ಹುಣಸಗಿ: ಸಾರ್ವಜನಿಕರು ಈಗಾಗಲೇ ವಿವಿಧ ಸಮಸ್ಯೆಗಳ ಕುರಿತು 52 ಅರ್ಜಿಗಳು ಸಲ್ಲಿಸಿದ್ದು, ಇವುಗಳನ್ನು ತಕ್ಷಣ ಪರಿಹರಿಸುವುದಾಗಿ ತಹಶೀಲ್ದಾರ್ ಅಶೋಕ ಸುರಪುರಕರ್ ಹೇಳಿದರು.
ತಾಲೂಕಿನ ಮಾಳನೂರ ಗ್ರಾಪಂ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರಿ ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎಂಬ ಕಾರ್ಯಕ್ರಮ ರೂಪಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಂದಾಯ ಇಲಾಖೆ 40, ಕ್ಷೇತ್ರ ಶಿಕ್ಷಣ ಇಲಾಖೆ 3, ಜೆಸ್ಕಾಂ 2, ಪಂಚಾಯತ್ ರಾಜ್ಯ ಇಲಾಖೆ 3, ಆರೋಗ್ಯ ಇಲಾಖೆ 1, ಸಮಾಜ ಕಲ್ಯಾಣ 1, ಲೀಡ್ ಬ್ಯಾಂಕ್ 1, ಸಾರಿಗೆ ಇಲಾಖೆ 1 ಸೇರಿದಂತೆ ಒಟ್ಟು 52 ಅರ್ಜಿಗಳು ಸಾರ್ವಜನಿಕರಿಂದ ಸಲ್ಲಿಕೆಯಾಗಿದ್ದವು.
Related Articles
ಈ ಸಂದರ್ಭ ಗ್ರೇಡ್-2 ತಹಶೀಲ್ದಾರ್ ಮಹಾದೇವಪ್ಪಗೌಡ ಬಿರಾದಾರ, ತಾಪಂ ಇಒ ಬಸವರಾಜ, ಸಹಾಯಕ ಕೃಷಿ ಅಧಿಕಾರಿ ರಾಮನಗೌಡ, ಗ್ರಾಪಂ ಅಧ್ಯಕ್ಷೆ ಸಂಗವ್ವ ಚಲುವಾದಿ, ಬಸವರಾಜ ಬಿರಾದಾರ, ಪಿಡಿಒ ಬಸವಣ್ಣಯ್ಯ ಉಮಚಿಮಠ, ಸದಸ್ಯರಾದ ಪರಪ್ಪ ಕರಿಗೌಡರ, ಸಂಗಣ್ಣ ಹೊಸಮನಿ ಸೇರಿದಂತೆ ಇತರರಿದ್ದರು.