ಜಾರ್ಖಂಡ್, ಅಸ್ಸಾಂ, ಒರಿಸ್ಸ, ಛತ್ತಿಸ್‌ಘಡ ಎಂದೆಲ್ಲ ಹೇಳುತ್ತಾರೆ.
ಉತ್ತರ ಭಾರತದಿಂದ ವಲಸೆ ಬಂದ ಈ ಕಾರ್ಮಿಕರು ಬಹುತೇಕ ಅಕ್ರಮ ಬಾಂಗ್ಲಾ ದೇಶೀಯರು ಆಗಿರುವ ಸಾಧ್ಯತೆ ಹೆಚ್ಚಿದೆ. ಮುಸ್ಲಿಂ, ಹಿಂದೂ ಸಮುದಾಯದ ಇವರಲ್ಲಿ ಹೆಚ್ಚಿನವರೆಲ್ಲರೂ 18 ವರ್ಷ ವಯೋಮಿತಿಯ ಒಳಗಿನವರು. ದಾಖಲೆ ತೋರಿಸಲು ಹಿಂದೇಟು
ಗುರುತಿನ ಚೀಟಿ, ಅಧಾರ್ ಕಾರ್ಡು, ಪಡಿತರ ಚೀಟಿ ಇದೆ ಎನ್ನುವ ಇವರು, ಅದನ್ನು ತೋರಿಸಲು ಹಿಂದೇಟು ಹಾಕುತ್ತಾರೆ. ದಾಖಲೆ ಪರಿಶೀಲಿಸಿದ ವೇಳೆ ಒಂದೊಂದರಲ್ಲಿ ಒಂದೊಂದು ರಾಜ್ಯದ ವಿಳಾಸವಿರುವುದು ಬೆಳಕಿಗೆ ಬಂದಿದೆ. ಅವರ ಬ್ಯಾಂಕಿನ ಖಾತೆ ಎಸ್ಟೇಟ್ ಮ್ಯಾನೇಜರ್‌ನ ವಿಳಾಸ ಹೊಂದಿದೆ.
Related Articles
ಕಂಪೆನಿ ಅಡ್ಡದಾರಿಯಲ್ಲಿ ಕಾನೂನು ಮೀರಿ ಲೀಸ್ ಅವಧಿ ಮುಂದುವರೆಸಿದೆ. ಅರಣ್ಯ ಒತ್ತುವರಿ ಮಾಡಿರುವುದು ಸ್ಪಷ್ಟ. ಜತೆಗೆ ಅಕ್ರಮ ಬಾಂಗ್ಲಾ ನಿವಾಸಿಗರು ಇಲ್ಲಿರುವ ಸಾಧ್ಯತೆಯೂ ಇದೆ. ಮಾನವ ಹಕ್ಕು ಉಲ್ಲಂಘನೆ ಜತೆ ಮಕ್ಕಳ ಶೈಕ್ಷಣಿಕ ಹಕ್ಕನ್ನು ಇಲ್ಲಿ ಕಸಿದುಕೊಳ್ಳಲಾಗಿದೆ. ಈ ಕುರಿತು ತನಿಖೆಯಾಗಬೇಕು.
- ಪ್ರದೀಪ್ ಕುಮಾರ್ ಕೆ.ಎಲ್.,
ನ್ಯಾಯವಾದಿ
Advertisement
ಬಾಲಕೃಷ್ಣ ಭೀಮಗುಳಿ